KGF’ ಸರಣಿ ಸಿನಿಮಾಗಳು ಬಂದು ಹೋಗಿ ಒಂದೂವರೆ ವರ್ಷ ಕಳೆದರು ರಾಕಿಭಾಯ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಅಭಿಮಾನಿಗಳು ಯಶ್19 ಅಪ್‌ಡೇಟ್‌ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ರಾಕಿಂಗ್ ಸ್ಟಾರ್ ಮಾತ್ರ ತಮ್ಮ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಮೌನ ಮುಂದುವರೆಸಿದ್ದಾರೆ.ಸದ್ಯ ಹೊಂಬಾಳೆ ಸಂಸ್ಥೆಯ ‘ಸಲಾರ್’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಯಶ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ‘ಸಲಾರ್’ ಹಾಗೂ ‘KGF’ ಸರಣಿಗೆ ಲಿಂಕ್ ಇದೆ. ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಎರಡೂ ಸಿನಿಮಾಗಳು ಬರ್ತಾವೆ ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ.
ಕನ್ನಡದ ಹೆಮ್ಮೆ ‘KGF’ ಚಿತ್ರವನ್ನು ಪರಭಾಷಾ ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದರು. ಅಷ್ಟೇ ಅಲ್ಲ ಪರಭಾಷಾ ಸ್ಟಾರ್ ಫಿಲ್ಮ್ ಮೇಕರ್ಸ್ ಕೂಡ ನೀಲ್ ಕತೆಗೆ ಫಿದಾ ಆಗೋಗಿದ್ದರು. ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮನ್ಸ್‌ಗೆ ಅಭಿಮಾನಿಗಳಾಗಿಬಿಟ್ಟಿದ್ದರು. ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಬಾಲಿವುಡ್ ಮಂದಿ ಕೂಡ ಯಶ್ ನಟನೆಗೆ ಬಹುಪರಾಕ್ ಎಂದಿದ್ದರು. ಇದೀಗ ಕರೀನಾ ಕಪೂರ್ ‘KGF’ ಸಿನಿಮಾ ಹಾಗೂ ಯಶ್ ಬಗ್ಗೆ ಮಾತನಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




