ಹುಬ್ಬಳ್ಳಿ :ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಮೇಲೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹರಿದಿರುವ ಪರಿಣಾಮ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಬಳಿಯಲ್ಲಿ ನಡೆದಿದೆ.
ವೇಗವಾಗಿ ಬಂದ ಲಾರಿಯು ಕುರಿಗಳ ಮೇಲೆ ಹರಿದಿದ್ದು, ಲಾರಿಯ ಗಾಲಿಗೆ ಸಿಕ್ಕಿಕೊಂಡು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕುರಿಗಳು ಮುಧೋಳ ಮೂಲದ ಕುರಿಗಳು ಎಂದು ಅಂದಾಜಿಸಲಾಗಿದ್ದು, ಖಚಿತ ಮಾಹಿತಿ ನಿರೀಕ್ಷಿಸಲಾಗುತ್ತಿದೆ.ಇನ್ನೂ ಸುಮಾರು ಕುರಿಗಳು ಸಾವನ್ನಪ್ಪಿದ್ದು, ರಸ್ತೆಯಲ್ಲಿ ನೆತ್ತರಿನ ಕೋಡಿಯೇ ಹರಿದಿದೆ. ಅಲ್ಲದೇ ಲಾರಿಯನ್ನು ವಶಕ್ಕೆ ಪಡೆದಿರುವ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

