ಹುಬ್ಬಳ್ಳಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಬಿಜೆಪಿ ಶಾಸಕರು ಭಾಗಿಯಾದ ವಿಚಾರವಾಗಿ ಪ್ರಲ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಮಾತನಾಡಿದರು.ನಾಳೆ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ.ಶಾಸಕರಿಗೆ ಏನಾದರೂ ವಿವರಣೆ ಕೇಳಬೇಕಾ ಅಥವಾ ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ.
ಕಾಂಗ್ರೆಸ್ ಪರಿಸ್ಥಿತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ ಅವರಲ್ಲೇ ಆಂತರಿಕ ಕಚ್ಚಾಟ ಕೂಡಾ ನಡೆದಿದೆ.ಈಗ ಇದ್ದವರಿಗೆ ಸಚಿವ ಸ್ಥಾನ ಕೊಡುವುದಕ್ಕೆ ಕಾಂಗ್ರೆಸ್ ನವರಿಗೆ ಆಗುವುದಿಲ್ಲ,ನನಗೆ ಮುಖ್ಯ ಮಂತ್ರಿ ಮಾಡಿಲ್ಲ, ನಿನಗೆ ಸಚಿವ ಮಾಡಿಲ್ಲ, ನಿಗಮ ಮಂಡಳಿ ಕೊಟ್ಟಿಲ್ಲ ಅಂತ ಜಗಳ ಶುರುವಾಗಿದೆ.ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ.ಸದ್ಯ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 20- 22 ಸೀಟ್ ಬಿಜೆಪಿ ಗೆಲುವಿನ ಫಲಿತಾಂಶ ಹೊರಬಿದ್ದಿದೆ.ಬಿಜೆಪಿ ಸಿದ್ಧಾಂತ ಒಪ್ಪದ ಮಾಧ್ಯಮಗಳ ಸಮೀಕ್ಷೆಯಲ್ಲಿ ಬಿಜೆಪಿ ವಾಪಸು ಅಧಿಕಾರಕ್ಕೆ ಬರೋದೂ ಪಕ್ಕಾ ಆಗಿದೆ,ನಾವು ಅಂದ್ರೆ ಬಿಜೆಪಿ 25 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಕೆಲವು ಸಂಧರ್ಭದಲ್ಲಿ ನಾವು ತೆಗೆದುಕೊಂಡ ನಿರ್ಧಾರದಿಂದ ಕರ್ನಾಟಕದಲ್ಲಿ ಸೋತ್ತಿದ್ದೇವೆ ಹೊರುತು ಮೆತ್ತೆನಿಲ್ಲ.ಆದರೆ ಈಗಾಗಲೇ ಕಾಂಗ್ರೆಸ್ ಡೌನ್ ಫಾಲ್ ಶುರುವಾಗಿದೆ.136 ಶಾಸಕರುಗಳಿಗೆ ಸ್ಥಾನ ನೀಡಲು ಕಾಂಗ್ರೆಸ್ ಗೆ ಜಾಗನೂ ಇಲ್ಲ, ಸಮಯನೂ ಇಲ್ಲ, ಅವಧಾನ ಇಲ್ಲ.ಡಿಕೆ ಶಿವಕುಮಾರ್ ಸುಮ್ಮನೆ ಹೇಳುತ್ತಾರೆ ಕಾಂಗ್ರೆಸ್ ಗೆ ಬರುವವರನ್ನು ತೆಗೆದುಕೊಳ್ಳಲು ಅವರಿಗೂ ಆಗಲ್ಲ ಎಂದರು.ಬೇರೆಯವರನ್ನು ಪಕ್ಷಕ್ಕೆ ಕರೆದುಕೊಂಡ್ರೆ ನಾವು ಪಕ್ಷದಿಂದ ಹೊರ ಹೋಗುತ್ತೇವೆ ಅಂತ ಕಾಂಗ್ರೆಸ್ ಶಾಸಕರ ಹೇಳುತ್ತಿದ್ದಾರೆ.ಅವರು ಯಾರು ಅಂತ ನನಗೆ ಗೊತ್ತು ಆದರೆ ನಾವು ಅವರ ಹೆಸರು ಹೇಳಲ್ಲ.ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬರುವ ಎಲ್ಲಾ ಚುನಾವಣೆಯಲ್ಲಿ ಸೋಲುತ್ತದೆ.ಸೋಮಣ್ಣ ನನ್ನ ಜೊತೆಗೆ ಮಾತನಾಡಿದ್ದಾರೆ.
ಅಧಿವೇಶನ ಮುಗಿದ ಬಿಳಿಕ ನಾನು ಕುಳಿತು ಮಾತನಾಡುತ್ತೇನೆ ಏನೇ ಸಮಸ್ಯೆ ಇದ್ದರು ಅದನ್ನು ಬಗೆಹರಿಸಿಕೊಳ್ಳುತ್ತೇವೆ.
ಟಿಪ್ಪು ಜಯಂತಿ ಆಚರಣೆಗೆ ಬೇಡಿಕೆ ವಿಚಾರ ಈಗಾಗಲೇ ಟಿಪ್ಪು, ಔರಂಗಜೇಬ್ ಅಂತ ಮಾಡಿ ಕಾಂಗ್ರೆಸ್ ಸೋತ್ತಿದ್ದರು.ಏನೋ ಕೆಲವು ನಮ್ಮ ತಪ್ಪಿನಿಂದ ಅಧಿಕಾರಕ್ಕೆ ಬಂದಿದ್ದಾರೆ.ತುಷ್ಠೀಕರಣ ರಾಜಕೀಯ ಜನ ಸಹಿಸುವುದಿಲ್ಲ ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ.ಐದು ರಾಜ್ಯಗಳಲ್ಲಿ ಒಂದು ರಾಜ್ಯ ಬಿಟ್ಟು ಹೀನಾಯ ಸೋಲಿಗೆ ಕಾಂಗ್ರೆಸ್ ತುಷ್ಟಿಕರಣ ಇಬ್ಬಗೆಯ ನೀತಿ ಕಾರಣ ವಾಗಿದೆ.ಒಬ್ಬ ಮತಾಂದ ವ್ಯಕ್ತಿಯ ಹೆಸರು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.ಒಬ್ಬ ದುಷ್ಟ ಹಿಂದು ವಿರೋಧಿ ಮತಾಂದನ ಹೆಸರು ವಿಮಾನ ನಿಲ್ದಾಣಕ್ಕೆ ಇಟ್ಟರೆ ಜನ ಅದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





