Breaking News

ಪ್ರಧಾನಿ ಅಭ್ಯರ್ಥಿಗಳು ಆಗುವವರಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲ: ರಾಜ್ಯ ಬಿಜೆಪಿ.

ಬೆಂಗಳೂರು: I.N.D.I. ಮೈತ್ರಿಕೂಟದಲ್ಲಿ ಕಿಚಡಿ ಪಕ್ಷಗಳು ಲೋಕಸಭಾ ಚುನಾವಣೆಗೂ ಮುನ್ನವೇ ಛಿದ್ರವಾಗಿವೆ. ಇದರಲ್ಲಿ ಪ್ರಧಾನಿ ಅಭ್ಯರ್ಥಿಗಳು ಆಗುವವರಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲ ಎಂದು ರಾಜ್ಯ ಬಿಜೆಪಿ ಹೇಳಿದೆ. ಇಂಡಿ ಕೂಟದಲ್ಲಿ ಒಗ್ಗಟ್ಟು ಇಲ್ಲ, ಪ್ರಧಾನಿ ಅಭ್ಯರ್ಥಿಯೂ ಇಲ್ಲ.ನಿಗಮ ಮಂಡಳಿ ವಿಚಾರ ಕಾಂಗ್ರೆಸ್‌ ಕ್ಕೆ ಕಲೆಕ್ಷನ್‌ನ ಹೊಸ ಮಾರ್ಗ ತೆರೆದಿದೆ. ಬಿಕ್ಕಟ್ಟಿನ ನಡುವೆ ಶಾಸಕರಿಂದಲೂ ಕಾರ್ಯಕರ್ತರಿಂದಲೂ ಇಡುಗಂಟು ಮಾತ್ರ ಬಿಡದೇ ಬರುತ್ತಿರುವ ಕಾರಣ ಬಿಕ್ಕಟ್ಟು ಬಿಕ್ಕಟ್ಟಾಗಿಯೇ ಇರಲಿ ಎಂಬುದು ಕಾಂಗ್ರೆಸ್ ನಾಯಕರ ಮಹದಾಸೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಲೂಟಿ ಮಾಡಲೆಂದೇ ಗದ್ದುಗೆ ಹಿಡಿದಿರುವ ಕಾಂಗ್ರೆಸ್‌ ಆದಾಯದ ಮೂಲಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದೆ. ಬೆಲೆ ಏರಿಕೆಯಿಂದಾಗಿ ಈಗಾಗಲೇ ಕನ್ನಡಿಗರು ರೋಸಿ ಹೋಗಿದ್ದರೂ ಮತ್ತೆ ನೀರಿಗೂ ಸುಂಕ ಹೆಚ್ಚಿಸುವ ಮೂಲಕ ಬರದ ಬಾಸುಂಡೆ ಮೇಲೆ ಬರೆ ಹಾಕಿದೆ #ATMSarkara. ಗೃಹ ಬಳಕೆಯ ನೀರಿಗೆ ಪ್ರತಿ MCFTಗೆ ₹320 ಹಾಗೂ ಕೈಗಾರಿಕೆಗಳಿಗೆ ಪ್ರತಿ MCFTಗೆ ₹1.5 ಲಕ್ಷದಿಂದ ₹3 ಲಕ್ಷದವರೆಗೂ ನೀರಿನ ದರ ಏರಿಕೆ ಮಾಡಿದೆ

Share News

About BigTv News

Check Also

ಧಾರವಾಡನಲ್ಲಿ ಪ್ರತಿಭಟನೆಯ ಬೆನ್ನಲ್ಲೇ 24 ಸಾವಿರ ಹುದ್ದೆಗಳಿಗೆ ಮಂಜೂರಾತಿ…

ಬೆಂಗಳೂರು : ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ Dharwadನಲ್ಲಿ ಯುವಕರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ರಾಜ್ಯ …

Leave a Reply

Your email address will not be published. Required fields are marked *