ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಜಮೀನಿನಲ್ಲಿ ಬೆಂಕಿ ತಗುಲಿ ಕಬ್ಬು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಕಡಣಿ ಗ್ರಾಮದಲ್ಲಿ ನಡೆದಿದೆ. ರೈತರಾದ ಪ್ರೇಮಾನಂದ ಗುಗ್ಗವಾಡ ಎಂಬುವವರಿಗೆ ಸೇರಿದ ಜಮೀನು ಬೆಂಕಿಗಾಹುತಿ ಆಗಿದ್ದು , ಲಕ್ಷಾಂತರ ಮೌಲ್ಯದ ಕಬ್ಬು ವಿದ್ಯುತ್ ಸ್ಪರ್ಶದಿಂದ ಹಾನಿಯಾಗಿದೆ. ಮಾಹಿತಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ, ಆಲಮೇಲ ಪೊಲೀಸ ಠಾಣಾ …
Read More »ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಖುಷಿ ಸುದ್ದಿ
ದೆಹಲಿ: ರೈಲು ಪ್ರಯಾಣ ಆರಾಮದಾಯಕ ಪ್ರಯಾಣಗಳಲ್ಲಿ ಒಂದು. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೇವೆಗಳನ್ನು ಶುರು ಮಾಡ್ತಿರುತ್ತದೆ. ಈಗ ಮಹಿಳಾ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಹಿಳೆಯರು ರೈಲಿನಲ್ಲಿ ಸೀಟಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಬಸ್ ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳ ವ್ಯವಸ್ಥೆ ಇರುವಂತೆ ಭಾರತೀಯ ರೈಲ್ವೇ ಕೂಡ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ. ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಬರ್ತ್‌ಗಳನ್ನು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. …
Read More »ಆಟೋರಿಕ್ಷಾದ ಮೇಲೆ ಬಿದ್ದ ಕಂಟೇನರ್ ಟ್ರಕ್..! ನಾಲ್ವರ ದಾರುಣ ಸಾವು
ದೆಹಲಿ : ಚಲಿಸುತ್ತಿದ್ದ ಆಟೋ ಮೇಲೆ ಕಂಟೇನರ್ ಟ್ರಕ್ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆಯು ದೆಹಲಿಯ ಐಜಿಐ ಸ್ಟೇಡಿಯಂ ಬಳಿ ಸಂಭವಿಸಿದೆ. ಇಂದು ಮುಂಜಾನೆ 6:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಕಂಟೇನರ್ ಆಟೋರಿಕ್ಷಾದ ಮೇಲೆ ಬೀಳುತ್ತಿದ್ದಂತೆಯೇ ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಂಟೇನರ್ ಟ್ರಕ್ ಚಲಾಯಿಸುತ್ತಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಸ್ಥಳಕ್ಕೆ …
Read More »ಖಡಕ್ ಖಾಕಿಯೊಳಗಿರೋ ಮೃದು ಹೃದಯದ ನೋವಿ, ಕಥೆ..!
ಆರ್’ಎಸ್‌ಎಸ್ ಕೈಗೊಂಬೆಯಾದ ಬಳಿಕ ಗೂಳಿಹಟ್ಟಿ ಚಂದ್ರಶೇಖರ್ ನಿಂದ ಮತಾಂತರ ವಿಚಾರ ಪ್ರಸ್ತಾಪ; ಕಾಂಗ್ರೆಸ್
ಬೆಂಗಳೂರು: ಹಲವು ವರ್ಷಗಳ ಹಿಂದೆಯೇ ತಮ್ಮ ತಾಯಿ ಮತಾಂತರಗೊಂಡಿದ್ದರೂ ಈಗೇಕೆ ಗೂಳಿಹಟ್ಟಿ ಚಂದ್ರಶೇಖರ್ ಅವರು ಮತಾಂತರ ವಿಚಾರವನ್ನು ಪ್ರಸ್ತಾಪಿಸಿದರು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಧ್ರುವನಾರಾಯಣ್ ಅವರು, ಗೂಳಿಹಟ್ಟಿ ಚಂದ್ರಶೇಖರ್ ಅವರ ತಾಯಿ ಹಲವು ವರ್ಷಗಳ ಹಿಂದೆಯೇ ಮತಾಂತರಗೊಂಡಿದ್ದರು. ಆದರೆ, ಈಗ ಆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆರ್’ಎಸ್‌ಎಸ್ ಕೈಗೊಂಬೆಯಾದ ಬಳಿಕ ಗೂಳಿಹಟ್ಟಿ ಅವರು ಈ ವಿಚಾರವನ್ನು …
Read More »1 ರೂ. ಪ್ಲಾನ್ ಪರಿಚಯಿಸಿದ ಜಿಯೋ
