https://youtu.be/5gTrpzgihzs
Read More »ಒಂದು ಧರ್ಮದ ವಿರುದ್ಧ ಸುಪ್ರಭಾತ ಅಭಿಯಾನ ಸರಿಯಲ್ಲ : ಅಶ್ಪಾಕ್ ಕುಮಟಾಕರ
ಹುಬ್ಬಳ್ಳಿ : ರಾಜ್ಯಾದ್ಯಂತ ಇಂದು ಶ್ರೀರಾಮ್ ಸೇನೆ ಕೈಗೊಂಡಿರುವ ಸುಪ್ರಭಾತ ಅಭಿಯಾನವನ್ನ ಸ್ವಾಗತಿಸುವೆ ಆದರೆ ಒಂದು ಧರ್ಮದ ವಿರುದ್ಧ ಸುಪ್ರಭಾತ ಹಚ್ಚುತ್ತಿರುವುದು ತಪ್ಪು ಎಂದು ಕಂಗ್ರೆಸ್ ಮುಖಂಡ ಅಶ್ಪಾಕ್ ಕುಮಟಾಕರ ಹೇಳಿದರು. ನಗರದಲ್ಲಿ ಇಂದು ಮಾತನಾಡಿದ ಅವರು ದೇವನೊಬ್ಬ ನಾಮ ಹಲವು, ಧರ್ಮ ದಿಂದ ವಿಶ್ವಕ್ಕೆ ಶಾಂತಿ ಸಿಗಲಿ . ಧರ್ಮ ಧರ್ಮಗಳ ನಡುವೆ ಒಡಕನ್ನು ಉಂಟುಮಾಡಬಾರದು ಎಂದರು. ನಾವು ಧರ್ಮ ಆಚರಣೆ ಮಾಡುವಾಗ ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸ ಓದುವುದು …
Read More »ಗ್ರಾಮೀಣ ಆಸ್ತಿಗಳ ಮಾಲೀಕತ್ವದ ಹಕ್ಕು ದಾಖಲೆಗಳ ವಿತರಣೆ
ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿ ಅಲ್ಲಾಪುರ,ಯರಿನಾರಾಯಣಪುರ,ಕಡಪಟ್ಟಿ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ, ಭೂದಾಖಲೆಗಳ ಇಲಾಖೆ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಗ್ರಾಮೀಣ ಆಸ್ತಿಗಳ ಮಾಲೀಕತ್ವದ ಹಕ್ಕು ದಾಖಲೆಗಳ ವಿತರಣೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಚಿದಾನಂದ ಕುಸುಗಲ್ ತಹಶೀಲ್ದಾರ್ ಅಶೋಕ ಶಿಗ್ಗಾವಿ,ತಾಪಂ ಅಧಿಕಾರಿ ಡಾ.ಮಹೇಶ ಕುರಿ, ಎಸ್ ವಿ ಕುಲಕರ್ಣಿ, ಪಿ.ಡಿ.ಓ ಎಸ್ …
Read More »ಹಸಿರು ಸಂಚಾರಿ ಪಥ ಲೋಕಾರ್ಪಣೆ
ಹುಬ್ಬಳ್ಳಿ : ಅವಳಿ ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯ ರಾಣಿಚನ್ನಮ್ಮನಗರ ಸೇತುವೆ ಹತ್ತಿರ 8 ಕೋಟಿ ರೂ . ವೆಚ್ಚದಲ್ಲಿ ನಿರ್ಮಾಣವಾದ 630 ಮೀಟರ್ ಉದ್ದದ ಮೊದಲ ಹಂತದ ಹಸಿರು ಸಂಚಾರಿ ಪಥವನ್ನು ಲೋಕಾರ್ಪಣೆಗೊಳಿಸಿ , 96 ಕೋಟಿ ರೂ . ವೆಚ್ಚದಲ್ಲಿ ಬಿಡನಾಳವರೆಗೆ ಎರಡನೇ ಹಂತದ ಹಸಿರು ಸಂಚಾರಿ ಪಥ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು …
Read More »ವಿವಿಧ ಕಾಮಗಾರಿ ಚಾಲನೆ ನೀಡಿದ ಅಮೃತ ದೇಸಾಯಿ
ಸೋಮಪುರ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಧಾರವಾಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಶಾಲಾ ಕೊಠಡಿಗಳ ಉದ್ಘಾಟನೆ . ಮತ್ತು ಸೋಮಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 2021-22 ನೇ ಸಾಲಿನ ಶೀರ್ಷಿಕೆ 3054 ರಾಜ್ಯ ಹೆದ್ದಾರಿ ನಿರ್ವಹಣೆ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ ಸೂಪಾ ಅಣ್ಣಿಗೇರಿ ರಾಜ್ಯ ಹೆದ್ದಾರಿ 28 ರ ಕಿಮೀ 73 ರಿಂದ 84 . 72 …
