ಬಿಜೆಪಿಗೆ ಯಾವುದೇ ಧರ್ಮ, ನೀತಿ ಹಾಗೂ ನೈತಿಕತೆಯೇ ಇಲ್ಲ. ಬೇರೆ ಪಕ್ಷಗಳ ಶಾಸಕರಿಗೆ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೆಳೆಯೋದೆ ಕೆಲಸವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಅಧಿಕಾರ ಮುಖ್ಯವೇ ಹೊರತು, ಅಭಿವೃದ್ಧಿಯಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ವಾಗ್ದಾಳಿ ನಡೆಸಿದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ರ 25ನೇ ಪುಣ್ಯಸ್ಮರಣೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಮಾತನಾಡಿದ ಅವ್ರು, ಈ ಹಿಂದೆ ಬಹುಮತವಿಲ್ಲದಿದ್ದರು ಸರ್ಕಾರ ರಚನೆ ಮಾಡಲು ಹೋಗಿ ಬಿಜೆಪಿ ಸೋತಿದೆ. ಅನೈತಿಕ ಪದ್ದತಿಗಳನ್ನು ಪ್ರಯೋಗ ಮಾಡುವದು ರಾಜ್ಯ ಬಿಜೆಪಿ ನಾಯಕರಗಳ ಕೆಟ್ಟ ಸಂಪ್ರದಾಯವಾಗಿದೆ. ಯಡಿಯೂರಪ್ಪನವರೂ ಸೇರಿ ಬಿಜೆಪಿ ನಾಯಕರಿಗೆ ಅಧಿಕಾರದ ಹಪಾಹಪಿ ಇನ್ನೂ ಬಿಟ್ಟಿಲ್ಲ ಅಂತ ಕಿಡಿಕಾರಿದ್ರು. ಇದೇ ವೇಳೆ ಲೋಕಸಭಾ ಚುನಾವಣೆ ಕುರಿತಂತೆ ಸೆಪ್ಟೆಂಬರ್ 1 ಹಾಗೂ 2ರಂದು ಬೆಂಗಳೂರಿನಲ್ಲಿ ರಾಜ್ಯದ ಲೋಕಸಭಾ ಕ್ಷೇತ್ರವಾರು ಸಭೆಗಳನ್ನ ನಡೆಸ್ತೇವೆ. ಕಳೆದ ಮೂರ್ನಾಲ್ಕು ಲೋಕಸಭಾ ಚುನಾವಣೆಗಳ್ಲಿ ರಾಜ್ಯದಲ್ಲಿ ಬಿಜೆಪಿ ನೆಲೆಯುರಿದೆ. ಬಿಜೆಪಿ ಎಂಪಿಗಳಿಂದ ರಾಜ್ಯಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮಹದಾಯಿ ವಿವಾದದ ಬಗ್ಗೆ ಭರವಸೆ ನೀಡಿದ್ದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಆಮೇಲೆ ಆ ಬಗ್ಗೆ ಚಕಾರವೆತ್ತಿಲ್ಲ. ನುಡಿದಂತೆ ಯಾವತ್ತೂ ಕೂಡ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಜನಪರ ಕಾಳಜಿಯಿಲ್ಲದ ಕೇಂದ್ರ ಸರ್ಕಾರವನ್ನ ಈ ಸಾರಿ ಜನ ಬದಲಾಯಿಸ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.ದಿನೇಶ ಗುಂಡೂರಾವ್,ಅಧ್ಯಕ್ಷ, ಕೆಪಿ
bigtvnews | Hubli Dharwad News | Kannada News | Karnataka News Hubli News | News In Hubli | Local news





