Breaking News

ಪ್ರೀತಿ, ಪ್ರೇಮ, ಮದುವೆ, ಡಿವೋರ್ಸ್.. ಪ್ರತಿ ತಿಂಗಳು 5000 ರೂ ನೀಡುವಂತೆ ಮಹಿಳೆಗೆ ಕೋರ್ಟ್ ಆದೇಶ..

ಮಧ್ಯ ಪ್ರದೇಶದ ಕೌಟುಂಬಿಕ ನ್ಯಾಯಾಲಯವು ವಿಶೇಷ ಪ್ರಕರಣ ಒಂದರಲ್ಲಿ ವಿಚ್ಛೇದಿತ ಪತ್ನಿಯು ಪತಿಗೆ ಜೀವನಾಂಶವಾಗಿ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹಣ ನೀಡಬೇಕು ಎಂದು ಆದೇಶ ನೀಡಿದೆ.ಪತಿ-ಪತ್ನಿ ಕಿತ್ತಾಟ, ದೂರು ಪ್ರತಿದೂರು ದಾಖಲುಮಹಿಳೆ ಒಬ್ಬಳು ತನ್ನ ಗಂಡ ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ನೀಡುತ್ತಾನೆ. ಮಾನಸಿಕವಾಗಿಯೂ ಹಿಂಸೆ ನೀಡುತ್ತಿದ್ದಾನೆ. ಆತನಿಂದ ನನಗೆ ಮುಕ್ತಿ ಕರುಣಿಸಿ ಎಂದು ಆರೋಪಿಸಿ ಪತಿಯ ವಿರುದ್ಧ ಕೋರ್ಟ್​ನಲ್ಲಿ ದೂರು ನೀಡಿದ್ದಳು. ಪ್ರತಿಯಾಗಿ ಪತಿಯೂ ಕೂಡ ಪತ್ನಿ ವಿರುದ್ಧ ದೂರು ದಾಖಲಿಸಿದ್ದ. ನಾನು ಆಕೆಗೆ ಕಿರುಕುಳ ನೀಡುತ್ತಿಲ್ಲ. ನನಗೆ ಆಕೆ ನನ್ನನ್ನು

ಮದುವೆಯಾದಾಗಿಂದ ಹಿಂಸೆ ನೀಡಲು ಶುರುಮಾಡಿದ್ದಾಳೆ. ಆಕೆ ಜೀವನಾಂಶಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾಳೆ. ಆಕೆ ಸಿಕ್ಕಾಪಟ್ಟೆ ಟಾರ್ಚರ್ ನೀಡಲು ಶುರು ಮಾಡಿದ್ದರಿಂದ ನಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದೆ. ಪರಿಣಾಮ ನಾನು ನಿರುದ್ಯೋಗಿ ಆದೆ ಎಂದು ಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದ.ಆಕೆಯ ಹೇಳಿಕೆಯಲ್ಲಿ ದ್ವಂದ್ವ..! ಕೋರ್ಟ್​ ಎರಡೂ ಕಡೆಯ ವಾದವನ್ನು ಆಲಿಸಿತ್ತು. ನಂತರ ಮಹಿಳೆ ತನ್ನ ಪತಿಗೆ ಜೀವನಾಂಶವಾಗಿ ಪ್ರತಿ ತಿಂಗಳು 5000 ರೂಪಾಯಿ ನೀಡುವಂತೆ ಆದೇಶ ಮಾಡಿದೆ ಎಂದು ವ್ಯಕ್ತಿಯ ಪರ ವಕೀಲ ಮನಿಷ್ ಝರೊಲಾ ತಿಳಿಸಿದ್ದಾರೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದ ಸಂದರ್ಭದಲ್ಲಿ ತಾನು ಬ್ಯೂಟಿ ಪಾರ್ಲರ್ ನಡೆಸ್ತಿರೋದಾಗಿ ತಿಳಿಸಿದ್ದಳು. ಅದೇ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ವೇಳೆ ನಾನು ನಿರುದ್ಯೋಗಿ ಆಗಿದ್ದೇನೆ. ನನ್ನ ಗಂಡ ಹಣ ಗಳಿಸುತ್ತಿದ್ದಾನೆ ಎಂದು ತಿಳಿಸಿದ್ದಳು. ಇದರಿಂದ ಮಹಿಳೆ ಗಂಡನ ವಿರುದ್ಧ ಸುಳ್ಳು ಹೇಳುತ್ತಿದ್ದಾಳೆ ಎಂದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಆಕೆ ಗಂಡನ ವಿರುದ್ಧ ಮಾಡಿದ ಆರೋಪಗಳನ್ನು ಸಾಬೀತು ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್​, ಈ ರೀತಿಯ ಆದೇಶ ನೀಡಿದೆ.ಮಧ್ಯಪ್ರದೇಶದಲ್ಲಿ ಪತ್ನಿಯೇ ಪತಿಗೆ ಜೀವನಾಂಶ ನೀಡಬೇಕು ಎಂದು ಕೋರ್ಟ್​ ಆದೇಶ ನೀಡಿರೋದು ಮೊದಲ ಬಾರಿಗೆ ಇರಬೇಕು. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಪತಿಯೇ ಪತ್ನಿಗೆ ಜೀವನಾಂಶಗಳನ್ನು ನೀಡುವಂತೆ ಕೋರ್ಟ್​ ಆದೇಶ ನೀಡುತ್ತದೆ. ಆದರೆ ಈ ಬಾರಿ ಪ್ರಕರಣ ಉಲ್ಟಾ ಆಗಿದೆ ಎಂದು ವಕೀಲರು ತಿಳಿಸಿದ್ದಾರೆ.ಪ್ರೀತಿ, ಪ್ರೇಮ, ಮದುವೆ, ಡಿವೋರ್ಸ್..

