Breaking News

ಮಾಜಿ ಸಚಿವ KS ಈಶ್ವರಪ್ಪಗೆ ನೋಟಿಸ್ ಜಾರಿ ವಿಚಾರ : ಬಿಎಸ್ ಯಡಿಯೂರಪ್ಪ ಹೇಳಿದ್ದೇನು..?

ರಾಷ್ಟ್ರ ಧ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂಬ ಹೇಳಿಕೆ ಕುರಿತಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ದಾವಣಗೆರೆ ಪೊಲೀಸರು ನೋಟಿಸ್ ಜಾರಿ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಶ್ವರಪ್ಪ ಅವರು ಹೇಳಿರುವಂತಹದ್ದು ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಅಂತ ಹೇಳಿದ್ದು, ಅದರಿಂದ ಇವತ್ತು ಅವರ ವಿರುದ್ಧ ಟಿಕೆ ಟಿಪ್ಪಣಿಗಳ ನಡೆಯುತ್ತಿವೆ. ಅವರು ಹೇಳಿರುವದಕ್ಕೂ

ಇದಕ್ಕೂ ಏನು ಸಂಬಂಧ ಇಲ್ಲ ಎಂದು ಅವರು ತಿಳಿಸಿದರು.ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ ಅಪಾರ್ಥ ಕಲ್ಪಿಸುವ ಕೆಲಸ ಮಾಡುತ್ತಿದೆ. ಅವರ ವಿರುದ್ಧ FIR ಹಾಕಿದರೆ ಏನು ತೊಂದರೆ ಇಲ್ಲ. ಕಾನೂನು ಚೌಕಟ್ಟಿನಲ್ಲಿ ಏನಿದ್ದರೂ ಅದನ್ನು ಎದುರಿಸುತ್ತಾರೆ. ತಪ್ಪು ಕಲ್ಪನೆ ಅವರ ಹೇಳಿಕೆಯನ್ನ ಅಪಾರ್ಥವಾಗಿ ತಿಳಿದುಕೊಂಡಿದ್ದಾರೆ.ಸಿಎಂ ಸಿದ್ದರಾಮಯ್ಯನವರು ಏನು ಬೇಕಾದರೂ ಹೇಳಿಕೆ ಕೊಡುತ್ತಾರೆ ಅವರು ಹೇಳಿದ್ದನ್ನ ಹೇಳಿದ್ದೆ ಸರಿ ಎನ್ನುವಂತಹವರು. ದೆಹಲಿಗೆ ತೆರಳಿ ಎಲ್ಲ ಶಾಸಕರೊಂದಿಗೆ ಪ್ರತಿಭಟನೆ ಮಾಡಿದ್ದೂ, ರಾಜಕೀಯ ದೊಂಬರಾಟ ಮಾಡುವ ಅವಶ್ಯಕತೆ ಇರಲಿಲ್ಲ ಅವರ ನಡವಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *