Breaking News

ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿರುವ ಈ ಹಡಗು ಸದ್ಯ ಯೆಮೆನ್‌ನ ಹೊಡೆಡಾ ಬಂದರು ಪ್ರದೇಶದಲ್ಲಿದೆ ಎಂದು ಹಡಗಿನ ಮಾಲೀಕರು ಹೇಳಿದ್ದಾರೆ…

ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್‌ಗೆ ಸೇರಿದ ಸರಕು ಸಾಗಾಣಿಕೆ ಹಡಗು ‘ಗ್ಯಾಲಕ್ಸಿ ಲೀಡರ್’ ಅನ್ನು ಎಮೆನ್ ದೇಶದ ಹೌತಿ ಬಂಡುಕೋರರು ಅಪಹರಿಸಿದ್ದರು. ಈಗ ಹಡಗು ಅಪಹರಿಸಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿರುವ ಈ ಹಡಗು ಸದ್ಯ ಯೆಮೆನ್‌ನ ಹೊಡೆಡಾ ಬಂದರು ಪ್ರದೇಶದಲ್ಲಿದೆ ಎಂದು ಹಡಗಿನ ಮಾಲೀಕರು ಹೇಳಿದ್ದಾರೆ. ಈ ದೊಡ್ಡ ಹಡಗನ್ನು ಹೇಗೆ ಅಪಹರಿಸಲಾಯಿತು ಎನ್ನುವ ವಿಡಿಯೋ ಬಿಡುಗಡೆ ಮಾಡಿದ್ದು, ಯಾವ ಸಿನಿಮಾ ದೃಶ್ಯಗಳಿಗೂ ಕಡಿಮೆ ಇಲ್ಲ ಎನ್ನುವಂತಿದೆ. ಹಡಗಿನೊಂದಿಗೆ ಎಲ್ಲಾ ಸಂವಹನಗಳು ಕಳೆದುಹೋಗಿವೆ ಎಂದು ಪ್ಯೂರ್ ಕಾರ್ ಕ್ಯಾರಿಯರ್ ಗ್ಯಾಲಕ್ಸಿ ಲೀಡರ್‌ನ ಮಾಲೀಕ ಐಲ್ ಆಫ್ ಮ್ಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಂಪನಿಯು, ಶಿಪ್ಪಿಂಗ್ ಕಾಳಜಿಯಂತೆ, ರಾಜಕೀಯ ಅಥವಾ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಹೇಳಿಕೆಯನ್ನು ನೀಡಿಲ್ಲ.

Share News

About BigTv News

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *