Breaking News

admin

ರೊಮೇನಿಯಾದ ಪ್ರಧಾನಿಗೆ ಕರೆ ಮೂಲಕ ಧನ್ಯವಾದ ತಿಳಿಸಿದ ಮೋದಿ

ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ರೊಮೇನಿಯಾದ ಪ್ರಧಾನಿ ನಿಕೋಲೇ-ಐಯೋನೆಲ್ ಸಿಯುಕಾ ಜತೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ರೊಮೇನಿಯಾ ನೀಡಿದ ನೆರವಿಗಾಗಿ ಪ್ರಧಾನಿ ನಿಕೊಲೆ – ಐಯೋನೆಲ್ ಸಿಯುಕಾ ಅವರಿಗೆ ಧನ್ಯವಾದ ಹೇಳಿದರು. ಭಾರತೀಯ ನಾಗರಿಕರಿಗೆ ವೀಸಾಗಳಿಲ್ಲದೇ ರೊಮೇನಿಯಾ ಪ್ರವೇಶಿಸಲು ಅವಕಾಶ ನೀಡಿದ್ದನ್ನು ವಿಶೇಷವಾಗಿ ಶ್ಲಾಘಿಸಿದರು. ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು …

Read More »

ಮದುವೆಗೆ ವಿರೋಧ : ಸಾವಿನಲ್ಲಿ ಒಂದಾಂದ ಅಮರ ಪ್ರೇಮಿಗಳ

ಆನೇಕಲ್: ಮದುವೆಗೆ ಮನೆಯವರು ವಿರೋಧಿಸಿದ್ದರಿಂದ ಬೇಸತ್ತ ಪ್ರೇಮಿಗಳು ರೈಲ್ವೇ ಹಳಿಯಲ್ಲಿ ಸಾವಲ್ಲಿ ಒಂದಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಿ ಈ ಪ್ರಕರಣ ನಡೆದಿದೆ. ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಆನೇಕಲ್​​ನ ಸಮಂದೂರು ಬಳಿ ನಿನ್ನೆ ಈ ಆತ್ಮಹತ್ಯೆ ನಡೆದಿದ್ದು, ಪ್ರಕರಣ ಇಂದು ಬೆಳಕಿಗೆ ಬಂದಿದೆ. ಇಬ್ಬರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದೇ ಇಬ್ಬರೂ ಒಟ್ಟಿಗೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ. ಯಪ್ಪನಹಳ್ಳಿ ರೈಲ್ವೆ …

Read More »

ಮಾ. 4 ರಿಂದ 30ರವರೆಗೆ ವಿಧಾನಸೌಧ ಸುತ್ತ ಪ್ರತಿಭಟನೆ ನಿಷೇಧ

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ 2 ಕಿ. ಮೀ. ವ್ಯಾಪ್ತಿಯಲ್ಲಿ ಮಾರ್ಚ್ 4 ರಿಂದ 30ರ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಮಯದಲ್ಲಿ ಪ್ರತಿಭಟನೆ ನಡೆಸುವುದು ನಿರ್ಬಂಧಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 4 ರಿಂದ 30ರ ತನಕ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮಾರ್ಚ್ 4ರಂದು ಹಣಕಾಸು ಸಚಿವರು …

Read More »

ಉಕ್ರೇನ್ ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದ 5 ವಿದ್ಯಾರ್ಥಿಗಳು

ದೇವನಹಳ್ಳಿ(ಬೆಂಗಳೂರು): ಉಕ್ರೇನ್​ನಲ್ಲಿ ಭಾರತೀಯರು ಸಿಲುಕಿಕೊಂಡಿದ್ದು, ಅಲ್ಲಿಂದ ಅವರನ್ನು ಮರಳಿ ದೇಶಕ್ಕೆ ಕರೆತರುವ ಕೆಲಸ ಆಗುತ್ತಿದೆ. ಅದರಂತೆ ಐವರು ವಿದ್ಯಾರ್ಥಿಗಳು ಉಕ್ರೇನ್​ನಿಂದ ದೆಹಲಿಗೆ ಬಂದು, ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ನಿನ್ನೆ ರಾತ್ರಿ 8 ಗಂಟೆಗೆ ಆಗಮಿಸಿದ್ದಾರೆ. ಸೋಮವಾರ ರಾತ್ರಿ 5 ವಿದ್ಯಾರ್ಥಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿದ್ಯಾರ್ಥಿಗಳಾದ ಶ್ರವಣ ಸಂಗಣ್ಣ, ಶಕ್ತಿಶ್ರೀ ಶೇಖರ್, ಮೈನಾ ಅನಿಲ್​​ ನಾಯಕ್, ನಿಹಾರಿಕಾ, ಆಶಾ ವೆಂಕಟೇಶ್ ರೆಡ್ಡಿ ಅವರನ್ನು ಪೋಷಕರು …

Read More »

