ದೇಶಾದ್ಯಂತ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲುಗಳು ಸೆಮಿ-ಹೈಸ್ವೀಡ್ ರೈಲುಗಳಾಗಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಇದೀಗ, ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸಲು ಈ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ರೈಲನ್ನು ಪರಿಚಯಿಸಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷ ರೈಲು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ (Dr MGR Chennai Central) ಮತ್ತು ಮೈಸೂರು ಜಂಕ್ಷನ್ (Mysuru Junction) ನಡುವೆ ಸಂಚರಿಸಲಿದ್ದು, ದಕ್ಷಿಣ ರೈಲ್ವೆ (Southern Railway) ಈ ರೈಲನ್ನು ನಿರ್ವಹಣೆ ಮಾಡಲಿದೆ. ಇದು ಚೆನ್ನೈ ಸೆಂಟ್ರಲ್-ಮೈಸೂರು ಮಾರ್ಗದಲ್ಲಿ ರೈಲು ಸಂಖ್ಯೆ 06037 ಹಾಗೂ ಮೈಸೂರು-ಚೆನ್ನೈ ಸೆಂಟ್ರಲ್ ಮಾರ್ಗದಲ್ಲಿ ರೈಲು ಸಂಖ್ಯೆ 06038 ಅನ್ನು ಹೊಂದಿರಲಿದೆ.
ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷ ರೈಲು, ಇವೆರೆಡು ನಗರಗಳ ನಡುವಿನ 500 ಕಿಲೋಮೀಟರ್ ಅಂತರವನ್ನು 6.30 ಗಂಟೆಗೆ ಕ್ರಮಿಸಲಿದೆ. ಮೈಸೂರು ಎಕ್ಸ್ಪ್ರೆಸ್ (Mysuru Express), ಕಾವೇರಿ ಎಕ್ಸ್ಪ್ರೆಸ್ (Kaveri Express) ನಂತರ ಈ ಮಾರ್ಗದಲ್ಲಿ ವಂದೇ ಭಾರತ್ ಅತ್ಯಂತ ವೇಗದಲ್ಲಿ ಸಂಚಾರಲಿದೆ. ಇವೆರೆಡು ಎಕ್ಸ್ಪ್ರೆಸ್ ರೈಲುಗಳು ಇದೇ ದೂರವನ್ನು ಕ್ರಮಿಸಲು 09:15 – 09:25 ಗಂಟೆ ತೆಗೆದುಕೊಳ್ಳುತ್ತವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





