ಶಿಗ್ಗಾಂವಿ:- ಫೈನಾನ್ಸ್‌ದವರ ಕಿರುಕುಳಕ್ಕೆ ವ್ಯಕ್ತಿ ಬಲಿಯಾದ ಘಟನೆ ಶಿಗ್ಗಾಂವ ತಾಲೂಕ ತಡಸ ಗ್ರಾಮದಲ್ಲಿ ನಡೆದಿದೆ.
35 ವರ್ಷದ ಶಾಹೀದ್ ಮೀಠಾಯಿಗರ್ ಫೈನಾನ್ಸ್ ದವರ ಕಿರುಕುಳಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ರೆ. ಇತ್ತ ಆತನ ತಂದೆ ತಾಯಿ, ಹೆಂಡತಿ ಚಿಕ್ಕ ಮಕ್ಕಳು ಗೋಳಾಡುತ್ತಿರುವುದು ಒಂದು ದುರ್ವಿಧಿ. ಶಾಹೀದ್ ತಾನು ಕಷ್ಟ ಅಂತ ಹೇಳಿಕೊಂಡು ಫೈನಾನ್ಸ್ ದಲ್ಲಿ ಸ್ವಲ್ಪ ಹಣವನ್ನು ಪಡೆದಿರುತ್ತಾನೆ. ಅದು ಬಡ್ಡಿಗೆ ಬಡ್ಡಿ ಸೇರಿ ಲಕ್ಷಾಂತರ ರೂಪಾಯಿ ಆಗುತ್ತದೆ. ಆದ್ರೆ ಫೈನಾನ್ಸ್ ದವರು ಮಾತ್ರ ಕರುಣೆ ಇಲ್ಲದೆ, ಮನೆಗೆ ಹೋಗುವುದು, ಪೋನ್ ಮಾಡಿ ಕಿರುಕುಳ ಕೊಡುವುದಕ್ಕೆ ಬೇಸತ್ತ ಶಾಹೀದ್ ಕಳೆದ ಎರಡು ದಿನಗಳ ಹಿಙದೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಇತ್ತ ಹೆಂಡತಿ ಮತ್ತು ಚಿಕ್ಕ ಮಕ್ಕಳು ಅನಾಥರಾಗಿದ್ದಾರೆ. ಮಗನನ್ನು ಕಳೆದುಕೊಂಡ ತಂದೆ ತಾಯಿ, ಮತ್ತು ಗಂಡನನ್ನು ಕಳೆದುಕೊಂಡ ಹೆಂಡತಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಇನ್ನು ತಡಸ ಗ್ರಾಮದಲ್ಲಿ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಸಾಲ ಮಾಡಿ ಭಯಗೊಂಡು ಅದೆಷ್ಟೋ ಯುವಕರು ಊರು ಬಿಟ್ಟು ಹೋಗಿದ್ದಾರೆ. ಶಾಹೀದ್ ಹೆಂಡತಿ ತನ್ನ ಗಂಡನ ಸಾವಿಗೆ ನ್ಯಾಯ ಒದಗಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತಾಯಪ್ಪ ಬೆಂಡಲಗಟ್ಟಿ, ಮಂಜುನಾಥ ಬೆಂಡಲಗಟ್ಟಿ, ಭಿಮಸಿ ದೊಡ್ಡಮನಿ, ಸುರೇಶ ಲಮಾನಿ, ಈರಣ್ಣ ಕೋಡಿ, ಇಸ್ಮಾಯಿಲ್ ಕೊಲ್ಲಾಪುರ, ಮಲ್ಲಿಕ ಇಂಗಳಗಿ, ಇಸ್ಮಾಯಿಲ್ ಹಂಚಿನಾಳ, ಮೈನು ಹಂಚಿನಾಳ, ನಾನಪ್ಪ ವಾಟಕರ್, ಯಲ್ಲಪ್ಪ ಛಲವಾದಿ ಸುಮಾರು 11 ಜನರ ಮೇಲೆ ದೂರು ಸಲ್ಲಿಸಿದ್ದು, ಅವರನ್ನು ತಡಸ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

