ನವಲಗುಂದ: ತಾಲೂಕಿನಲ್ಲಿ ಹಾದು ಹೋಗಿರುವ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ತಾಂತ್ರಿಕ ವಿಭಾಗದ ಮುಖ್ಯ ಅಂಭಿಯಂತರ ಜಿ.ಮಹೇಶ ನೇತೃತ್ವದ ತಂಡ ಬೆಳವಟಗಿ ಪಾರ್ಮ ಹತ್ತಿರ ಹೆದ್ದಾರಿ ಕಾಮಗಾರಿಗೆ ಬಳಿಸಿದ ಕಡಿ, ಮಣ್ಣಿನ ಸೇರಿ ಇನ್ನಿತರೇ ಸಾಮಗ್ರಿಗಳನ್ನು ಜೆಸಿಬಿ ಮೂಲಕ ಅಗೆದು ಧಾರವಾಡದ ಕ್ವಾಲಟಿ ಕಂಟ್ರೋಲ ಕಚೇರಿಗೆ ಪರೀಕ್ಷೆ ಮಾಡಲು ಕಳುಹಿಸಿದ್ದಾರೆ.
ಈ ಕುರಿತು ತಾಲ್ಲೂಕಿನ ಗುಡಿಸಾಗರ ಗ್ರಾಮದ ವಿರುಪಾಕ್ಷಿಗೌಡ ಕುಲಕರ್ಣಿ ಎಂಬುರು 2019ನೇ ಸಾಲಿನಲ್ಲಿಯೇ ಅಂದಾಜು ಪತ್ರಿಕೆ ಪ್ರಕಾರ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿಲ್ಲ ಹಾಗೂ ಕಾಮಗಾರಿ ನಡೆಯುತ್ತಿರುವ ವೇಳೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸದೆ ಇರುವುದರಿಂದ ಹಲವಾರು ಅಪಘಾತಗಳು ಸಂಭವಿಸಿವೆ ಎಂದು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.ಈ ಕಾರ್ಯಚರಣೆಯಲ್ಲಿ ಎಇಇ ಸಂತೋಷ ಕಾಟ, ಎಸ್.ಎಂ.ಡಿಸ್ಕ್, ಕೆ.ಎಂ ರಾಜು, ಆನಂದ ಅಮಿನಾಳ, ಡಿ. ರಾಜೇಂದ್ರ ಮತ್ತಿತರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





