Breaking News

Murder Case: ಶಿಕ್ಷಕಿ ಮಿಸ್ಸಿಂಗ್ ಮರ್ಡರ್ ಕೇಸ್: ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲೇ ಹಂತಕ ಅರೆಸ್ಟ್….

ಮಂಡ್ಯ ಜಿಲ್ಲೆಯ ಮೇಲುಕೋಟೆ ಶಿಕ್ಷಕಿ ದೀಪಿಕಾ ನಾಪತ್ತೆ ಹಾಗೂ ಕೊಲೆ ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲೇ ಪೊಲೀಸರು ಹಂತಕನನ್ನು ಅರೆಸ್ಟ್‌ ಮಾಡಿದ್ದಾರೆ. ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ನಿತೀಶ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾಳನ್ನು (28) ಅದೇ ಗ್ರಾಮದ ನಿತೀಶ್ ಕೊಲೆ ಮಾಡಿ ಹೂತು

ಹಾಕಿದ್ದ…ಶನಿವಾರ ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದು,ಅಂದು ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು. ಅಲ್ಲದೆ ದೀಪಿಕಾಳನ್ನು ಎಳೆದಾಡುತ್ತಿದ್ದ ದೃಶ್ಯವನ್ನು ಬೆಟ್ಟದ ಮೇಲಿನಿಂದ ಪ್ರವಾಸಿಗರೊಬ್ಬರು ವೀಡಿಯೋ ಮಾಡಿದ್ದರು. ಇದಾದ ನಂತರ ಮೇಲುಕೋಟೆ ಠಾಣೆಗೆ ದೀಪಿಕಾ ಪೋಷಕರು ನಾಪತ್ತೆ ದೂರು ನೀಡಿದ್ದರು. ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಈ ವೇಳೆ ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಎಸ್ಕೇಪ್ ಆಗಿದ್ದ. ಅಲ್ಲದೇ ದೀಪಿಕಾಗೆ ಕೊನೆಯದಾಗಿ ಈತನೇ ಫೋನ್ ಕಾಲ್ ಮಾಡಿದ್ದ. ನಿತೀಶ್ ಕೊಲೆಗಾರ ಎಂದು ದೀಪಿಕಾ ಪತಿ ಲೋಕೇಶ್ ಆರೋಪ ಮಾಡಿದ್ದರು. ಈ ಅನುಮಾನದಿಂದ ನಾಪತ್ತೆಯಾಗಿದ್ದ ನಿತೀಶ್‌ನನ್ನು ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ನಿತೀಶ್‌ನನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಇಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ…

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *