ಬಿಹಾರ: ಮೂರು ಅಡಿ ಉದ್ದದ ಹಾವನ್ನು ಒಂದು ವರ್ಷದ ಪುಟ್ಟ ಪೋರನೊಬ್ಬ ಕಚ್ಚಿ ಸಾಯಸಿದ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ಕಟ್ಟೇಪುರ ಗ್ರಾಮದಲ್ಲಿ ನಡೆದಿದೆ.
ಪುಟ್ಟ ಹುಡುಗನ ತಾಯಿ ನೋಡುವವರೆಗೂ ಆತ ಹಾವನ್ನು ಕಚ್ಚುತ್ತಲೇ ಇದ್ದ. ದೃಶ್ಯ ಕಂಡು ಹೈರಾಣಾದ ತಾಯಿಯೇ ಮಗುವಿನ ಬಾಯಿಂದ ಹಾವನ್ನು ಕಿತ್ತೆಸೆದಿದ್ದಾರೆ ಎಂದು ವರದಿಯಾಗಿದೆ. ತಾಯಿ ಕೂಡಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿದ್ದಾಳೆ. ಬಾಲಕನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

