Breaking News

ನದಿಗೆ ಹಾರಿ ತಾಯಿ ಮಕ್ಕಳ ಆತ್ಮಹತ್ಯೆ!.

ಮದ್ಯ ಕುಡಿದು ಬಂದು ಕಿರುಕುಳ, ಅಮಾಯಕ ಹೆಣ್ಣು ಮಗಳ ಆತ್ಮಹತ್ಯೆ!.
ಪತಿ ಅಶೋಕ್ ಕಿರುಕುಳ ತಾಳಲಾರದೆ ಪತ್ನಿ ಶಾರದಾ ತನ್ನ 3 ಮಕ್ಕಳೊಂದಿಗೆ ಕೃಷ್ಣ ನದಿಗೆ ಹಾರಿ ಜೀವ ಬಿಟ್ಟಿದ್ದಾಳೆ. ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ಮುಳುಗುತ್ತಿದ್ದ ಅನುಕ್ಷಾಳನ್ನು ರಕ್ಷಣೆ ಮಾಡಿದ್ದರು. ನಂತರ ಆಕೆಯನ್ನು ರಾಯಬಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸಗೆ ಸ್ಪಂದಿಸದೆ ಆಕೆಯೂ ದುರ್ಮರಣಕ್ಕಿಡಾಗಿದ್ದಾಳೆ . ಈ ಘಟನೆಯು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಬಳಿ ನಡೆದಿದೆ . ತಾಯಿ ಶಾರದಾ (32), ಮಕ್ಕಳಾದ ಅನುಷ್ಕಾ , ಆದರ್ಶ ಹಾಗೂ ಅಮೃತ ಮೃತ ದುರ್ದೈವಿಗಳು. ಸದ್ಯ ಪತಿ ಅಶೋಕ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *