ಚೆನ್ನೈ: ದುಷ್ಕರ್ಮಿಗಳು ದ್ವಿಚಕ್ರ ವಾಹನಗಳಲ್ಲಿ ಬಂದು ಚೆನ್ನೈನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.ಗುರುವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಪೊಲೀಸರ ದಾರಿ ತಪ್ಪಿಸಿ ಪರಾರಿಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಚೆನ್ನೈನ ನಂದನಂನಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿನೋತ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ‘ನಮ್ಮ ಕಚೇರಿಯ ಮೇಲೆ ನಸುಕಿನ 1:30 ರ ಸುಮಾರಿಗೆ ಪೆಟ್ರೋಲ್ …
Read More »ಬೀಚ್ಗಳಲ್ಲಿ ಬಿಕಿನಿ ಧರಿಸಿ, ಶಾಲೆಗಳಲ್ಲಿ ಅಲ್ಲ : ಸುಮಲತಾ ಅಂಬರೀಷ್
ನವದೆಹಲಿ: ‘ಬೀಚ್ಗಳಲ್ಲಿ ಅಥವಾ ಈಜುಕೊಳದಲ್ಲಿ ಬಿಕಿನಿ ಧರಿಸಬಹುದು. ಶಾಲೆಗಳಲ್ಲಿ ಅಲ್ಲ. ಪ್ರತಿಯೊಂದು ಸ್ಥಳಕ್ಕೂ ಸಂಬಂಧಪಟ್ಟಂತೆ ವಸ್ತ್ರಸಂಹಿತೆ ಎಂಬುದು ಇದೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಇಲ್ಲಿ ಹೇಳಿದರು. ಹಿಜಾಬ್ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮನೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕು, ಶಾಲೆಗಳಲ್ಲಿ ಅಲ್ಲ. ಪ್ರತಿಯೊಬ್ಬರು ಶಿಕ್ಷಣಕ್ಕಾಗಿಯೇ ಶಾಲೆಗೆ ಬರುತ್ತಾರೆ’ ಎಂದರು.
Read More »ಕರ್ನಾಟಕದಲ್ಲಿ 5,339 ಕೋವಿಡ್ ಪಾಸಿಟಿವ್ ದೃಢ
ಬೆಂಗಳೂರು: ರಾಜ್ಯದಲ್ಲಿ ನಿನ್ನೆ 5 ಸಾವಿರಕ್ಕೂ ಕಡಿಮೆ ಕೇಸ್ ಪತ್ತೆಯಾಗಿದ್ದಂತ ಕೊರೋನಾ ಕೇಸ್ , ಇಂದು ಕೊಂಚ ಏರಿಕೆಯಾಗಿದೆ. ಈ ಮೂಲಕ ರಾಜ್ಯಾಧ್ಯಂತ ಕೋವಿಡ್ ಹಾವು-ಏಣಿಯಾಟ ಮುಂದುವರೆದಿದೆ. ಇಂದು 5,339 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ , ಕಳೆದ 24 ಗಂಟೆಯಲ್ಲಿ 1,28,705 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 2,161 ಸೇರಿ …
Read More »ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸ್ಟೇಟಸ್ : ಯುವಕನ ಮೇಲೆ ಹಲ್ಲೆ
ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಎಂಬಲ್ಲಿ 23 ವರ್ಷದ ಯುವಕನಿಗೆ ಮೊಳೆಯಿಂದ ಇರಿದು ಘಾಸಿಗೊಳಿಸಲಾಗಿದೆ. ಅಲ್ಲದೆ, ಯುವಕನ ಮೇಲೆ ಉದ್ರಿಕ್ತರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯಾಳು ಯುವಕನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಲೇಬೆನ್ನೂರು ಪೊಲೀಸ್ ಠಾಣೆ ಎದುರು ಜನರ ಜಮಾವಣೆ ಆಗಿದೆ. 2 ಗುಂಪಿನ ಮುಖಂಡರ …
Read More »ತಾಯಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ
ಬೇಲೂರು: ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ 4 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಉಮೆಯಾನಿ (30) ಮಂಗಳವಾರ ರಾತ್ರಿ ತಮ್ಮ ತಾಯಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನವರಾದ ಉಮೆಯಾನಿ ಕಳೆದ ಒಂದು ವರ್ಷದಿಂದ ಬೇಲೂರಿನ ವೈಡಿಡಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ವೋದಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಸರ್ಕಾರ ಉಪನ್ಯಾಸಕರ ಆಯ್ಕೆಗಾಗಿ ಆನ್ಲೈನ್ನಲ್ಲಿ …
Read More »ಬಜೆಟ್ 2022: ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಜೆಟ್ ಪೂರ್ವಭಾವಿ ಸಭೆಯನ್ನು ಆರಂಭಿಸಿದ್ದಾರೆ. ಈಗಾಗಲೇ ಕಂದಾಯ ಇಲಾಖೆ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಲೋಕೋಪಯೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜೊತೆಗೆ ಸಿಎಂ ಸಭೆ ನಡೆಸಿ, ಪ್ರಸ್ತಾವನೆ, ಬೇಡಿಕೆಗಳನ್ನು ಆಲಿಸಿದ್ದಾರೆ. ನಿನ್ನೆ 8 ಇಲಾಖೆಯೊಂದಿಗೆ ಸಭೆ ನಡೆಸಿದಂತ ಅವರು, ಇಂದು 12 ಇಲಾಖೆಗಳೊಂದಿಗೆ ಬಜೆಟ್ ತಯಾರಿಯ ಪೂರ್ವಭಾವಿ ಸಭೆಯನ್ನ ನಡೆಸಲಿದ್ದಾರೆ. ಈ …
Read More »ಲಾರಿ ಕಾರು ಮಧ್ಯೆ ಅಪಘಾತ :ಶಾಸಕ ಸೇರಿ 3 ಜನರಿಗೆ ಗಾಯ
ಚಾಮರಾಜನಗರ: ತಾಲೂಕಿನ ಬಾಣಳ್ಳಿ ಗೇಟ್ ಬಳಿಯಲ್ಲಿ ಕಳೆದ ರಾತ್ರಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಬಾಲರಾಜು ಅವರ ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮದಿಂದಾಗಿ ಮಾಜಿ ಶಾಸಕ ಬಾಲರಾಜು ಹಾಗೂ ಕಾರು ಚಾಲಕ ಮೋಹನ್ ಮತ್ತು ಕ್ಲೀನರ್ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಈ ಅಪಘಾತದಲ್ಲಿ ಮಾಜಿ ಶಾಸಕ ಸೇರಿ ಮೂವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಮಾಜಿ ಶಾಸಕ ಎಸ್ ಬಾಲರಾಜು ಪ್ರಾಣಾಪಾಯದಿಂದ ಪಾರಾಗಿದ್ದರೇ, …
Read More »ಹಿಜಾಬ್ ವಿವಾದ : ಫೆ. 22ರವರೆಗೆ ಶಾಲಾ-ಕಾಲೇಜು ಬಂದ್
ಬೆಂಗಳೂರು : ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜುಗಳ ಸುತ್ತಲೂ 200 ಮೀಟರ್ವರೆಗೆ ಜನರು ಗುಂಪುಗೂಡದಂತೆ ಇಂದಿನಿಂದ ಫೆಬ್ರುವರಿ.22ರವರೆಗೆ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಕಳೆದೆರಡು ದಿನಗಳಿಂದ ಶಿವಮೊಗ್ಗ, ಉಡುಪಿ ಸೇರಿದಂತೆ ಕೆಲ ಶಾಲಾ-ಕಾಲೇಜುಗಳ ಮುಂದೆ ಹಿಜಾಬ್-ಕೇಸರಿ ವಿಚಾರವಾಗಿ ಸಂಘರ್ಷಕ್ಕೆ ಕಾರಣವಾಗಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನಗಳ ಕಾಲ ಸರ್ಕಾರ ರಜೆ …
Read More »ಹಿಜಾಬ್ ಗಲಾಟೆ : ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ದ ಮೇಲೆ ದಾಳಿ
ಭಾರತದಲ್ಲಿ ಹಿಜಾಬ್ ಗಲಾಟೆ ನಡೀತಿದ್ದಂತೇ ಅತ್ತ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ಸಿಂದ್ ಪ್ರಾಂತ್ಯದ ಸುಕ್ಕುರ್ ಜಿಲ್ಲೆಯ ರೋಹ್ರಿ ನಗರ ಸಮೀಪ ಐತಿಹಾಸಿಕ ಶೆರಾವಲಿ ಮಟ ದೇವಸ್ಥಾನದ ಮೇಲೆ ದಾಳಿ ನಡೆದಿದೆ. ದಾಳಿಕೋರರು ದೇವಸ್ಥಾನದಲ್ಲಿದ್ದ ಐದು ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ್ದಾರೆ. ಜೊತೆಗೆ ದೇವಸ್ಥಾನದಲ್ಲಿದ್ದ ನಗದು, ಚಿನ್ನದ ಕಿರೀಟ, ಆಭರಣ ಮತ್ತು ಭಕ್ತರ ಮೂರು ಬೈಕ್ಗಳನ್ನ ದೋಚಿ ಪರಾರಿಯಾಗಿದ್ದಾರೆ ಆಲ್ ಪಾಕಿಸ್ತಾನ ಹಿಂದೂ ಪಚಾಯತ್ ಹೇಳಿದೆ.
Read More »ಲಾರಿಗೆ ಅಪರಿಚಿತ ವಾಹನ ಡಿಕ್ಕಿ: ಲಾರಿ ಚಾಲಕ ಸಾವು
ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಚಲಿಸುತ್ತಿದ್ದ ಲಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಚಾಲಕ ಕುಳಿತ ಜಾಗದಲ್ಲಿಯೇ ಸಾವಿಗೀಡಾಗಿದ್ದಾನೆ. ಆಂದ್ರಪ್ರದೇಶ ಮೂಲದ ಲಾರಿಯೂ ಕಟ್ಟಿಗೆಯನ್ನ ಹೇರಿಕೊಂಡು ದಾಂಡೇಲಿಯತ್ತ ಹೋಗುವ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಯಾವ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಬೇಕಿದೆ. ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಈಗ ಪರಿಶೀಲನೆಗೆ ಮುಂದಾಗಿದ್ದಾರೆ. ಚಾಲಕನ ಶವ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