ಗತಿಶಕ್ತಿ ಯೋಜನೆಯಿಂದ ನವದಿಶೆ ಸಿಗಲಿದೆ : ಮೋದಿ

ನವದೆಹಲಿ: ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಿಂದ ಆಧುನಿಕ ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ನವದಿಶೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್‌ಗೆ ಸಂಬಂಧಿಸಿ ನಡೆದ ವೆಬ್‌ ಗೋಷ್ಠಿಯಲ್ಲಿ ಪಾಲ್ಗೊಂಡು ಮೋದಿ ಮೇಲಿನಂತೆ ನುಡಿದರು. ಗತಿಶಕ್ತಿ ಯೋಜನೆಯನ್ನು ಕಳೆದ ವರ್ಷ ಘೋಷಿಸಲಾಗಿತ್ತು. ಯಾವುದೇ ಮೂಲಸೌಕರ್ಯ ನಿರ್ಮಾಣದ ವೇಳೆ ಬೇರೆಬೇರೆ ಇಲಾಖೆಗಳಿಂದ ಎದುರಾಗುವ ಅಡೆತಡೆಗಳನ್ನು ನಿವಾರಿಸಲು, ಅತ್ಯುತ್ತಮವಾದ, ಏಕೀಕೃತವಾದ ರೀತಿಯಲ್ಲಿ ಯೋಜನೆ ಮಾಡಿ, ಜಾರಿ ಮಾಡಲು ಇದನ್ನು ಆರಂಭಿಸಲಾಗಿದೆ. ಇದರ ಮೂಲಕ ಸರ್ಕಾರಿ-ಖಾಸಗಿ …

Read More »

2024ರೊಳಗೆ ಕರ್ನಾಟಕದ ರಸ್ತೆಗಳು ಅಮೆರಿಕ ಮಾದರಿಗೆ ಮಾರ್ಪಟ್ಟ : ನಿತಿನ್‌ ಗಡ್ಕರಿ

ಬೆಂಗಳೂರು : ಭಾರತದ ರಸ್ತೆಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ ಹೊಂದಿದ್ದು 2024ರೊಳಗೆ ಕರ್ನಾಟಕದ ಎಲ್ಲ ರಸ್ತೆಗಳ ಗುಣಮಟ್ಟವನ್ನು ಅಮೆರಿಕ ಮಾದರಿಗೆ ಎತ್ತರಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿ ಸೋಮವಾರ ಒಂದೇ ದಿನದಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಅವರು ಒಟ್ಟಾರೆ ರಾಜ್ಯದ ವಿವಿಧೆಡೆ ನಡೆಯಲಿರುವ .19,930 ಕೋಟಿ ವೆಚ್ಚದ 46 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿ …

Read More »

ಇಂದು ಪವರ್ ಸ್ಟಾರ್ ಅಭಿನಯದ ಜೇಮ್ಸ್ ಚಿತ್ರದ ಸಾಂಗ್ ರಿಲೀಸ್

ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಇಂದು ಮಾರ್ಚ್​ 1 ವಿಶೇಷ ದಿನ.ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ನ ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​. ಬೆಳಗ್ಗೆ 11:11ಕ್ಕೆ ರಿಲೀಸ್​ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು. ಹೀಗಾಗಿ, ಅಭಿಮಾನಿಗಳು ಈ ಸಾಂಗ್​ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇ ಟೀಸರ್​ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ ಅಭಿಮಾನಿಗಳು …

Read More »

ಮೇಕೆದಾಟು ಪಾದಯಾತ್ರೆ : ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ2 ವಿಪಕ್ಷ ನಾಯಕ ಸಿದ್ದರಾಮಯ್ಯ, ಎ3 ಡಿ.ಕೆ. ಸುರೇಶ್‌, ಎ4 ಎಂಎಲ್‌ಸಿ ಎಸ್‌. ರವಿ ಸೇರಿ ಪಾದಯಾತ್ರೆ ನಡೆಸುತ್ತಿರುವ 37 ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Read More »

ಪಠ್ಯದಲ್ಲಿ ವೀರ ವನಿತೆಯರ ಸಾಹಸಗಾಥೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಸೇರಿದಂತೆ ಕನ್ನಡನಾಡಿನ ವೀರವನಿತೆಯರ ಸಾಹಸಗಾಥೆಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಅವರ ಶೌರ್ಯ, ಸಾಹಸಗಳ ಪರಿಚಯ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ಸ್ವಗೃಹದಲ್ಲಿ ಬೆಳವಡಿ ಮಲ್ಲಮ್ಮನವರು ಮರಾಠಾ ಸೈನ್ಯದ ವಿರುದ್ಧದ ಜಯಗಳಿಸಿದ 374ನೇ ವರ್ಷಾಚರಣೆ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಾಂಕೇತಿಕವಾಗಿ ಬೆಳವಡಿ ಮಲ್ಲಮ್ಮನವರ ವಿಜಯ ದಿನವನ್ನು ಆಚರಿಸಲಾಗಿದೆ. ಕನ್ನಡನಾಡಿನ ಕೆಳದಿ ಚೆನ್ನಮ್ಮ, ಬೆಳವಡಿ …

Read More »

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆ ಮಾಡಲು ಸಂಚು

ಕೀವ್ : ರಷ್ಯಾದ 400 ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ಆದೇಶಿಸಿದ್ದು, ಇದರಿಂದಾಗಿ ಅವರು ರಷ್ಯಾ ಸೈನಿಕರು ಹುಡುಕುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ. 400ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಆಫ್ರಿಕಾದಿಂದ ಕರೆಸಿಕೊಂಡಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅವರ ಸರ್ಕಾರದ ಅಧಿಕಾರಿಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರ ಮಿತ್ರರ ಬಳಗದಲ್ಲಿ ಒಬ್ಬರಿಂದ ನಡೆಸಲ್ಪಡುವ ವ್ಯಾಗ್ನರ್ ಗ್ರೂಪ್ ಕಂಪನಿಯು ಐದು ವಾರಗಳ …

Read More »