ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಗೆ ‘ಪಲ್ಲಕ್ಕಿ’ ಹೆಸರಿನ ನೂತನ ಸ್ಲೀಪರ್ ಮಾದರಿಯ ನಾನ್ ಎಸಿ ಬಸ್ ಸೇರ್ಪಡೆಯಾಗಲಿದೆ. ಇದರ ಜೊತೆಗೆ ಐಷಾರಾಮಿ 4 ‘ಅಂಬಾರಿ ಉತ್ಸವ’ ಬಸ್‌ಗಳು ಸೇರಲಿವೆ.ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಯುರೋಪಿಯನ್ ಮಾದರಿಯ ಮಲ್ಟಿ ಆಕ್ಸೆಲ್ ಹವಾನಿಯಂತ್ರಣ ಸಹಿತ ಸ್ಲೀಪರ್ ಬಸ್‌ಗಳು ಸಂಸ್ಥೆಗೆ ಸೇರಲಿವೆ. ಆದರೆ ಯಾವ ಮಾರ್ಗದಲ್ಲಿ ಈ ಬಸ್ ಸಂಚಾರ ನಡೆಸಲಿವೆ ಎಂಬುದು ಇನ್ನೂ ಅಂತಿಮವಾಗಿಲ್ಲ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಸೆಲ್ವಂ ಅಂಬಾರಿ ಉತ್ಸವ ಮಾದರಿಯ 4 ಬಸ್‌ಗಳ ಖರೀದಿಗೆ ಟೆಂಡರ್ ಕರೆದಿರುವುದನ್ನು ಖಚಿತಪಡಿಸಿದ್ದಾರೆ. ಇದರ ಜೊತೆಗೆ NWKRTCಗೆ 20 ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಸಹ ಖರೀದಿ ಮಾಡಲಿದೆ. ಇದಕ್ಕೆ ಸುಮಾರು 9 ಕೋಟಿ ವೆಚ್ಚವಾಗಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಡಿಸೆಂಬರ್ 11 ಕೊನೆಯ ದಿನವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