Read More »ಯೋಧನಿಂದ ಹಾಡಹಗಲೇ ಗುಂಡು ಹಾರಿಸಿ ಮಹಿಳೆ ಬರ್ಬರ ಕೊಲೆ
ಬಾಗಲಕೋಟೆ: ಹಾಡಹಗಲೇ ಗುಂಡು ಹಾರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ನುಗ್ಲಿ ಓಣಿಯಲ್ಲಿ ನಡೆದಿದೆ. ದ್ಯಾಮವ್ವ ಪೂಜಾರಿ (45) ಹತ್ಯೆಯಾದ ಮಹಿಳೆ. ಕಾರಿನಲ್ಲಿ ಬಂದು ಗುಂಡು ಹಾರಿಸಿ ಪರಾರಿ ಆಗಿದ್ದ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ದ್ಯಾಮವ್ವನನ್ನು ಆಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೂಟೌಟ್ ಮಾಡಿದವನು ಯೋಧನೆಂದು …
Read More »ಸಿಡಿಲು ಬಡಿದು ಹಾವೇರಿ ಮಹಿಳೆಗೆ ಗಾಯ
ಹಾವೇರಿ: ಹಾವೇರಿ ಜಿಲ್ಲೆಯ ಹಲವೆಡೆ ಸಿಡಿಲು ಗುಡುಗಿನೊಂದಿಗೆ ಮಳೆರಾಯನ ಆರ್ಭಟ ನಡೆದಿದ್ದು, ಹಾವೇರಿ, ಸವಣೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಗೆ ಗಾಯವಾಗಿದೆ. ಸಣ್ಣಮ್ಮ ಕರಕಣ್ಣವರ ಎಂಬ ಮಹಿಳೆಗೆ ಗಾಯವಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ಮಳೆ ಬರುತ್ತಿದ್ದ ವೇಳೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಗಾಯವಾಗಿತ್ತು. ಗಾಯಾಳುವಿಗೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Read More »ಸಿಡಿಲು ಬಡಿದು ಕುರಿಗಾಹಿ ಯುವಕ ಸಾವು
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಬಳಿ ಸಿಡಿಲು ಬಡಿದು ಕುರಿಗಾಹಿ ಯಶವಂತ್ ಎಂಬ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿಯಲ್ಲಿ ಕುರಿ ಮೇಯಿಸಲು ತೆರಳಿದ್ದ ಯಶವಂತ್ ಸಿಡಿಲಿಗೆ ಬಲಿಯಾಗಿದ್ದಾನೆ. ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »ಸಿಡಿಲು ಬಡಿದು ವೃದ್ಧ ಸಾವು
ಕೊಪ್ಪಳ: ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ವೃದ್ಧ ಸಾವನ್ನಪ್ಪಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ನಡೆದಿದೆ. ಜಮೀನಿಗೆ ತೆರಳಿದ್ದಾಗ ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ಶಿವಪ್ಪ ಸಾವನ್ನಪ್ಪಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





