Breaking News

ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲು ಟೀಮ್ ಇಂಡಿಯಾದ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಗೆ ನೊವಾಗಿದೆ….

ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈ ನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲು ಭಾರತೀಯ ಅಭಿಮಾನಿಗಳನ್ನು ಸುದೀರ್ಘವಾಗಿ ಕಾಡಲಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೂ ಈ ಆಘಾತದಿಂದ ಹೊರಬರಲು ಕೆಲ ಸಮಯಗಳೇ ಬೇಕಾಗಿದೆ. ಈ ಆಘಾತಕಾರಿ ಸೋಲಿನ ನಾಲ್ಕು ದಿಬಗಳ ಬಳಿಕ ಟೀಮ್ ಇಂಡಿಯಾದ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಡಾಂಗಣ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು. ಇದೀಗ ಕೆಎಲ್ ರಾಹುಲ್ ‘ಎಕ್ಸ್‌’ನಲ್ಲಿ ಪೋಸ್ಟ್ ಹಾಕಿದ್ದಾರೆ. ಪಂದ್ಯದ ಕೆಲ ಫೋಟೋಗಳೊಂದಿಗೆ ಕೆಎಲ್ ರಾಹುಲ್, “ಇನ್ನೂ ನೋವಿದೆ” ಎಂದು ಬರೆದುಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣಕ್ಕಾಗಿ ರಾಹುಲ್ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ. ಈ ಪಂದ್ಯದಲ್ಲಿ 107 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 66 ರನ್‌ಗಳನ್ನು ಬಾರಿಸಿದ್ದರು. 49 ಡಾಟ್ ಬಾಲ್‌ಗಳನ್ನು ಆಡಿದ್ದ ಅವರು 52 ಸಿಂಗಲ್ ಹಾಗೂ 5 ಡಬಲ್ಸ್ ಆಡಿದ್ದರು.

Share News

About BigTv News

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *