Breaking News

ಮಾನ್ವಿ: ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ಸಾವು

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ರಾಜಲಬಂಡಾ ಅಣೆಕಟ್ಟಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕೊಸಗಿ ಮಂಡಲ ವ್ಯಾಪ್ತಿಯ ಕಂದಕೂರ ಗ್ರಾಮದ ಹತ್ತಿರ ಶುಕ್ರವಾರ ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ತಾಲ್ಲೂಕಿನ ಕುರ್ಡಿ ಗ್ರಾಮದ ಉಮಾವತಿ ಗೋವಿಂದ (35), ರತ್ನ ಮಹಾಂತೇಶ ಸುಂಕೇಶ್ವರ (28) , ಶಿವಾನಂದ ಹನುಮಂತರಾಯ ಕುರ್ಡಿ(24) , ಮಹಾಂತೇಶ್ ಪೀತಾಂಬರ ಕುರ್ಡಿ (24) ಎಂದು ಗುರುತಿಸಲಾಗಿದೆ. ಕುರ್ಡಿ ಗ್ರಾಮದಿಂದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಕೊಸಗಿ ಪಟ್ಟಣಕ್ಕೆ ತೆರಳಿದ್ದ ಕುಟುಂಬಸ್ಥರು ವಾಪಸ್ ಬರುವಾಗ ಈಜಾಡಲು ನದಿಗೆ ಇಳಿದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *