Breaking News

ಬಿಜೆಪಿಯ ಯಾವುದೇ ಭ್ರಷ್ಟಾಚಾರವನ್ನಾದರು ಸಿಎಂ ತನಿಖೆ ಮಾಡಲಿ :ಜೋಶಿ

ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಸರ್ಕಾರ ನಿಮ್ಮದೆ ಇದೆ ಯಾಕೆ ಇನ್ನೂ ಕ್ರಮವಾಗಿಲ್ಲ.ಬಿಜೆಪಿಯ ಯಾವುದೇ ಭ್ರಷ್ಟಾಚಾರವನ್ನಾದರು ಸಿಎಂ ತನಿಖೆ ಮಾಡಲಿ. ಸಿಎಂ ಸಿದ್ಧರಾಮಯ್ಯ ಜಾತಿ ನೆರಳಿನಲ್ಲಿದ್ದಾರೆ. ಆದ್ರೆ ರಾಜ್ಯಪಾಲರ ಜಾತಿ ಬಗ್ಗೆ ಮಾತನಾಡಿದ್ರೆ ಮರು ಪ್ರಶ್ನೆ ಮಾಡತ್ತಾರೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ, ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಾರ್ಟಿಯಲ್ಲಿ ಇರೋರು ಸಿದ್ದರಾಮಯ್ಯ. ದೇವರಾಜ್ ಅರಸ್ ಗೆ ಅಪಮಾನ ಮಾಡಿದವರು ಕಾಂಗ್ರೆಸ್ ನವರು. ಅಂಬೇಡ್ಕರ್ ಅವರ ಸಮಾಧಿಗೆ ಜಾಗ ಕೊಡಲಿಲ್ಲ, ಅವರನ್ನು ಚುನಾವಣೆಯಲ್ಲಿ ಸೋಲಿಸದವರಿಗೆ ಪ್ರಶಸ್ತಿ ನೀಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ನಿಮ್ಮ ಬೆನ್ನು ಮೊದಲು ನೋಡಿಕೊಳ್ಳಿ ನೀವು ಇರುವ ಪಕ್ಷ ದಲಿತರಿಗೆ ಎಷ್ಟು ಅಪಮಾನ ಮಾಡಿದೆ ಅಂತ ತಿಳಿದುಕೊಳ್ಳಿ ಎಂದರು.

ಇನ್ನು ಕಾಂಗ್ರೆಸ್ ನವರು ಕುಮಾರಸ್ವಾಮಿ ಅವರ ಮೇಲಿನ ಪ್ರಕರಣದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಆದ್ರೆ 2018 ರಲ್ಲಿ ಅವರ ಮನೆಗೆ ಹೋಗಿ ಸಿಎಂ ಮಾಡಿದ್ದು ಇದೆ ಕಾಂಗ್ರೆಸ್ ನವರು. ಸಾವಿರಾರು ಸೈಟ್ ಮತ್ತು ಸಾವಿರಾರು ಕೋಟಿ ಅವ್ಯವಹಾರ ಮುಡಾ ಪ್ರಕರಣದಲ್ಲಿ ನಡೆದಿದೆ.
ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ರಾಜ್ಯಪಾಲರ ಆದೇಶ ಪಾಲನೆ ಮಾಡುತ್ತಿಲ್ಲ. ನ್ಯಾಯಾಂಗ ತನಿಖೆ ಹಲ್ಲು ಕಿತ್ತ ಹಾವು ಅದರ ವರದಿ ಸರ್ಕಾರ ಒಪ್ಪಬಹುದು ಬಿಡಬಹುದು. ಅವರದ್ದೇ ಕೆಂಪಣ್ಣ ಆಯೋಗ ನೀಡಿರುವ ವರದಿ ಈಗ ಎಲ್ಲಿದೆ ? ಸಿದ್ದರಾಮಯ್ಯನವರೇ ನಿಮ್ಮ ಶ್ರೀಮತಿ ಅವರ ಕೈಯಿಂದ ನೀವು ಬರೆಸಿದ್ದ ಪತ್ರಕ್ಕೆ ವೈಟನರ್ ಹಚ್ಚಿದರವರು ಯಾರು..? ಅದನ್ನು ಮೊದಲು ಹೇಳಿ. ನಿಮಗೆ ಬಾಂಗ್ಲಾದೇಶ ಮಾದರಿ ಆದರ್ಶನಾ..? ಎಂದರು.

Share News

About bigtvnews22

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *