Breaking News
Featured Video Play Icon

ಲಂಚ ಪಡೆದು,ಹಂಚಿಕೊಳ್ಳುತ್ತೀದ್ದ ಪೋಲಿಸ್ ವಿಡಿಯೋ ವೈರೆಲ್…

ನನ್ನ ಪಾಲು.. ನಿನ್ನ ಪಾಲು ಮತ್ತು ಸಾಹೇಬನ ಪಾಲು..!!!

ಪಾಲು ಹಂಚಿಕೆ ಮಾಡಿ ಜೀವನ ಸಾಗಿಸುವ ಆಧುನಿಕ ರಕ್ಷಕರು..

ಬಡವರ ಬೇವರಿನ ಹಣದಲ್ಲಿ ಆರಕ್ಷಕರ ಜೀವನ

ಇವರ ಚಾಳಿ ಬೇರೆ ರಾಜ್ಯದವರು ಕಲಿಬಾರ್ದು.!!!

ಚಾಂಡಾಳ ಗುರು ಚೋರ ‌ಆರಕ್ಷಕರಿಗೆ ಈ ಸುದ್ದಿ!!!!

ದೆಹಲಿ : ಲಂಚ ಪಡೆದು, ಅದನ್ನು ಹಂಚಿಕೊಳ್ಳುತ್ತಿದ್ದ ಮೂವರು ದಿಲ್ಲಿ ಸಂಚಾರಿ ಪೊಲೀಸರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಬೆನ್ನಿಗೇ ಅವರನ್ನೆಲ್ಲ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಘಟನೆಯು ಶನಿವಾರ ಘಾಝಿಪುರ್ ನ ಥ್ರಿಲ್ ಲೌರಿ ವೃತ್ತದಲ್ಲಿರುವ ಪೊಲೀಸ್ ತಪಾಸಣಾ ಠಾಣೆಯ ಬಳಿ ನಡೆದಿದೆ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಓರ್ವ ಪೊಲೀಸ್ ಹಣದ ಕಂತೆಯನ್ನು ಸ್ವೀಕರಿಸುವುದಕ್ಕೂ ಮುನ್ನ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಗ್ದಾದ ನಡೆಸುತ್ತಿರುವುದು, ನಂತರ ಅದನ್ನು ತನ್ನ ಹಿಂದಿನ ಮೇಜಿನ ಮೇಲೆ ಇಡುತ್ತಿರುವುದು ಕಂಡು ಬಂದಿದೆ.

ಆ ವ್ಯಕ್ತಿ ಅಲ್ಲಿಂದ ತೆರಳಿದ ನಂತರ, ಸದರಿ ಪೊಲೀಸ್ ಅಧಿಕಾರಿಯು, ಆ ಹಣದ ಕಂತೆಯನ್ನು ಎಣಿಸುತ್ತಿರುವುದು ಹಾಗೂ ನಂತರ ಆ ಹಣವನ್ನು ತನ್ನ ಇನ್ನಿಬ್ಬರು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿರುವುದೂ ಸೆರೆಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಈ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ, ಈ ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಗಳು ಹಾಗೂ ಓರ್ವ ಮುಖ್ಯ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.ಈ ಕುರಿತು ಸಮಗ್ರ ಇಲಾಖಾ ತನಿಖೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *