ಕುಂದಗೋಳ : ಸಂಶಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಂಸ್ಥೆಗೆ ಡಿಸೆಂಬರ್ 2023 ರಿಂದ ಮುಂದಿನ ಐದು ವರ್ಷಗಳವರೆಗೆ ಆಡಳಿತ ಮಂಡಳಿಗೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ಸಂಸ್ಥೆಯ ಸಿಬ್ಬಂದಿ ವರ್ಗದಿಂದ ಸನ್ಮಾನ ಸಮಾರಂಭ ಹಾಗೂ ಸಂಸ್ಥೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಬೆಳ್ಳಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ನೂತನ ವರ್ಷದ ಅಂಗವಾಗಿ ಸಂಶಿ ಅರ್ಬನ್ ಕೋಂ ಆಪರೇಟಿವ್ ಬ್ಯಾಂಕ್ ಹಾಗೂ ಸಿಬ್ಬಂದಿ ವರ್ಗವು ಭಾವೈಕ್ಯತೆಯ ನಾಡು ಶಿಶುನಾಳಕ್ಕೆ ಹಾಗೂ ಶ್ರೀ ಕ್ಷೇತ್ರ ಉಳುವಿಗೆ ಪಾದಯಾತ್ರೆ ಕೈಗೊಂಡ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಲಾಯಿತು.ಇದಲ್ಲದೆ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲ ಆಡಳಿತ ಮಂಡಳಿ ಸದಸ್ಯರು ನಮ್ಮ ಸಂಸ್ಥೆ ಎಲ್ಲಾ ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮದಲ್ಲಿ ಸಮಯೋಚಿತವಾಗಿ ಮಾತನಾಡಿ ಸನ್ಮಾನ ಮಾಡಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





