Breaking News

ಕಾರು ಹಾಗೂ ಬಿಎಂಟಿಸಿ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಹೊತ್ತಿ ಉರಿದ ಘಟನೆ ನಡೆದಿದೆ….

ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರು ಹಾಗೂ ಬಿಎಂಟಿಸಿ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಹೊತ್ತಿ ಉರಿದ ಘಟನೆ ಬೆಂಗಳೂರಿನ ನಾಯಂಡಳ್ಳಿ ಸಮೀಪದ ರಿಂಗ್‌ರೋಡ್‌ನಲ್ಲಿ ನಡೆದಿದೆ.ಬಿಎಂಟಿಸಿ ಬಸ್‌ ರಿಂಗ್‌ರೋಡ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಈ ವೇಳೆ ನಿಂತಿದ್ದ ಬಸ್‌ಗೆ ವೇಗವಾಗಿ ಬಂದ i20 ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರು ಚಾಲಕ ಹೊರ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೋಡ ನೋಡುತ್ತಿದ್ದಂತೆ ಕಾರು ಬೆಂಕಿ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಬಿಎಂಟಿಸಿ ಬಸ್‌ಗೂ ಹಾನಿಯಾಗಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Share News

About BigTv News

Check Also

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು …

Leave a Reply

Your email address will not be published. Required fields are marked *