Breaking News

ಸಿದ್ದರಾಮಯ್ಯ ಗೆ ತಿರುಗೇಟು ನೀಡಿದ ಜೋಶಿ

ಹುಬ್ಬಳ್ಳಿ:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಯೋತ್ಪಾದಕ ಎಂಬ ಹೇಳಿಕೆಯನ್ನು ನೀಡಿದರು. ಈ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ಮಾತಿಗೆ ತಿರುಗೇಟನ್ನು ನೀಡಿದ್ದಾರೆ.

ಸಿದ್ದರಾಮಯ್ಯ ನಮಗಿಂತ 10 ವರ್ಷಗಳ ಮೊದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಈ ಹಿಂದೆ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ನಾವು ಕೂಡಾ ಸಾಕಷ್ಟು ಬಾರಿ ಅವರನ್ನು ಟೀಕೆ ಮಾಡಿದ್ದೇವೆ, ಆದ್ರೆ ಈ ಬಾರಿ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಜೋಶಿ ಹೇಳಿದರು.

ಸಿದ್ದರಾಮಯ್ಯ ಸ್ಥಾನಕ್ಕೆ ಈ ಮಾತು ಹೇಳುವುದು ಶೋಭೆ ತರುವಂತದ್ದಲ್ಲ, ಅಧಿಕಾರ ಹೋಗುತ್ತದೆ ಎಂಬ ಹತಾಶೆಯಿಂದ ಮಾನಸಿಕ ಸಮತೋಲವನ್ನು ಕಳೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ.ಆರ್ ಎಸ್ ಎಸ್ ಹಾಗೂ ಭಜರಂಗದಳದವರ ಮೇಲೆ ಇದ್ದ ಕೇಸನ್ನು ಕೂಡಾ ಹಿಂದೆ ಪಡಿದ್ದಿದ್ದೇವೆ ಅಂತಾ ಹೇಳ್ತಾರೆ. ಇವೆರಡು ಸಂಘಟನೆಗಳು ಲಷ್ಕರ್ ಏ ತೋಯಿಬಾ ಜೊತೆ ಗುರುತಿಸಿಕೊಂಡಿದೆಯಾ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟನ್ನು ನೀಡಿದರು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *