Breaking News

ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ…

ಬೆಂಗಳೂರು: ಕನಕಪುರದಲ್ಲಿ ಸುಮಾರು ಮೂರು ದಶಕಗಳ ಕಾಲ ದಬ್ಬಾಳಿಕೆ ನಡೆಸಿ ಜಗೀರನ್ನಾಗಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಕರ್ನಾಟಕ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬರಗಾಲದ ಸಂದರ್ಭದಲ್ಲೂ ಪ್ರಾಧಿಕಾರಗಳ ನಿರ್ದೇಶನ ಮೇರೆಗೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇತ್ತ ಉಪಮುಖ್ಯಮಂತ್ರಿ ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿಯೇ ನೀರಿಗೆ ಹಾಹಾಕಾರ ಎದ್ದಿದೆ. ಈ ಕುರಿತು ರಾಜ್ಯ ಬಿಜೆಪಿಯು ಟ್ವೀಟ್ ಮಾಡಿ ಖಾರವಾಗಿ ಪ್ರತಿಕ್ರಿಯಿಸಿದೆ. ಸರ್ಕಾರದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿರುವ ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಪಿಕ್ನಿಕ್ ಮಾಡುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ‘ಕನಕಪುರಕ್ಕೆ ಮಾರಿ, ಸ್ಟಾಲಿನ್ ನಾಡಿಗೆ ಉಪಕಾರಿ’ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಜರಿದಿದೆ.

Share News

About BigTv News

Check Also

ಸಂಚಾರ ನಿಯಮ ಉಲ್ಲಂಘಿಸಿದ್ರೆ ಕೇಸ್ ಫಿಕ್ಸ್! 100% ಪ್ರಕರಣ ದಾಖಲಿಸಲು ಪೊಲೀಸರಿಗೆ ಖಡಕ್ ಸೂಚನೆ..

ಆಗಸ್ಟ್‌ನಲ್ಲಿ 100% ಸಾಧನೆ ಇಲ್ಲ! ಸಂಚಾರ ಪೊಲೀಸರಿಗೆ ಮೇಲಧಿಕಾರಿಗಳ ಖಡಕ್ ವಾರ್ನಿಂಗ್.. ನಿಯಮ ಉಲ್ಲಂಘನೆ ಕಂಡ್ರೆ ಕೇಸ್ ದಾಖಲಿಸಿ! ಪೊಲೀಸರಿಗೆ …

Leave a Reply

Your email address will not be published. Required fields are marked *