ಚಿಕ್ಕೋಡಿ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಜನತೆ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ನಿರಾಶ್ರಿತರಿಗೆ ನಿರಾಶ್ರಿತರಿಗೆ ಊಟ ಹಾಗೂ ಬಿಸ್ಕೇಟ್ ವಿತರಣೆ ಮಾಡುವ ಮೂಲಕ ಕರ್ನಾಟಕ ನವ ನಿರ್ಮಾಣ ಪಡೆಯ ಯುವಕರು ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗದ ನಿರಾಶ್ರಿತರಿಗೆ ಯುವಕರು ಸಹಾಯ ಹಸ್ತ ಚಾಚಿದ್ದಾರೆ. ಜನರಿಗೆ ಒಂದು ದಿನದ ಊಟ ಹಾಗೂ ಮಕ್ಕಳಿಗೆ ಬಿಸ್ಕೇಟ ನೀಡಿ ಸಹಾಯ ಮಾಡಿದ್ದಾರೆ. ಅಷ್ಟೇ …
Read More »ಯುಪಿ ಯೋಧ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಟೈನಲ್ಲಿ , ಪಾಟ್ನಾ ವಿರುದ್ಧ ಹರಿಯಾಣ ಜಯ
ಪಾಟ್ನಾ: ಭರ್ಜರಿ ಪೈಪೋಟಿ ಕಂಡುಬಂದ ಯುಪಿ ಯೋಧ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.ಯೋಧ ತಂಡ ಮೊದಲಾರ್ಧದಲ್ಲಿ 16-11 ರಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಲೈವಾಸ್ ರೈಡರ್ಗಳು ಉತ್ತಮ ಪ್ರದರ್ಶನ ತೋರಿ 28-28 ರಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಬಲಿಷ್ಠ ಪಾಟ್ನಾ …
Read More »ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್ ಪಾಂಡ್ಯ ಗೆ ಸಹೋದರ ಹಾರ್ದಿಕ್ ಪಾಂಡ್ಯ ಅವರಿಂದ ಟ್ವಿಟರ್ನಲ್ಲಿ ಅಭಿನಂದನೆ .
ಮುಂಬೈ: ವಿಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0 ಯಲ್ಲಿ ಗೆದ್ದಿರುವ ಭಾರತ ತಂಡವನ್ನು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್ ಪಾಂಡ್ಯರನ್ನು ಅವರ ಸಹೋದರ ಹಾರ್ದಿಕ್ ಪಾಂಡ್ಯ ಪ್ರಶಂಸಿಸಿದ್ದಾರೆ.ಮೂರು ಪಂದ್ಯಗಳಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪಾಂಡ್ಯ ಎರಡನೇ ಪಂದ್ಯದದಲ್ಲಿ ಕೊನೆಯ ಓವರ್ನಲ್ಲಿ 2 ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾಗಿದ್ದರು. ಅಲ್ಲದೆ ಮೊದಲನೇ ಪಂದ್ಯದಲ್ಲಿ 1 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದರು. …
Read More »ವಿಶ್ವಕಪ್ ಟೂರ್ನಿಯ ವಿಡಿಯೋ ತುಣಕುಗಳು 460 ಕೋಟಿಗೂ ಹೆಚ್ಚು ವೀಕ್ಷಣೆ : ಐಸಿಸಿ
ಲಂಡನ್: 2019 ರ ವಿಶ್ವಕಪ್ ಟೂರ್ನಿಯ ವೀಕ್ಷಣೆ ವಿವರವನ್ನು ಐಸಿಸಿ ಬಹಿರಂಗಗೊಳಿಸಿದ್ದು, ಈ ಬಾರಿ ದಾಖಲೆಯ ವೀಕ್ಷಣೆಯಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವಿಡಿಯೋ ತುಣಕುಗಳನ್ನು ವಿಶ್ವಾದ್ಯಂತ 460 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಗಾಗಿದೆ. ಇನ್ನು ಫೇಸ್ಬುಕ್ ಹಾಗೂ ಯೂಟ್ಯೂಬ್ಗಳಲ್ಲಿ 350 ಕೋಟಿ ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.ಇನ್ನು ಇಡೀ ಟೂರ್ನಿಯಲ್ಲಿ 3.1 ಕೋಟಿ ಟ್ವೀಟ್ಗಳು ಐಸಿಸಿ ವಿಶ್ವಕಪ್ ಕುರಿತು ಬಂದಿದೆ. ಐಸಿಸಿ ಇನ್ಸ್ಸ್ಟಾಗ್ರಾಂ …
Read More »ಗಂಡುಮೆಟ್ಟಿದ ನಾಡಿನ ಹೃದಯಭಾಗದಂತಿರುವ ರಾಣಿ ಚೆನ್ನಮ್ಮ ಪುತ್ಥಳಿ ಶಿಥಿಲ
ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡಿನ ಪ್ರಸಿದ್ಧ ವೃತ್ತವೇ ಚೆನ್ನಮ್ಮ ಸರ್ಕಲ್. ಹುಬ್ಬಳ್ಳಿಗೆ ಮುಕುಟದಂತಿರುವ ಕೇಂದ್ರ ಸ್ಥಳದಲ್ಲಿರುವ ರಾಣಿ ಚೆನ್ನಮ್ಮನ ಪುತ್ಥಳಿ ಶಿಥಿಲಗೊಂಡಿದೆ. ಪುತ್ಥಳಿಯ ಸುತ್ತಮುತ್ತ ಬಿರುಕುಗಳು ಕಾಣಿಸಿಕೊಂಡಿವೆ.ಸುಮಾರು 40 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಪುತ್ಥಳಿಗೆ ಈಗ ಕಂಟಕ ಎದುರಾಗಿದೆ. ಚೆನ್ನಮ್ಮ ಪುತ್ಥಳಿಯ ತಳಭಾಗದ ಬೆಸ್ಮೆಂಟ್ಗೆ ಹೊಂದಿಸಿದ ಕಲ್ಲುಗಳು ಹೊರಬಂದಿವೆ. ಹೀಗಾಗಿ ಚೆನ್ನಮ್ಮ ಮೂರ್ತಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ 8 ಪ್ರಮುಖ ರಸ್ತೆಗಳು ಒಂದೆಡೆ …
Read More »ವಿದ್ಯುತ್ ತಂತಿ ತಗುಲಿ ತಾಯಿ ಮಗಳ ದುರ್ಮರಣ
ಚಿಕ್ಕೋಡಿ : ಜಾನುವಾರುಗಳು ನಿಲ್ಲುವ ಸ್ಥಳದಲ್ಲಿ ಜಲ್ಲಿಕಲ್ಲು (ಗರಸು) ಹಾಕಬೇಕೆಂದು ತಾಯಿ ಮಗಳು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ನಡೆದಿದೆ.ಪಾರ್ವತಿ ರೂಪನೂರ (68) ತಾಯಿ ಕೃಷ್ಣಾಬಾಯಿ ವಾಗ್ಮುಡೆ (48) ಮಗಳು ಮೃತ ದುರ್ದೈವಿಗಳು.ಜಾನುವಾರು ನಿಲ್ಲುವ ಜಾಗ ಮಳೆಯಿಂದ ಕೆಸರಾಗಿದ್ದರಿಂದ ಜಲ್ಲಿ ತರಲು ಹೋಗಿದ್ದ ತಾಯಿ ಮಗಳು ಜಲ್ಲಿಯ ಮೇಲೆ ಬಿದ್ದಿದ್ದ ತಂತಿಯನ್ನು ಸರಿಸುವಾಗ ವಿದ್ಯುತ ಸ್ಪರ್ಶಿಸಿ ಸ್ಥಳದಲ್ಲೇ ಮಗಳು …
Read More »ಭಾರೀ ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಆಗಸ್ಟ್ 9 ರವರೆಗೆ ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. …
Read More »ಬೆಂಗಳೂರು ಪುಣೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೂಕುಸಿತ
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಇದರಿಂದ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಪರಿಣಾಮನಾಳೆ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ.ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದರು.ಬೆಳಗಾವಿ ಪೊಲೀಸರು ರಾಜ್ಯದ ಗಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.
Read More »ವರುಣನ ಆರ್ಭಟಕ್ಕೆ ಚಿಕ್ಕೋಡಿಯಲ್ಲಿ ಮತ್ತೊಂದು ಬಲಿ
ಚಿಕ್ಕೋಡಿ: ಭೀಕರ ಮಳೆಯಿಂದಾಗಿ ಗೋಡೆ ಕುಸಿದು ವ್ಯಕ್ತಿ ಬಲಿಯಾಗಿರುವ ಘಟನೆ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಾಳಪ್ಪಾ ಕಬ್ಬೂರಿ ೭೫ ಮೃತ ದುರ್ದೈವಿ. ಮಳೆ ಹಿನ್ನೆಲೆಯಲ್ಲಿ ಗೋಡೆ ಕುಸಿದು ಸಾವು ಸಂಭವಿಸಿದೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಇಂಜಿನಿಯರಿಂಗ್ ಶಿಕ್ಷಣ ವರದಾನ
ಮಂಡ್ಯ: ಸುಭದ್ರ ರಾಷ್ಟದ ನಿರ್ಮಾಣಕ್ಕೆ ತಾಂತ್ರಿಕ ಶಿಕ್ಷಣವು ವರದಾನವಾಗಿದೆ. ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶ್ರದ್ಧೆ ಆಸಕ್ತಿಯಿಂದ ವ್ಯಾಸಂಗ ಮಾಡಿ ನಾಡಿನ ಶ್ರೇಷ್ಠ ಎಂಜಿನಿಯರುಗಳಾಗಿ ಹೊರಹೊಮ್ಮಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶೇಷಾಧಿಕಾರಿ ಎಸ್.ಸಿ.ಅರವಿಂದ್ ಅವರು ತಿಳಿಸಿದರು. ಇಂದು ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಆರ್. ಪೇಟೆಯಲ್ಲಿ ಆಯೋಜಿಸಲಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಥಮವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಎಂಜಿನಿಯರುಗಳು ತಮ್ಮಲ್ಲಿನ ತಾಂತ್ರಿಕ ಕೌಶಲ್ಯವನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





