ನವದೆಹಲಿ: ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಕ್ರಾಶ್ ಆಗಿ ಪತನಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಅಪಘಾತದ ಕಾರಣವೇನೆಂದು ತಿಳಿದುಕೊಳ್ಳು ತನಿಖೆಗೆ ಆದೇಶಿಸಲಾಗಿದೆ. ಅಪಘಾತ ಸಂಭವಿಸುವ ಮೊದಲು ಈ ವಿಮಾನವು ಎಂದಿನಂತೆ ತರಬೇತಿಗಾಗಿ ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (AFA) ತೆರಳಿತ್ತು. ವಿಮಾನ ಪತನಗೊಂಡಾಗ ಒಬ್ಬ ತರಬೇತುದಾರ ಮತ್ತು ತರಬೇತಿ ಪೈಲಟ್ ವಿಮಾನದೊಳಗೆ ಇದ್ದರು. ಘಟನೆಯಲ್ಲಿ ಅವರಿಬ್ಬರು ಮೃತಪಟ್ಟಿದ್ದಾರೆ.ಹೈದರಾಬಾದ್‌ನ ಎಎಫ್‌ಎ ತರಬೇತಿಯ ಸಮಯದಲ್ಲಿ ಪಿಲಾಟಸ್ ಪಿಸಿ 7 ಎಂಕೆ II ವಿಮಾನವು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮಾರಣಾಂತಿಕವಾಗಿ ಗಾಯಗೊಂಡಿದ್ದರು ಎಂದು ಐಎಎಫ್ ಮಾಹಿತಿ ನೀಡಿದೆ. ಈ ವಿಷಯವನ್ನು ಭಾರತೀಯ ವಾಯುಪಡೆಯು X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