ಉಜ್ಜೈನ್ ಮೂಲದ ಈ ಜೋಡಿ 2020 ರಲ್ಲಿ ಮೊದಲ ಬಾರಿಗೆ ಭೇಟಿ ಆಗುತ್ತದೆ. ನಂತರ ಪ್ರೀತಿ ಮಾಡಲು ಶುರು ಮಾಡುತ್ತಾರೆ. ಕೆಲವು ತಿಂಗಳುಗಳ ಬಳಿಕ ಮದುವೆ ಆಗಿದ್ದರು. ಸಂತ್ರಸ್ತನು ಕೇವಲ 12ನೇ ತರಗತಿ ಓದಿದ್ದ. ಹೀಗಾಗಿ ಹೆಚ್ಚಿನ ಓದು ಮುಗಿಸಿದ ಮೇಲೆ ಮದುವೆ ಆಗೋಣ ಎಂದಿದ್ದನಂತೆ. ಆದರೆ ಆಕೆ ಅದನ್ನು ಒಪ್ಪಿಕೊಂಡಿರಲಿಲ್ಲ. ಮದುವೆ ಆಗಲಿಲ್ಲ ಅಂದರೆ ನಾನು ಸಾಯುತ್ತೇನೆ ಎಂದು ಬೆದರಿಕೆ ಹಾಕಲು ಶುರುಮಾಡಿದ್ದಳಂತೆ. ಹೀಗಾಗಿ 2021, ಜುಲೈನಲ್ಲಿ ಆರ್ಯ ಸಮಾಜ ಟೆಂಪಲ್​ನಲ್ಲಿ ಇಬ್ಬರು ಮದುವೆ ಆಗಿದ್ದರು. ಮದುವೆ ನಂತರ ಇಬ್ಬರು ಇಂದೋರ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮದುವೆಯಾಗಿ ಕೆಲವು ತಿಂಗಳು ಕಳೆದ ಬೆನ್ನಲ್ಲೇ ಮಹಿಳೆ ಆತನಿಗೆ ಟಾರ್ಚರ್ ನೀಡಲು ಶುರುಮಾಡಿದ್ದಾಳಂತೆ.ಕೊನೆಗೆ ಮಹಿಳೆಯು ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ವರದಕ್ಷಿಣೆ ಕಿರುಕುಳ, ದೈಹಿಕ ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಳು. ಅಲ್ಲದೇ ಗಂಡನಿಂದ ಜೀವನಾಂಶ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಕೊನೆಗೆ ಈತನೂ ಕೂಡ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದ..

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *