Breaking News

ರೂಪಾಯಿ ಮೂಲಕವೇ ವಹಿವಾಟು ನಡೆಸಿ ಬೇರೆ ಕ್ಷೇತ್ರಗಳಲ್ಲಿ ಆಮದು ಒಪ್ಪಂದ ಮಾಡಿಕೊಳ್ಳಲು ಇದು ನೆರವಾಗಿದೆ…..

ದೆಹಲಿ: ಭಾರತವು ರೂಪಾಯಿ ಮೂಲಕವೇ ಹಣ ಪಾವತಿಸಿ ಯುಎಇಯಿಂದ ಕಚ್ಚಾ ತೈಲ ಆಮದು ಮಾಡಿಕೊಂಡು ಇತಿಹಾಸ ಸೃಷ್ಟಿಸಿತ್ತು. ಈ ಇತಿಹಾಸವೀಗ ಮತ್ತೊಂದು ಮುನ್ನಡೆಗೆ ಕಾರಣವಾಗಿದೆ. ರೂಪಾಯಿ ಮೂಲಕವೇ ವಹಿವಾಟು ನಡೆಸಿ ಬೇರೆ ಕ್ಷೇತ್ರಗಳಲ್ಲಿ ಆಮದು ಒಪ್ಪಂದ ಮಾಡಿಕೊಳ್ಳಲು ಇದು ನೆರವಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಗಾಗಿ, ಮೊದಲ ಒಪ್ಪಂದವು ಫಲಪ್ರದವಾಗಿದೆ ಎಂದೇ ಹೇಳಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಯುಎಇಯ ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿ (ಎಡಿಎನ್‌ಒಸಿ)ಯಿಂದ ಭಾರತದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಸಂಸ್ಥೆಯು ರೂಪಾಯಿ ಮೂಲಕವೇ ಹಣ ಪಾವತಿಸಿ ಲಕ್ಷಾಂತರ ಬ್ಯಾರೆಲ್‌ ಕಚ್ಚಾ ತೈಲ ಖರೀದಿಸಿದೆ. ಭಾರತ ಮತ್ತು ಯುಎಇ ನಡುವೆ ಸ್ಥಳೀಯ ಕರೆನ್ಸಿ ಸೆಟಲ್‌ಮೆಂಟ್ (ಎಲ್‌ಸಿಎಸ್) ಅನ್ವಯ ಖರೀದಿ ಮಾಡಿದೆ. ಈ ಒಪ್ಪಂದವೀಗ ಬೇರೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಕೂಡ ನೆರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಬೇಕಾಗಿರುವ ಒಟ್ಟು ಬೇಡಿಕೆಯ ಕಚ್ಚಾ ತೈಲದಲ್ಲಿ ಶೇ.85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲಕ್ಕಾಗಿ ಭಾರತವು ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾರಣ ರೂಪಾಯಿಯಲ್ಲೇ ವಹಿವಾಟು ನಡೆಸುವುದು ಪ್ರಮುಖವಾಗಿದೆ. ರಷ್ಯಾದ ಕೆಲ ತೈಲ ಕಂಪನಿಗಳಿಗೂ ಭಾರತವು ರೂಪಾಯಿ ಪಾವತಿಸುವ ಮೂಲಕವೇ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲೂ ಯುಎಇ ಜತೆ ಮಾಡಿಕೊಂಡಿರುವ ಒಪ್ಪಂದವು ಹತ್ತಾರು ಕ್ಷೇತ್ರಗಳಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನೆರವಾಗುತ್ತಿದೆ. ಈಗಾಗಲೇ ಜಗತ್ತಿನ 18 ರಾಷ್ಟ್ರಗಳ ಜತೆ ರೂಪಾಯಿಯಲ್ಲೇ ವಹಿವಾಟು ನಡೆಸಲು ಭಾರತದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ (PSU) ಆರ್‌ಬಿಐ ಅನುಮತಿ ನೀಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೂಪಾಯಿ ಮೂಲಕವೇ ವಹಿವಾಟು ನಡೆಯುವ ಸಾಧ್ಯತೆ ಹೆಚ್ಚಿವೆ. ಈದು ಭಾರತದ ಮಹತ್ವದ ಸಾಧನೆ ಆಗಿದೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *