Breaking News

admin

ಜಿ.ಪಂ., ತಾ.ಪಂ. ಚುನಾವಣೆ ಕುರಿತು ತಕ್ಷಣ ನಿರ್ಧಾರ ತೆಗೆದುಕೊಳ್ಳವದಿಲ್ಲಜನ : ಈಶ್ವರಪ್ಪ

ಕಲಬುರಗಿ: ಜಿ.ಪಂ., ತಾ.ಪಂ. ಚುನಾವಣೆ ಯನ್ನು ಒಬಿಸಿ ಮೀಸಲಾತಿ ಇಲ್ಲದೇ ನಡೆಸಬಾರದು ಎನ್ನುವ ಕುರಿತು ಸಿಎಂ ಹಾಗೂ ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗಿದೆ. ಆದರೆ ಯಾವಾಗ ಚುನಾವಣೆ ನಡೆಯುತ್ತದೆ ಎನ್ನುವುದನ್ನು ಈಗಲೇ ಹೇಳಲಿಕ್ಕೆ ಆಗದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ., ತಾ.ಪಂ. ಚುನಾವಣೆ ಸಂಬಂಧ ಈಗಾಗಲೇ ಹಲವು ಸುತ್ತು ಚರ್ಚಿಸಲಾಗಿದೆ. ಆದರೆ ಚುನಾವಣೆ ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ನಡೆಯಬಹುದು ಎನ್ನುವುದು ತಿಳಿಯುತ್ತಿಲ್ಲ ಎಂದರು.

Read More »

ಮೇಕೆದಾಟು ಪಾದಯಾತ್ರೆ : ಬಿಜೆಪಿಯ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ರಾಮನಗರ: ಕಾವೇರಿ ನೀರು ಬಳಕೆಯ ಹಕ್ಕು ಜನರಿಗೆ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಭಾನುವಾರ ಇಲ್ಲಿ ಆರಂಭಗೊಂಡ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಯಲ್ಲಿ ಘೋಷಿಸಿದರು. ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರದ ವಿರುದ್ಧ ಹರಿಹಾಯ್ದರು. ಇಲ್ಲಿನ ಟಿ.ಆರ್. ಮಿಲ್‌ ಮೈದಾನದಲ್ಲಿ ಪಾದಯಾತ್ರೆಗೆ ಮರು ಚಾಲನೆ ನೀಡಿದ ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ‘ಕಾವೇರಿ ನೀರಿನ ಪ್ರತಿ ಹನಿ ಮೇಲೂ ಈ ಪ್ರದೇಶದ ಜನರಿಗೆ ಹಕ್ಕು ಇದೆ. ಇದು …

Read More »

ಯುದ್ದ ಪೀಡಿತ ಉಕ್ರೇನ್‌ಗೆ $ 350 ಮಿಲಿಯನ್ ಮಿಲಿಟರಿ ಉಪಕರಣ ಯುಎಸ್

ನ್ಯೂಯಾರ್ಕ್: ರಷ್ಯಾದ ‘ಕ್ರೂರ ಮತ್ತು ಅಪ್ರಚೋದಿತ ಆಕ್ರಮಣ’ ದ ವಿರುದ್ಧ ಹೋರಾಡಲು ಯುನೈಟೆಡ್ ಸ್ಟೇಟ್ಸ್ (US)ಉಕ್ರೇನ್‌ಗೆ $ 350 ಮಿಲಿಯನ್ ನ ಹೆಚ್ಚುವರಿ ಮಿಲಿಟರಿ ಉಪಕರಣಗಳನ್ನು ನೀಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶನಿವಾರ ಘೋಷಿಸಿದರು. ‘ಈ ಪ್ಯಾಕೇಜ್ ಉಕ್ರೇನ್ ಈಗ ಎದುರಿಸುತ್ತಿರುವ ಶಸ್ತ್ರಸಜ್ಜಿತ, ವಾಯುಗಾಮಿ ಮತ್ತು ಇತರ ಬೆದರಿಕೆಗಳನ್ನು ಪರಿಹರಿಸಲು ಸಹಾಯ ಮಾಡಲು ಮತ್ತಷ್ಟು ಮಾರಕ ರಕ್ಷಣಾತ್ಮಕ ಸಹಾಯವನ್ನು ಒಳಗೊಂಡಿರುತ್ತದೆ’ ಎಂದು ಬ್ಲಿಂಕನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ ಕೆಲ …

Read More »

ಉಕ್ರೇನ್ ಗೆ ಸಲಹೆ‌ ನೀಡಿದ ಮೋದಿ

ಕೀವ್: ಉಕ್ರೇನ್‌ನಲ್ಲಿ ರಷ್ಯಾ ಯುದ್ಧದಿಂದಾಗಿ ಆಗಿರುವ ಪ್ರಾಣಹಾನಿ ಆಸ್ತಿಪಾಸ್ತಿ ನಷ್ಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಮಂತ್ರಿ ಸಚಿವಾಲಯ ಮಾಹಿತಿ ನೀಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು ಈ ವೇಳೆ ಅಧ್ಯಕ್ಷ ಝೆಲೆನ್ಸ್ಕಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ವಿವರವಾಗಿ ತಿಳಿಸಿದರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹೊರತಾಗಿ ಶಾಂತಿ ಮಾತುಕತೆ …

Read More »

ರಾಜ್ಯದಲ್ಲಿ 514 ಜನರಿಗೆ ಕೊರೋನಾ ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 514 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 19 ಜನ ಸೋಂಕಿತರು ಮೃತಪಟ್ಟಿದ್ದಾರೆ. 1073 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 39,40,429 ಕ್ಕೆ ಏರಿಕೆಯಾಗಿದೆ. ಇದುವರೆಗೆ 39,919 ಜನ ಸೋಂಕಿತರು ಮೃತಪಟ್ಟಿದ್ದಾರೆ. 38,93,532 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 6940 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.84 ರಷ್ಟು ಇದೆ.

Read More »

ಬರ್ಬರವಾಗಿ ಹತ್ಯೆಯಾದ ಕಾಂಗ್ರೆಸ್ ಮುಖಂಡ

ರಾಮನಗರ: ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‍ನಿಂದ ಚುಚ್ಚಿ ಕಾಂಗ್ರೆಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಘಟನೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿದೆ. ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಜಮೀನು ವಿವಾದಕ್ಕೆ ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡುವೆ ನಡೆಸಲಾಗುತ್ತಿದೆ.

Read More »

ಶಾಸಕ ಸುಭಾಷ ಪತ್ನಿ ನಿಧನ

ಆಳಂದ: ಶಾಸಕ ಸುಭಾಷ ಆರ್.ಗುತ್ತೇದಾರ್‌ ಅವರ ಪತ್ನಿ ಸರೋಜಾಬಾಯಿ ಸುಭಾಷ ಗುತ್ತೇದಾರ (65) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಪುತ್ರರಾದ ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಹಾಗೂ ಪುತ್ರಿ ಇದ್ದಾರೆ.

Read More »

ಕಾಂಗ್ರೆಸ್ ವಿರುದ್ಧ ಸಿಎಂ ಕಿಡಿ

ಹುಬ್ಬಳ್ಳಿ: ಕಾಂಗ್ರೆಸ್ಸಿನವರು ಮೇಕೆದಾಟು ಡಿಪಿಆರ್ ಮಾಡೋಕೆ ಐದು ವರ್ಷ ತೆಗೆದುಕೊಂಡಿದ್ದರು ಆದರೂ ಕೂಡ ಅದು ಸಾಧ್ಯವಾಗಿಲ್ಲ. ಮೇಕೆದಾಟು ವಿಷಯವಾಗಿ ಕಾಂಗ್ರೆಸ್ ರಾಜಕೀಯವಾಗಿ ಪಾದಯಾತ್ರೆ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಅವರ ಅವಧಿಯಲ್ಲಿ ಡಿಪಿಆರ್ ಮಾಡಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಅವರು ಸಿಎಂ ಆದ ಸಂದರ್ಭದಲ್ಲಿ ಡಿಪಿಆರ್ ಮಾಡಲಾಗಿದೆ ಎಂದರು. ಇನ್ನೂ ಬಜೆಟ್ …

Read More »

ಮಾ. 4ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಬಂದ್

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೀಗ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಮಾರ್ಚ್ 4ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನ ಬಂದ್ ಮಾಡಿ, ಮೆಜೆಸ್ಟಿಕ್​​ನಿಂದ ವಿಧಾನಸೌಧದ ತನಕ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಅರ್ನಿದಿಷ್ಟ ಅಹೋರಾತ್ರಿ ಧರಣಿಗೂ ಸಿದ್ದವಾಗಿರುವುದಾಗಿ ರಾಜ್ಯಾಧ್ಯಕ್ಷ ಗೋಪಿನಾಥ್ ತಿಳಿಸಿದ್ದಾರೆ. ಇಂದು ಪ್ರೆಸ್ ಕ್ಲಬ್​​ನಲ್ಲಿ ಮಾತಾನಡಿದ ಅವರು, ಕಳೆದ 2014ರಿಂದಲ್ಲೂ ಅನೇಕ ಮನವಿಯನ್ನ ಸಲ್ಲಿಸಿದ್ದರೂ, ಹೋರಾಟಗಳನ್ನ ನಡೆಸಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆಕ್ರೋಶ …

Read More »

ಭಾರತಕ್ಕೆ ಧನ್ಯವಾದ ತಿಳಿಸಿದ ರಷ್ಯಾ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾವನ್ನು ಖಂಡಿಸುವ ನಿರ್ಣಯವನ್ನು ಬೆಂಬಲಿಸದ ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ರಷ್ಯಾ ಧನ್ಯವಾದ ಹೇಳಿದೆ. ಈ ಕರಡನ್ನು ಬೆಂಬಲಿಸದವರಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ವಿಶ್ವಸಂಸ್ಥೆಯ ( ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ. ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾವನ್ನು ಖಂಡಿಸುವ ನಿರ್ಣಯದ ಮೇಲೆ ಮತದಾನದಿಂದ ದೂರ ಉಳಿದಿವೆ. 11 …

Read More »