ರೋಣ: ರಾಜ್ಯಾದ್ಯಂತ ಚಾಲಿಂಗ್ ಸ್ಟಾರ್ ದರ್ಶನ ಅಭಿನಯಿಸಿದ ಬಹುನೀಕ್ಷಿತ ಕಾಟೇರ ಚಲನಚಿತ್ರವು ಬಿಡುಗಡೆಯಾಗಿದ್ದು,ಮೊದಲ ದಿನವೇ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ದರ್ಶನ ಅಭಿಮಾನಿಗಳು ಪಟಾಕಿ ಸಿಡಿಸಿ ಕಟೌಟ್ ಗಳಿಗೆ ಹೂವಿನ ಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಶ್ರೀ ರೇಣುಕಾ ಚಿತ್ರಮಂದಿರದಲ್ಲಿ ಕಾಟೇರ ಚಲನಚಿತ್ರ ಮೊದಲನೇ ದಿನವು ಬಿಡುಗಡೆಯಾಗಿದ್ದು,ಮೊದಲ ದಿನವೇ ಚಿತ್ರಮಂದಿರ ಮುಂಬಾಗದಲ್ಲಿ ಚಾಲಿಂಗ್ ಸ್ಟಾರ್ ದರ್ಶನ ಅವರ ಕಟೌಟ್ ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ದರ್ಶನ ಕಟೌಟ್ ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿತ್ರಮಂದಿರಗಳಲ್ಲಿ ದಿನಕ್ಕೆ ಒಟ್ಟು 4 ಆಟಗಳು ಪ್ರದರ್ಶನಗೊಳ್ಳುತ್ತಿದ್ದು,ಮೊದಲ ದಿನವೇ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡಿ ಅವರ ಪೈಟಿಂಗ್ ಗೆ ಫೀದಾ ಆಗಿದ್ದಾರೆ. ಚಿತ್ರಮಂದಿರದಲ್ಲಿ ದರ್ಶನ ಅವರ ಅದ್ಬುತ ನಟನೆಗೆ ಅಭಿಮಾನಿಗಳು ಕಣ್ತುಂಬಿಕೊಂಡಿದ್ದು, ಬಾಸ್ ಚಿತ್ರವು 100 ದಿನ ಪ್ರದರ್ಶನಗೊಳ್ಳವುದು ಖಚಿತ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




