Breaking News

admin

ಮಿಶ್ರೀಕೋಟಿ ಗ್ರಾಮದಲ್ಲಿ ತಾಲ್ಲೂಕಾ ಮಟ್ಟದ ಏಂಟನೇ ಕನ್ನಡ ಸಾಹಿತ್ಯ ಸಮ್ಮೇಳನ

ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳ ಕನ್ನಡ ಸಾಹಿತ್ಯ ಪರಿಷತ್ ಯಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನವಾಗಿದೆ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲು ಅಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶವಾಗಿದೆ.   ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಫೆ. 26 ರಂದು ತಾಲ್ಲೂಕಾ ಮಟ್ಟದ ಏಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಗ್ರಾಮಕ್ಕೆ ಹೆಮ್ಮೆಯ …

Read More »

ಹೊರ ದುರ್ಗಮ್ಮದೇವಿ ಕ್ರಿಕೆಟ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ

ಶಿರಹಟ್ಟಿ: ತಾಲ್ಲೂಕಿನ ಛಬ್ಬಿ ಗ್ರಾಮದ ಶ್ರೀ ಹೊರ ದುರ್ಗಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಹೊರ ದುರ್ಗಮ್ಮದೇವಿ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾವಳಿಗೆ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ದಾಸರ ರವಿವಾರ ಚಾಲನೆ ನೀಡಿದ್ದು, ಕ್ರೀಡಾ ಸಮವಸ್ತ್ರ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಕ್ರೀಡೆ ಇಲ್ಲದವನ ಜೀವನ ಕೀಡೆ ತಿಂದ ಹಣ್ಣಿನಂತೆ ಎಂಬ ನಾಣ್ಣುಡಿಯಂತೆ ಮಾನಸಿಕ, ದೈಹಿಕ ಶಕ್ತಿ ವೃದ್ಧಿಗೆ ಕ್ರೀಡೆಗಳು ತುಂಬಾ ಉಪಯುಕ್ತವಾಗಿವೆ ಎಂದರು. ಕ್ರೀಡೆಯು …

Read More »

ಸೇನೆಯ ವೈದ್ಯಕೀಯ ವಿಭಾಗದಲ್ಲಿರು ಯೋಧನ ಮೇಲೆ ಹಲ್ಲೆ

ಸೇನೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗರಾಜ ಎಂಬಾತನು, ರಜೆ ಮೇಲೆ ಧಾರವಾಡದ ಹೆಬ್ಬಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಹೆಬ್ಬಳ್ಳಿಯಿಂದ ಹೆಂಡತಿಗೆ ಬೆಳಗಾವಿಯ ಗೋಕಾಕ ಸಮೀಪದ ಸುಲದಾಳಕ್ಕೆ ತವರು ಮನೆಗೆ ಬಿಡಲು ಹೋಗುತ್ತಿದ್ದಾಗ ವಾಹನ್ ಸೌಂಡ್ ಮಾಡಿದ್ದಕ್ಕೆ, ಕಿಡಿಗೇಡಿಗಳು ನಾಗರಾಜ ಹೆಬ್ಬಾಳ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಧಾರವಾಡದ ಮರೇವಾಡ ಮಹಾದ್ವಾರ ಬಳಿ ಘಟನೆ ನಡೆದಿದ್ದು, ಆರು ಜನರ ಯುವಕರ ತಂಡ ಕಲ್ಲು, ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ …

Read More »

ಶಿಗ್ಗಾಂವ -ಸವಣೂರ ಕ್ಷೇತ್ರದಲ್ಲಿ ರಾಜಕಾರಣದ ಅತಿ ದೊಡ್ಡ ಮೆಗಾ ಸರ್ವೇ ಮಾಡಿದ ಬಿಗ್ ಟಿವಿ ನ್ಯೂಸ್ ಕನ್ನಡ…..‌

ಶೀಘ್ರವೇ ಕರ್ನಾಟಕ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದ್ದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಈ ನಡುವೆ, ಶಿಗ್ಗಾಂವ -ಸವಣೂರ ಕ್ಷೇತ್ರದಲ್ಲಿ ರಾಜ್ಯ ರಾಜಕಾರಣದ ಅತಿ ದೊಡ್ಡ ಮೆಗಾ ಸರ್ವೇ ಮಾಡಿದ ಬಿಗ್ ಟಿವಿ ನ್ಯೂಸ್ ಕನ್ನಡ….. ಶಿಗ್ಗಾಂವ -ಸವಣೂರ ಕ್ಷೇತ್ರದಲ್ಲಿ ಜನರ ನಾಡಿ ಮಿಡಿತ ಹೇಗಿದೆ. ಸಿಎಂ ಸೊಲಿಸುವ ಛಲ ತೊಟ್ಟಿರುವ ಸಯ್ಯದ ಅಜ್ಜಂಫಿರ ಖಾದ್ರಿ ನಡೆ ಹೇಗಿದೆ ರಾಜ್ಯದ ಚುಕ್ಕಾಣಿ ಹಿಡಿದಿರುವ ಬೊಮ್ಮಾಯಿಗೆ ಸ್ವ …

Read More »

ಭಾರತದ ಜೊತೆ ಪಾಕಿಸ್ತಾನ ಸೇರಿಸಿ ನಮಗೆ ಮೋದಿ ನಾಯಕತ್ವ ಬೇಕು ಎಂದ ಪಾಕಿಸ್ತಾನ…?

ಪಾಕಿಸ್ತಾನ ಸೇರಿದಂತೆ ಸ್ವಾತಂತ್ರ್ಯ ದೊರೆಯುವ ಮುಂಚೆ ಎಲ್ಲವೂ ಅಖಂಡ ಭಾರತವೇ ಆಗಿತ್ತು. ಆದರೆ, ದುರದೃಷ್ಟವಶಾತ್ ನಮಗೆ ಸ್ವಾತಂತ್ರ್ಯ ಸಿಕ್ಕಿತೆಂಬ ಸಂತಸ ಒಂದು ಕಡೆಯಾದರೆ ನಮ್ಮ ಒಂದು ಅಂಗ ಕಿತ್ತಿ ಕಳಚಿ ಹೋದದ್ದು ಇನ್ನೊಂದೆಡೆ. ಹೀಗೆ ಬೆರೆಯಾದ ಭಾರತ ಮತ್ತು ಪಾಕಿಸ್ತಾನ ಶತ್ರುತ್ವ ಬೆಳೆಸಿಕೊಂಡಿದ್ದು ತಿಳಿದಿರುವ ಸಂಗತಿಯಾಗಿದೆ. ಶತ್ರುತ್ವದಿಂದ ಮೆರೆಯುತ್ತಿದ್ದ ಪಾಕಿಸ್ತಾನ ಇಂದು ಎಲ್ಲವನ್ನು ಕಳೆದುಕೊಂಡು, ಭಿಕ್ಷುಕರಿಗಿಂತಲೂ ಕೀಳು ಮಟ್ಟಕ್ಕೆ ಬಂದು ನಿಂತಿದೆ . ತಿನ್ನಲು ಆಹಾರ ಸಿಗದೇ, ಜೀವನ ನಡೆಸಲು …

Read More »

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡ್ತಿರೊ ಖದೀಮರು, ಹಳೇ ಹುಬ್ಬಳ್ಳಿಯ ಶಿಮ್ಲಾನಗರದಲ್ಲಿ ಕೈಚಳಕ ತೋರಿಸಿದ ಖತರ್ನಾಕ್ ಕಳ್ಳರ ಗ್ಯಾಂಗ್. ಶಿಮ್ಲಾನಗರದಲ್ಲಿ ವಾಸವಾಗಿದ್ದ ಶಕುಂತಲಾ ಅವರು ತಮ್ಮ ಸಂಬಂಧಿಕರ ಮನೆಗೆ ಹೋದಾಗ, ಮನೆಯ ಬೀಗ ಮುರಿದು 5.5ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಮರಳಿ ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿದೆ. 4.92 ಲಕ್ಷ ಮೊತ್ತದ ಬಂಗಾರ, 44 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ, …

Read More »

ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು

ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಎಂದು ಹೇಳಿದ್ದು, ಪ್ರಹ್ಲಾದ ಜೋಶಿ ಅವರು ನಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರ ಅಹಂಕಾರ ಮಿತಿಮೀರಿದೆ. ಈ ಅಹಂಕಾರಕ್ಕೆ ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಜೋಶಿ ಅವರಿಗೆ ಅಧಿಕಾರದಿಂದ ನೆಲ ಕಾಣುತ್ತಿಲ್ಲ. ಅವರು ಮೊದಲು ನೆಲ ನೋಡಿ ಮಾತನಾಡಲಿ, ಯಾವ ಅಧಿಕಾರವೂ ಇಲ್ಲಿ ಶಾಶ್ವತವಲ್ಲ. ಎಂತೆಂತವರದ್ದೋ ಅಹಂಕಾರ ಇಲ್ಲಿ ಮುಗಿದು ಹೋಗಿದೆ. ಜೋಶಿ ಅವರ ರಾಜಕೀಯ ಇತಿಶ್ರೀ …

Read More »

ನಾನೇ ಸ್ವಯಂ ‌ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ

ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪಾ ಅವರು, ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಮೋದಿಯವರು ಬರುತ್ತಿದ್ದಾರೆ.ನನ್ನ ಬಹಳ ವರ್ಷದ ಕನಸು ನನಸಾಗಿದೆ. ಅಭಿವೃದ್ಧಿಗೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆಂಬ ತೃಪ್ತಿ ಇದೆ. 27 ನೇ ತಾರೀಖು‌ ನನಗೆ 80 ವರ್ಷ ಆಗುತ್ತಿದೆ. ಹೀಗಾಗಿ ನಾನೇ ಸ್ವಯಂ ‌ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ. ಹೀಗಾಗಿ ವೀರಶೈವ ಬಂಧುಗಳು ಅಪಾರ್ಥ ಮಾಡಿಕೊಳ್ಳಬಾರದು. ಈ ಮೊದಲಿದ್ದಂತೆ ಸಮುದಾಯದ ಜನ ಬಿಜೆಪಿಗೆ ಬೆಂಬಲಿಸಬೇಕು. ವೀರಶೈವ ‌ಲಿಂಗಾಯತ ಬಂಧುಗಳಲ್ಲಿ ಕೈ ಜೋಡಿಸಿ ಮನವಿ ಮಾಡುತ್ತಿದ್ದೇನೆ ನನಗೆ …

Read More »

ಪ್ರಧಾನಿ ಮೋದಿಯವರಿಂದಾ ಮಾರ್ಚ್ 11 ರಂದು ಧಾರವಾಡ ಐಐಟಿ ನೂತನ ಕಟ್ಟಡ ಉದ್ಘಾಟನೆ

ಧಾರವಾಡ : ಇಂದು ಮುಮ್ಮಿಗಟ್ಟಿಯ ಐಐಟಿಯ ನೂತನ ಕಟ್ಟಡದ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡುತ್ತಾ, ಶೀಘ್ರವೇ ಉಳಿದೆಲ್ಲ ಕೆಲಸವನ್ನು ಬೇಗನೆ ಮುಕ್ತಾಯಗೊಳಿಸುವಂತೆ ಐಐಟಿಯ ಕಟ್ಟಡ ನಿರ್ಮಾಣದ ಕಂಪನಿಯ ಸಿಇಓಗೆ ತಿಳಿಸಲಾಗಿದೆ ಎಂದರು. ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಐಐಟಿ ಕಟ್ಟಡ ಹಾಗೂ ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸುವರು. ಹಾಗೂ …

Read More »

ಫೆ.27 ರಿಂದ ಮಾ.5 ರವರೆಗೆ ಟಿಬೇಟ್ ಫೆಸ್ಟಿವಲ್

ಹುಬ್ಬಳ್ಳಿ: ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ಟಿಬೇಟ್ ಫೆಸ್ಟಿವಲ್ ಟಿಬೆಟ್ ಹಬ್ಬವನ್ನು ಫೆ.27 ರಿಂದ ಮಾ.5 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಡುಗುಲಿಂಗ್ ಟಿಬೇಟಿಯನ್ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್’ನ ಸಿ.ಇ.ಓ ಸೆರಿನ್ ಪೋಪಿಯಾಲ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಬೇಟಿಯನ್ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಟಿಬೇಟ್ ಹಬ್ಬ ಕ್ಯಾಂಪ್ ನಂ.3 …

Read More »

You cannot copy content of this page