ಮುಂಬೈ: ಜಿಯೋ ತನ್ನ 1 ರೂ. ಪ್ರಿ ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೇ ಆರಂಭಿಸಿದೆ. ಇದರ ಮೂಲಕ ಬಳಕೆದಾರರು ಅತೀ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಬಳಸಬಹುದು. ಈ ಅಗ್ಗದ ಪ್ರಿಪೇಯ್ಡ್ ಯೋಜನೆ ಅತೀ ಹೆಚ್ಚು ಇಂಟರ್‌ನೆಟ್ ಬಳಕೆ ಮಾಡದೇ ಇರುವ ಜನರಿಗೆ ಉಪಯೋಗವಾಗಲಿದೆ. ಈ 1 ರೂ.ಯ ಯೋಜನೆ 100ಜಿಬಿ ಡೇಟಾದೊಂದಿಗೆ 30 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಈ ಯೋಜನೆ ಮೈಜಿಯೋ ಅಪ್ಲಿಕೇಶನ್‌ನಲ್ಲಿ ಗೋಚರವಾಗುತ್ತಿದ್ದು, ಸದ್ಯ ಯಾವುದೇ ವೆಬ್‌ಸೈಟ್‌ನಲ್ಲಿ ತೋರಿಸುತ್ತಿಲ್ಲ. …
Read More »ಅವೈಜ್ಞಾನಿಕ ಹೈವೇ ಕಾಮಗಾರಿ – ಸರಣಿ ಅಪಘಾತ 7 ಮಂದಿಗೆ ಗಾಯ
ಚಿಕ್ಕಬಳ್ಳಾಪುರ: ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಸರಣಿ ಅಪಘಾತ ಸಂಭವಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ವಾಪಸಂದ್ರ ಸೇತುವೆ ಬಳಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಗುಂಡಿ ಬಿದ್ದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಾತ್ಕಾಲಿಕವಾಗಿ ತೇಪೆ ಹಾಕಲಾಗಿದೆ. ಆದರೆ ತೇಪೆ ಹಾಕಿರುವ ಜಾಗದಲ್ಲಿ ಮತ್ತೆ ಹಳ್ಳ ಬಿದ್ದಿದ್ದು, ಹೈವೇಯಲ್ಲಿ ಅತಿ ವೇಗವಾಗಿ ಬರುವ ವಾಹನಗಳು ಹಳ್ಳದಲ್ಲಿ ಬಿದ್ದು ಜಂಪ್ ಹೊಡೆಯುತ್ತಿದೆ. ಇಂದು ಸಹ …
Read More »ಪ್ರತಿ ಶುಕ್ರವಾರ ಆರ್ಯನ್ ಖಾನ್ ಎನ್ಸಿಬಿಗೆ ಹೋಗುವ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್
ಹೈದರಾಬಾದ್ : ಕ್ರೂಸ್ ಡ್ರಗ್ಸ್ ಪ್ರಕರಣ ಸಂಬಂಧ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆರ್ಯನ್ ಖಾನ್ ಇನ್ಮುಂದೆ ಪ್ರತಿ ಶುಕ್ರವಾರ ಎನ್ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆರ್ಯನ್ ಖಾನ್ಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ನೀಡಿತ್ತು. ಅದರಂತೆ ಎನ್ಸಿಬಿ ಕಚೇರಿಗೆ ಪ್ರತಿ ಶುಕ್ರವಾರ ಆರ್ಯನ್ ತೆರಳಿ ಸಹಿ ಹಾಕುವುದು ಷರತ್ತಿನಲ್ಲಿತ್ತು. ಜಾಮೀನು ಪಡೆದ ಆರೋಪಿ ಊರು …
Read More »ಸದ್ಯಕ್ಕೆ ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲೆ ತೆರೆಯದಂತೆ ಸೂಚನೆ
ದೆಹಲಿ: ದೇಶದಲ್ಲಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು ತೆರೆಯದಂತೆ ಕೇಂದ್ರ ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಸೂಚನೆ ನೀಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಮತ್ತು ಲಸಿಕೆಗಳು ಲಭ್ಯವಾಗುವವರೆಗೂ ಆನ್ ಲೈನ್ ಶಿಕ್ಷಣ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಆರ್ಗನೈಸ್ಡ್ ಮೆಡಿಸಿನ್ ಅಕಾಡೆಮಿಕ್ ಗಿಲ್ಡ್ ನ ಹಿರಿಯ ಆರೋಗ್ಯ …
Read More »ಸಿಲಿಕಾನ್ ಸಿಟಿಯಲ್ಲಿ ಸಿದ್ಧವಾಗುತ್ತಿದೆ 150 ಕೆಜಿ ಹೊರಬಲ್ಲ ಡ್ರೋನ್
ಬೆಂಗಳೂರು: ಇನ್ನು ಮುಂದೆ ಡ್ರೋನ್ ಮೂಲಕ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಹುದು. ಹೌದು. 10, 15 ಕೆಜಿ ಸಾಮರ್ಥ್ಯ ವಸ್ತುಗಳನ್ನು ಈಗ ಸುಲಭವಾಗಿ ಸಾಗಿಸಬಹುದು. ಆದರೆ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಲ್ಲ ಡ್ರೋನ್ ತಯಾರಾಗುತ್ತಿದೆ. ಈ ಡ್ರೋನ್ ಬೆಂಗಳೂರಿನಲ್ಲೇ ತಯಾರಾಗುತ್ತಿರುವುದು ವಿಶೇಷ. ಹೆಚ್‌ಎಲ್-15 ಎಂದು ಕರೆಯಲಾಗುತ್ತಿರುವ ಡ್ರೋನ್ ಸುಮಾರು 150 ಕೆಜಿ ತೂಕವನ್ನು ಹೊರಬಲ್ಲದು ಮಾತ್ರವಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಕ್ರಮಿಸಬಲ್ಲದು. ಅಷ್ಟೇ ಅಲ್ಲದೇ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





