ಧಾರವಾಡ 27 : ಭಾರತೀಯ ಸೇನೆಯ 63 ರಾಷ್ಟ್ರೀಯ ರೈಫಲ್ ನ ಯುವ ವೀರಯೋಧ ಕ್ಯಾಪ್ಟನ್ ಎಂ ವ್ಹಿ ಪ್ರಾಂಜಲ್ ಹಾಗೂ ಇತರ ವೀರಯೋಧರು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಪಾಕಿಸ್ತಾನಿಯ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿ ಭಾರತಮಾತೆಯ ಮಡಿಲಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ , ಅಗಲಿದ ವೀರಯೋಧರಿಗೆ ವೀರ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು ಧಾರವಾಡದ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಕಾರ್ಗಿಲ್ ಸ್ಥೂಪದ ಹತ್ತಿರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸದಾನಂದ ಡಂಗನವರ ಮಾತನಾಡಿ ದೇಶದಲ್ಲಿ ಶಾಂತಿ ಸುರಕ್ಷತೆ ಕಾಪಾಡಲು ನಮ್ಮ ದೇಶದ ಸೈನಿಕರು 24 ಗಂಟೆ ಜಾಗೃತರಾಗಿ ಕಾರ್ಯನಿರ್ವಹಿಸಿ ನಾಗರಿಕರ ರಕ್ಷಣೆ ಮತ್ತು ಶಾಂತಿ ನೆಲೆಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಉದಯ ಯಂಡಿಗೇರಿ ಮಾತನಾಡಿ ನಾಗರಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕರ್ನಾಟಕದ ಎಂ ವ್ಹಿ ಪ್ರಾಂಜಲ್ ಹಾಗೂ ಇತರ ಸೈನಿಕರ ತ್ಯಾಗ ಬಲಿದಾನ ಮರೆಯಬಾರದು ಎಂದು ಹೇಳಿದರು. ಉಗ್ರಗಾಮಿಗಳ ಮಟ್ಟ ಹಾಕಲು ನಮ್ಮ ಗುಪ್ತಚರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಕುರಿತು ಹೇಳಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪೋಲೀಸ್ ಬ್ಯಾಂಡ್ ವಾದ್ಯ ನುಡಿಸುವ ಮೂಲಕ ಗೌರವ ಸೂಚಿಸಿದರು ಮತ್ತು ಅಲ್ಲಿದ್ದ ಗಣ್ಯರು, ಮಾಜಿ ಸೈನಿಕರು, ಸಾರ್ವಜನಿಕರಿಗೆ ಸ್ಪೂರ್ತಿದಾಯಕವಾಯಿತು. ಈ ಭಾರತ ಮಾತೆಯ ಪುತ್ರರನ್ನು ನೆನೆಯಲು ಕಾರ್ಗಿಲ್ ಸ್ತೂಪದಲ್ಲಿ ಸೇರಿ ಗೌರವ ಸಲ್ಲಿಸಲಾಯಿತು. ಚಂದ್ರಶೇಖರ ಅಮೀನಗಡ, ಬಸವರಾಜ ತಾಳಿಕೋಟಿ, , ಮತಿ ಅಮೀನಗಡ, ಪಾರ್ವತಿ ಹಾಲಭಾವಿ, ಪಾಟೀಲ, ಸುರೇಶ್ ಹಾಲಭಾವಿ ಧಾರವಾಡ ಜಿಲ್ಲಾ ಪೋಲೀಸ್ ಬ್ಯಾಂಡ್ ಹಾಗೂ ಇತರ ಮಾಜಿ ಸೈನಿಕರು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





