ಹುಬ್ಬಳ್ಳಿ: ಗಾಂಜಾ ಹಾವಳಿ ತಪ್ಪಿಸಲು ಹುಬ್ಬಳ್ಳಿಯ ಪೊಲೀಸರ ಫಿಲ್ಡ್ ಗೆ ಇಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಪೆಷಲ್ ಡ್ರೈವ್ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ಮುಂದಾಗಿದೆ. ಬನ್ನಿ ಏನಿದೇ ಸ್ಪೆಷಲ್ ಡ್ರೈವ್ ಕಾರ್ಯ ನೋಡೋಣ..ಹುಬ್ಬಳ್ಳಿ ಧಾರವಾಡ ಅವಳಿನಗರದ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಬಳಕೆದಾರರ ಸ್ಪೆಷಲ್ ಡ್ರೈವ್ ನಡೆಸಿರುವ ಕಮೀಷನರೇಟ್ ಒಟ್ಟು 467 ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ವೈದ್ಯಕೀಯ ಕೌನ್ಸಿಲಿಂಗ್ ಮಾಡುವ ಮೂಲಕ ಜಾಗೃತಿ ಮೂಡಿಸುವ ಮತ್ತು ಅವಳಿನಗರವನ್ನು ಮಾದಕ ವಸ್ತುಗಳ ಮುಕ್ತವಾಗಿಸಲು ಮುಂದಾಗಿದ್ದಾರೆ.ಇನ್ನೂ ಪಾಸಿಟಿವ್ ಬಂದಿರುವ ಪಾಲಕರನ್ನು ಕೂಡ ಕರೆಸಿದ್ದು, ಪಾಲಕರ ಸಮ್ಮುಖದಲ್ಲಿಯೇ ಎಚ್ಚರಿಕೆ ನೀಡಲಾಯಿತು. ಅಲ್ಲದೇ ನೂರಾರು ಜನ ಪಾಲಕರು ಆಗಮಿಸಿದ್ದು, ಮಕ್ಕಳ ವ್ಯವಸ್ಥೆ ನೋಡಿ ಕಣ್ಣೀರು ಹಾಕಿದರು.
Check Also
ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …
bigtvnews | Hubli Dharwad News | Kannada News | Karnataka News Hubli News | News In Hubli | Local news

