Breaking News

ಸೆರ್ವರ್‌ ದೋಷದಿಂದ ರೊಚ್ಚಿಗೆದ್ದ ಜನರು; ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳ ಜೊತೆಗೆ ಮಾತಿನ ಚಕಮಕಿ

ಧಾರವಾಡ: ಸರ್ವರ್ ದೋಷದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಬರುವ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರನ್ನು ನಿಯಂತ್ರಿಸಲು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಹೌದು! ಧಾರವಾಡ ಜಿಲ್ಲಾ ಆಸ್ಪತ್ರೆಯ ನೋಂದಣಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ಸರ್ವರ್ ದೋಷ ಉಂಟಾಗಿದ್ದು, ನೋಂದಣಿ ಕಾರ್ಯ ವಿಳಂಬವಾಗುತ್ತಿದೆ. ಜನರು ಸಾಲುಗಟ್ಟಿ ನಿಂತು ಬೇಸತ್ತು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಜೋತೆ ವಾಗ್ವಾದಕ್ಕಿಳಿದ ಘಟನೆ ಇಂದು ನಡೆದಿದೆ. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ, ಸರ್ವರ್ ದೋಷದಿಂದ ಸಮಸ್ಯೆ ಆಗುತ್ತಿದೆ ಎಂದು ಹೇಳಿದರೂ, ಒಪ್ಪದ ಜನರು ಸಿಬ್ಬಂದಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ. ಪದೇ ಪದೇ ಈ ರೀತಿ ಸರ್ವರ್ ದೋಷದಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಸಿಬ್ಬಂದಿ ಸಹ ಅಸಹಾಯಕತೆ ವ್ಯಕ್ತಪಡಿಸಿದರು.

Share News

About BigTv News

Check Also

ಹೆಸ್ಕಾಂ ಎಇಇ ದಂಪತಿ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ..! ಅಪಾರ ಚಿನ್ನ, ನಗದು ಪತ್ತೆ ಶಂಕೆ..

ಬೆಳ್ಳಂಬೆಳಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್..! ಅಕ್ಷಯ ಕಾಲೋನಿ ಮನೆಯಲ್ಲಿ ಚಿನ್ನದ ರಾಶಿ..? ಗೋಲ್ಡ್ ಸ್ಮಿತ್ ಕರೆಸಿ ತೂಕ ಹಾಕಿಸಿದ ಲೋಕಾಯುಕ್ತರು..! …

Leave a Reply

Your email address will not be published. Required fields are marked *