Breaking News

ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ….

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ನಗರದ ದುರ್ಗದಬೈಲ್, ಜನತಾ ಬಜಾರ ಹಾಗೂ ಹಳೇ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಸಂಭ್ರಮ ಕಳೆಗಟ್ಟಿದೆ.ಎತ್ತ ನೋಡಿದರೂ ಆಕರ್ಷಿಸುವ ತರಹೇವಾರಿ ಆಕಾಶ ಬುಟ್ಟಿಗಳು, ಗಮನ ಸೆಳೆಯುವ ವಿದ್ಯುತ್ ದೀಪಗಳು, ವಾಸನೆ ಬೀರದಿದ್ದರೂ ಖರೀದಿಗೆ ಪ್ರೇರೆಪಿಸುವ ಪ್ಲ್ಯಾಸ್ಟಿಕ್ ಹೂಗಳು, ಅಂಗಳ ಅಂದಗೊಳಿಸುವ ಬಣ್ಣ ಬಣ್ಣದ ರಂಗೋಲಿ, ಹೀಗೆ ಹತ್ತು ಹಲವು ಆಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಜನ ಖರೀದಿಯಲ್ಲಿ ತೊಡಗಿದ್ದಾರೆ.ಪ್ರತಿ ವರ್ಷದಂತೆ ದೀಪಾವಳಿ ಹಬ್ಬಕ್ಕೆ ಹತ್ತು ದಿನಕ್ಕೂ ಮೊದಲೇ ದುರ್ಗದ ಬೈಲ್‍ನ ಕೇಂದ್ರ ವೃತ್ತದಲ್ಲಿ ಹತ್ತಾರು ಮಳಿಗೆಗಳನ್ನು ಹಾಕಲಾಗಿದೆ. ಅದರ ಎದುರು ಮಣ್ಣಿನ ಹಣತೆ, ಗಾಜಿನ ಹಣತೆ ಸೇರಿ ವಿಭಿನ್ನ ವಿನ್ಯಾಸದ ದೀಪ ಬೆಳಗಿಸುವ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಜೊತೆಗೆ ಸುಗಂಧ ಬೀರುವ ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಗುಲಾಬಿ, ಸೂರ್ಯಕಾಂತಿ ಹೀಗೆ ತರಹೇವಾರಿ ಹೂಗಳು ಗ್ರಾಹಕರನ್ನು ಸೆಳೆಯುತ್ತಿವೆ.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *