ಧಾರವಾಡ: ಮನೆಯ ಬೀಗಮುರಿದು ಮನೆಯಲ್ಲಿದ ನಗ ನಾಣ್ಯಗಳನ್ನು ದೋಚ್ಚುತ್ತಿದ್ದ ಖದೀಮ ಕಳ್ಳನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಜಾವರ್ ಮಹ್ಮದ್ ರಫೀಕ್ ಸೌದಾಗರ ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಜುಲೈ 20ರಂದು ರಾಜೀವ ಗಾಂಧಿನಗರದಲ್ಲಿ ಮನೆಯೊಂದರ ಕೀ ಮುರಿದು, ಮನೆಯಲ್ಲಿ ಬಂಗಾರ ಬೆಳ್ಳಿ ಹಾಗೂ ನಗದು ಕಳ್ಳತನವಾಗಿತ್ತು. ಈ ಕುರಿತು ಮಾಲೀಕರು ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕಿ ಕಳ್ಳನ ಬಂಧನಕ್ಕೆ ಕ್ರಮ ಕೈಗೊಂಡಿದ್ದರು. ಆರೋಪಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈಗ ಓರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ. ಇನ್ನೂ ಬಂಧಿತನಿಂದ 2ಲಕ್ಷ 38ಸಾವಿರ 500 ರೂಪಾಯಿ ಕಿಮ್ಮತ್ತಿನ 38 ಗ್ರಾಂ ಬಂಗಾರ, 220ಗ್ರಾಂ ಬೆಳ್ಳಿ ಹಾಗೂ 5,300ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಈಗ ಆರೋಪಿ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಬಂಧಿತನನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





