ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿ ಸರ್ವಸಂಗ ಪರಿತ್ಯಾಗಿಯಾಗಿದ್ದ ಭಗವಾನ್ ಮಹಾವೀರರ ಆದರ್ಶಗಳು ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶ್ರಮಣ ಭಗವಾನ್ ಮಹಾವೀರರ 2621ನೇ ಜನ್ಮಕಲ್ಯಾಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜೈನ ಸಮುದಾಯದವರು ಉನ್ನತ ಮಟ್ಟದ ತತ್ವಗಳನ್ನು ಪರಿಪಾಲನೆ ಮಾಡುತ್ತಾರೆ. ‘ಅಹಿಂಸೋ ಪರಮೋ ಧರ್ಮ’ ಎಂಬ ನೀತಿಯನ್ನು ಜೈನರು ನೂರಕ್ಕೆ ನೂರರಷ್ಟು ಪಾಲಿಸುತ್ತಾರೆ. ಅಹಿಂಸೆಯ ತತ್ವದಲ್ಲಿ ಕರುಣೆ, ಮಮತೆ ಹಾಗೂ ಆದರ್ಶದ ಬದುಕಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

