Breaking News

I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಎಂದು ರಾಜ್ಯ ಬಿಜೆಪಿ ಟ್ವೀಟ್‌….

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಕಂಡಿದ್ದು, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಕಿಡಿಕಾರಿದೆ. ದೇಶದ ಜನತೆಗೆ ಅಭಿವೃದ್ಧಿಯೊಂದಿಗೆ ಭಾರತದ ಕೀರ್ತಿ ಪತಾಕೆ ಹಾರಿಸುವವರು ಬೇಕಾಗಿದ್ದಾರೆ. ಭಾರತ್ ತೋಡೋ ಮಾಡುವವರು ಬೇಕಿಲ್ಲ..! ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಸಲಿ ಗ್ಯಾರಂಟಿ ಎದುರು ಚೆಲ್ಲಾಪಿಲ್ಲಿ ಯಾದ I.N.D.I. ಮೈತ್ರಿಕೂಟ ಎಂದು ಕಾಂಗ್ರೆಸ್‌ ವಿರುದ್ದ ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದೆ.

ಇನ್ನೋಂದು ಟ್ವೀಟ್‌ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್‌ ದ ದಲಿತ ವಿರೋಧಿ ದರ್ಬಾರ್ ಮಿತಿ ಮೀರಿದೆ. ಬಿಜೆಪಿ ಎಸ್‌ಸಿ ಮೋರ್ಚಾದ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ಚನ್ನರಾಜ್ ಹಟ್ಟಿಹೊಳಿ ಆಪ್ತರ ಪಡೆ ಹಲ್ಲೆ ನಡೆಸಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯ ಮುಂದುವರಿದ ಭಾಗ. ಪೊಲೀಸರು ಸುದೀರ್ಘ ಅವಧಿಯವರೆಗೆ ಪ್ರಕರಣ ದಾಖಲಿಸದಿರುವುದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಎಷ್ಟು ಹದಗೆಟ್ಟಿದೆ‌ ಎಂಬುದನ್ನು ತೋರಿಸುತ್ತದೆ.

Share News

About BigTv News

Check Also

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! …

Leave a Reply

Your email address will not be published. Required fields are marked *