ಹುಬ್ಬಳ್ಳಿ: ಹೋಳಿ ಹಬ್ಬದ ಸಂಭ್ರಮ ಅಂದರೇ ತರ ತರಹದ ಬಣ್ಣಗಳನ್ನು ಹಚ್ಚಿಕೊಂಡು ಆಚರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಹುಬ್ಬಳ್ಳಿಯ ತಾಲೂಕಿನ ನೂಲ್ವಿ ಗ್ರಾಮದಲ್ಲಿ ವಿಶೇಷವಾಗಿ ಹೋಳಿ ಹಬ್ಬ ಆಚರಣೆ ಮಾಡಿ ಪರಿಸರ ಸ್ನೇಹಿ ಸಂದೇಶವನ್ನು ಸಾರಿದ್ದಾರೆ. ಅಷ್ಟಕ್ಕೂ

ಹೇಗಿತ್ತು ಆಚರಣೆ ಅಂತೀರಾ ತೋರಿಸ್ತಿವಿ ನೋಡಿ..ಕಲರ್ ಕಲರ್ ಬಣ್ಣಗಳ ಬದಲಿಗೆ ಮಣ್ಣು ಹಚ್ಚಿಕೊಂಡು ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಹೌದು.. ವಿಶೇಷ ಹೋಳಿ ಹಬ್ಬದ ಆಚರಣೆಗೆ ನೂಲ್ವಿ ಗ್ರಾಮ ಸಾಕ್ಷಿಯಾಯಿತು. ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಗ್ರಾಮದ ಯುವಕರು, ಸಾಮೂಹಿಕವಾಗಿ ಕಾಮ ದಹನ ಮಾಡಿ ಹೋಳಿ ಹಬ್ಬ ಆಚರಣೆ ಮಾಡಿದ್ದು, ಕಲರ್ ಕಲರ್ ಬಣ್ಣಗಳ ಬಳಕೆಗೆ ಬ್ರೇಕ್ ಹಾಕಿದ್ದಾರೆ. ಬಣ್ಣಗಳ ಬದಲಿಗೆ ಮಣ್ಣಿನೊಂದಿಗೆ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ.ರಸಾಯನಿಕ

ಬಣ್ಣಗಳಿಂದ ಆರೋಗ್ಯದ ಮೇಲೆ ಪರಿಣಾಮ ಸಮಸ್ಯೆಗಳು ಎಂದುಕೊಂಡು ಬಣ್ಣಗಳ ಬಳಕೆ ಮಾಡದ ಗ್ರಾಮದ ಯುವಕರು, ಬಣ್ಣಗಳ ಬದಲಿಗೆ ಮಣ್ಣನ್ನು ಬಳಕೆ ಮಾಡಿಕೊಂಡು ಹೋಳಿ ಹಬ್ಬ ಆಚರಣೆ ಮಾಡಿದರು. ಸಂಪೂರ್ಣವಾಗಿ ಮಣ್ಣಿನಲ್ಲಿ ಮಿಂದೆದ್ದು, ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿಶೇಷವಾಗಿ ಕಂಡು ಬಂದ ಮಣ್ಣಿನೊಂದಿಗೆ ಹೋಳಿ ಹಬ್ಬದ ಆಚರಣೆ, ಹೊಸ ಇತಿಹಾಸವನ್ನು ನೂಲ್ವಿ ಗ್ರಾಮದ ಯುವಕರು ಬರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

