Breaking News
Featured Video Play Icon

ರಸ್ತೆಯಲ್ಲಿಯೇ ಅಸ್ವಸ್ಥಗೊಂಡಿದ್ದ ಮಹಿಳೆಗೆ ಚಿಕಿತ್ಸೆ: ವೈದ್ಯನಿಗೆ ಬುದ್ಧಿ ಹೇಳಿ, ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನೆ…

ಇನ್ಸ್ಪೆಕ್ಟರ್ ಯಳ್ಳೂರ ಕಾರ್ಯಕ್ಕೆ ಬೇಷ್…ಬೇಷ ಎಂದ ಜನರು..!

ಹುಬ್ಬಳ್ಳಿ: ರಸ್ತೆಯ ಮೇಲೆಯೇ ಹೊಡೆದಾಡಿಕೊಂಡು ಅಸ್ವಸ್ಥಗೊಂಡು ಬಿದ್ದಿರುವ ಮಹಿಳೆಗೆ ಚಿಕಿತ್ಸೆ ಕೊಡಿಸುವಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಮಹತ್ವದ ಕಾರ್ಯ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ನಿರಾಕರಣೆ ಮಾಡಿದ್ದಕ್ಕೆ ಕ್ಲಾಸ್ ತೆಗೆದುಕೊಂಡ ಇನ್ಸ್ಪೆಕ್ಟರ್, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.ಕೌಟುಂಬಿಕ ಕಾರಣಕ್ಕೆ ಬೀದಿಯಲ್ಲಿಯೇ ಹೊಡೆದಾಡಿಕೊಂಡು ಅಸ್ವಸ್ಥಗೊಂಡಿದ್ದ ಮಹಿಳೆಗೆ ಚಿಕಿತ್ಸೆ ಕೊಡಲು ವೈದ್ಯರೊಬ್ಬರು ನಿರಾಕರಣೆ ಮಾಡಿದ್ದ ಬೆನ್ನಲ್ಲೇ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಮಾನವೀಯ ಮೌಲ್ಯಗಳನ್ನು ಪರಿಚಯಿಸಿ, ನಿರಾಕರಣೆ ಮಾಡಿದ ವೈದ್ಯನಿಗೆ ಕ್ಲಾಸ್ ತೆಗೆದುಕೊಂಡು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕೌಟುಂಬಿಕ ಕಲಹದಲ್ಲಿ ಹೊಡೆದಾಡಿಕೊಂಡ ಅಸ್ವಸ್ಥಗೊಂಡಿದ್ದ ಮಹಿಳೆಗೆ ಈಗ ಇನ್ಸ್ಪೆಕ್ಟರ್ ಕಾರ್ಯದಿಂದ ಚಿಕಿತ್ಸೆ ದೊರೆತಿರುವುದು ವಿಶೇಷವಾಗಿದೆ.

Share News

About Shaikh BigTv

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *