Breaking News

admin

ಹಿರಿಯ ನಾಗರಿಕರಿಗೊಂದು ಸಂತಸದ ಸುದ್ದಿ

ನವದೆಹಲಿ :  ಈಗ ಸರ್ಕಾರ 60 ವರ್ಷ ಮೇಲ್ಪಟ್ಟವರಿಗಾಗಿ ‘ಪ್ರಧಾನಿ ವಯ ವಂದನಾ ಯೋಜನೆ’ ಆರಂಭಿಸಿದೆ. ಇದರ ಅಡಿಯಲ್ಲಿ, ನೀವು ವಾರ್ಷಿಕವಾಗಿ 1,11,000 ರೂ.ವರೆಗೆ ಪಿಂಚಣಿ ಪಡೆಯಬಹುದು. ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ವೃದ್ಧರನ್ನು ಅವರ ಜೀವನದ ನಿರ್ಣಾಯಕ ಹಂತದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಾರಂಭಿಸಲಾಗಿದೆ. ಇದರ ಅವಧಿಯು ಮಾರ್ಚ್ 31, 2020 ರವರೆಗೆ ಇತ್ತು, ಆದರೆ ಈಗ ಅದನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ.

Read More »

ಬಿಜೆಪಿ, ಜೆಡಿಎಸ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ

ಬಾದಾಮಿ: ಬಿಜೆಪಿ, ಜೆಡಿಎಸ್ ನ ಶಾಸಕರು ನಮ್ಮ ಸಂಪರ್ಕದಲ್ಲಿರುವುದು ನಿಜ. ಆದರೆ ಎಷ್ಟು ಜನ ಇದ್ದಾರೆ, ಯಾರ್ಯಾರು ಇದ್ದಾರೆ ಎಂದು ನಾನು ಹೆಸರು ಹೇಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೆಚ್ ಡಿ ಕೆಗೆ ಯಾವಾಗ ಕೋಪ ಬರುತ್ತೋ ಯಾವಾಗ ಬಿಡುತ್ತೋ ಗೊತ್ತಿಲ್ಲ, ನನಗಂತು ಕೋಪ ಬರಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು. …

Read More »

ಲಾರಿ ಪಲ್ಟಿ: ಸ್ಥಳದಲ್ಲೇ ಮೂವರು ಸಾವು

ಹಾವೇರಿ : ಮೆಕ್ಕೆಜೋಳದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವುಪ್ಪಿರುವ ಘಟನೆ ತಾಲೂಕಿನ ಹೊಸರಿತ್ತಿ ಬಳಿಯ ಕೊರಡೂರು ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮೃತರನ್ನ ಹಾವೇರಿ ತಾಲೂಕಿನ ಇಚ್ಚಂಗಿ ಗ್ರಾಮದ ಮಂಜುನಾಥ(33), ಮಂಜುನಾಥ (35) ಮತ್ತು ಆನಂದ (37) ಎಂದು ಗುರುತಿಸಲಾಗಿದೆ. ಮೆಕ್ಕೆಜೋಳದ ಚೀಲ ಲೋಡ್ ಮಾಡಿಕೊಂಡು ಹೊಸರಿತ್ತಿ ಗ್ರಾಮದ ಕಡೆಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿದೆ. ಲಾರಿ ಕೆಳಗೆ‌ ಸಿಲುಕಿಕೊಂಡು ಈ ಮೂವರು ಹಮಾಲರು …

Read More »

ಯಾರಾದ್ರೂ ಪೋನ್ ಮಾಡಿದ್ರೇ ಮೊದ್ಲು ಪೋನ್ ತೆಗಿಯಮ್ಮ : PSI ಗೆ ಕ್ಲಾಸ್ ತೆಗೆದುಕೊಂಡ ಮಾಜಿ ಸಿಎಂ

ಬಾಗಲಕೋಟೆ:  ಪೋನ್ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದ್ರೂ ಸ್ವೀಕರಿಸಬೇಕು. ಆದ್ರೇ.. ಬಾದಾಮಿಯ ಮಹಿಳಾ ಪಿಎಸ್‌ಐ ಒಬ್ಬರು ಕರೆ ಮಾಡಿದ್ರೂ ಪೋನ್ ಪಿಕ್ ಮಾಡಿಲ್ಲ ಅಂತ ಮಾಜಿ ಸಿಎಂ ಸಿದ್ಧರಾಮಯ್ಯ  ಸಖತ್ ಕ್ಲಾಸ್ ತಗೊಂಡಿದ್ದಾರೆ. ಬಾದಾಮಿಯ ಕೃಷ್ಣಾ ಹೆರಿಟೇಟ್ ಗೆ ಆಗಮಿಸಿದ ಸಂದರ್ಭದಲ್ಲಿ ಎದುರಾದಂತ ಮಹಿಳಾ ಪಿಎಸ್‌ಐ ನೇತ್ರಾವತಿ ಪಾಟೀಲ್ ಅವರ ಮೇಲೆ ಗರಂ ಆದಂತ ಅವರು, ಏನಮ್ಮಾ ನೀನು ಪೋನ್ ಮಾಡಿದ್ರೇ ತೆಗೆಯೋದೇ ಇಲ್ಲ. ಯಾರಾದ್ರೂ ಪೋನ್ ಮಾಡಿದ್ರೇ ಮೊದ್ಲು …

Read More »

ಬೆಳಗಾವಿ ಬಿಜೆಪಿ ಸಭೆ ಕುರಿತು ಅಸಮಧಾನ ಹೊರ ಹಾಕಿದ ರಮೇಶ ಜಾರಕಿಹೊಳಿ

‌ ಬೆಂಗಳೂರು : ಅರಣ್ಯ ಸಚಿವ ಉಮೇಶ ಕತ್ತಿ ಮನೆಯಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಬಿಜೆಪಿ ಪ್ರಮುಖ ಮುಖಂಡರ ರಹಸ್ಯ ಸಭೆ ಬಗ್ಗೆ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಅವರು ಸೋಮವಾರ ಪ್ರತಿಕ್ರಿಯೆ ನೀಡಿದ್ದು, ನಾನು ಅಂತಹ ಸಭೆಗೆ ಹೋಗುವುದಿಲ್ಲ,ಪ್ರೀತಿ ಇರುವ ಸಭೆಗೆ ಮಾತ್ರ ಹೋಗುತ್ತೇನೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಬಹಳ ಬುದ್ದಿವಂತ ಇದೆ.ಯಾರು ಎನ್ ಮಾಡ್ತಾರೆ ಅವರಿಗೆ ಗೊತ್ತಿದೆ.ಆವತ್ತಿನ …

Read More »

28 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಸದ್ದಿನ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 28 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ 24-01-2022ರ ಟಿಪ್ಪಣಿಯಂತೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶಿಸಿರೋದಾಗಿ ತಿಳಿಸಿದೆ. ಜಿಲ್ಲಾ …

Read More »

ಆರ್ಥಿಕ ನಷ್ಟ: ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಕಾಶ್ ಟ್ರಾವೆಲ್ಸ್ ಮಾಲೀಕರಾಗಿದ್ದ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ಉಂಟಾದ ನಷ್ಟದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಅರ ಮೃತ ದೇಹ ಪತ್ತೆಯಾಗಿದೆ. ಜನವರಿ 21ರ ಸಂಜೆ ನಿಗೂಢವಾಗಿ ನಾಪತ್ತೆಯಾಗಿದ್ದ ಅವರ ಕಾರು, ಮೊಬೈಲ್ ಫೋನ್ ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿತ್ತು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. …

Read More »

ಮಕ್ಕಳಿಗೆ ಭಾದಿಸುತ್ತೀರುವ ಕೊರೋನಾ : 9 ದಿನ ಶಾಲೆ ಬಂದ್

ಕೊಪ್ಪಳ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕದ ಮಧ್ಯೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದರೂ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ 73 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ 73 ವಿದ್ಯಾರ್ಥಿಗಳು, 6 ಶಿಕ್ಷಕರು ಹಾಗೂ ಒಬ್ಬ ಅಡುಗೆ ಸಹಾಯಕರಿಗೆ ಸೋಂಕು ದೃಢ ಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತವು 9 ಶಾಲೆಗಳಿಗೆ ರಜೆ ನೀಡಿದೆ. ಕೊಪ್ಪಳ ಜಿಲ್ಲೆ …

Read More »

ಗೋವಿಂದ ಶೇರಿಗಾರ್‌ ನಿಧನ

ಯಕ್ಷಗಾನದ ಪ್ರಸಿದ್ಧ ಹಿರಿಯ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್‌(96)ಅವರು ಜ. 23ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿರಿಯ ಕಲಾವಿದ ಮಾರ್ಗೋಳಿಯವರ ಅಗಲುವಿಕೆಗೆ ಯಕ್ಷಗಾನ ಕಲಾರಂಗ ಗಾಢ ಸಂತಾಪ ವ್ಯಕ್ತಪಡಿಸಿದೆ.

Read More »

ಬಸ್​ಗೆ ಡಿಕ್ಕಿ : ಬೈಕ್ ಸವಾರ ಸಾವು

ಬೆಂಗಳೂರು: ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮಿದೇವಿ ನಗರ ನಿವಾಸಿ ಸುರೇಶ್ ಬಾಬು(45)ಮೃತ ದುರ್ದೈವಿ. ವೇಗವಾಗಿ ಬಂದ ಬಿಎಂಟಿಸಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗೆ ಡಿಕ್ಕಿಯಾಗಿದೆ.ಘಟನೆಯಲ್ಲಿ ಹೆಲ್ಮೆಟ್ ಧರಿಸದೆ ಇದ್ದ ಕಾರಣ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಲ್ಲೇಶ್ವರಂ ಸಂಚಾರಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More »