Breaking News

ಉಪನಗರ ಪೋಲಿಸ್ ಠಾಣೆ ಭರ್ಜರಿ ಕಾರ್ಯಚರಣೆ: ಇಪ್ಪತ್ತನಾಲ್ಕು ಗಂಟೆಯಲ್ಲಿ ಕಳ್ಳರ ಬಂಧನ…

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾಜಿಬಾನಪೇಟೆಯಲ್ಲಿರುವ ಗ್ಯಾಸ್ ಡಿಸ್ಟ್ರಿಬ್ಯೂಟರ್ ಏಜನ್ಸಿಯೊಂದರಲ್ಲಿ 13 ರಂದು 5,37,900 ರೂ/- ನಗದು ಕಳ್ಳತನ ಮಾಡಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ-ಉಪ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ರವರ ಮಾರ್ಗದರ್ಶನದ ಮೇರೆಗೆ ಉಪನಗರ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 24 ಗಂಟೆಯಲ್ಲೆ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಆರೋಪಿಗಳು ಅದೇ ಏಜೆನ್ಸಿ ಯಲ್ಲಿ ಕೆಲಸ ಮಾಡುತ್ತಿದ್ದರು ಇನ್ನೂ ಎಲ್ಲಾ ಮಾಹಿತಿ ಪಡೆದುಕೊಂಡ ಪೋಲಿಸರು ಕಳ್ಳತನವಾಗಿದ್ದ 5,37,900 ರೂ/- ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.ಕೈಲಾಸ ತಂದೆ ಮೋಹನರಾಮ ಬಿಷ್ಟೋಯಿ (ಬಿಕನೇರ, ರಾಜಸ್ಥಾನ) ಸದ್ಯ ಮಂಟೂರ ರೋಡ್, ಗಂಗಾವಿಷ್ಣು ತಂದೆ ದೆನ್ನಾರಾಮ ಬಿಷ್ಟೋಯಿ ಬಂಧಿತ ಆರೋಪಿಗಳು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಇನ್ನೂ ಪೋಲಿಸರ ಕಾರ್ಯಚರಣೆಗೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮೀಷನರ್ ಎನ್.ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share News

About Shaikh BigTv

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *