ಧಾರವಾಡ: ಮಣಿಪುರದ ಗಲಭೆ ವಿಷಯವನ್ನು ಕೇಂದ್ರ ಗೃಹ ಇಲಾಖೆ ಕಂಟ್ರೋಲ್ ಮಾಡುವ ಕೆಲಸವನ್ನು ಮಾಡುತ್ತಿದೆ. ಇದೊಂದು ಸೂಕ್ಷ್ಮ ವಿಚಾರ. ಮಣಿಪುರದಲ್ಲಿ ಎಲ್ಲವನ್ನೂ ಸರಿ ಮಾಡಲು ಸರ್ವ ರೀತಿಯಿಂದ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಮಣಿಪುರ ಗಲಭೆ ಸೂಕ್ಷ್ಮ ಹಾಗೂ ಕಾಂಪ್ಲಿಕೆಟೆಡ್ ಇದೆ. ಹಿಂದಿನ ಗಲಭೆಗಳಿಗೆ ಇದನ್ನು ನಾನು ಹೋಲಿಕೆ ಮಾಡುವುದಿಲ್ಲ. ಹಿಂದೆಯೂ ಇದೇ ರೀತಿ ಗಲಭೆ ನಡೆದಿದೆ. ಆಗ ಇಷ್ಟೊಂದು ಅಲ್ಲಿ ಕಂಟ್ರೋಲ್ ಇರಲಿಲ್ಲ. ಒಬ್ಬ ವ್ಯಕ್ತಿ ಸತ್ತರೂ ಅದು ದೌರ್ಭಾಗ್ಯ ಸಂಗತಿ. ಕೇಂದ್ರದ ಗೃಹ ಇಲಾಖೆ ಅಲ್ಲಿ ಎಲ್ಲವನ್ನೂ ಕಂಟ್ರೋಲ್ ಮಾಡುವ ಕೆಲಸ ಮಾಡುತ್ತಿದೆ ಎಂದರು.
ಮಣಿಪುರದಲ್ಲಿ ಈ ಹಿಂದೆ ವರ್ಷಗಟ್ಟಲೇ ಇಂತಹ ಘಟನಾವಳಿಗಳು ನಡೆದಿವೆ. ಮೂರು, ಐದು ವರ್ಷಗಳ ಕಾಲ ಗಲಭೆಗಳು ನಡೆದ ಉದಾಹರಣೆ ಇವೆ. ಮಾತುಕತೆ ಹಾಗೂ ಪೊಲೀಸ್ ಇಲಾಖೆ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

