ಮನೆಯಿಂದಲೇ ಕೆಲಸ ನೀಡುವ ಆಮಿಷವೊಡ್ಡಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೆಟಿಂಗ್’ ಸಂಸ್ಥೆ ರಾಜ್ಯದ ಸಾವಿರಾರು ಜನರಿಂದ ₹860 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ 400ಕ್ಕೂ ಹೆಚ್ಚು ಜನರು ₹70 ಕೋಟಿ ಕಳೆದುಕೊಂಡಿದ್ದು, ಕಳೆದ ಮೂರು ತಿಂಗಳಿಂದ ವೇತನ ಹಾಗೂ ಹೂಡಿಕೆ ಹಣ ವಾಪಸ್ ಸಿಗುತ್ತಿಲ್ಲ ಎಂದು ಹೂಡಿಕೆದಾರರು ದೂರು ನೀಡಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕರು ನಾಪತ್ತೆಯಾಗಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

