Breaking News

admin

ರಾಜ್ಯದ ಬೆಳವಣಿಗೆ ಹಿಂದೆ ಬಿಜೆಪಿ ಕೈವಾಡ ಸ್ಪಷ್ಟ; ಹೊರಟ್ಟಿ

ಹುಬ್ಬಳ್ಳಿ: ರಾಜ್ಯದ ಎಲ್ಲ ಬೆಳವಣಿಗೆ ಹಿಂದೆ ಬಿಜೆಪಿಯ ಕೈವಾಡವಿದ್ದು, ಶಾಸಕರು, ಸಚಿವರು ರಾಜೀನಾಮೆ ನೀಡಿದಾಗಲು ಅವರಿಗೆ ವಿಶೇಷ ವಿಮಾನ, ಹೊಟೆಲ್ ಒದಗಿಸಿದ್ದು ಬಿಜೆಪಿ, ಬಿಜೆಪಿ ಕುದುರೆ ವ್ಯಾಪಾರ ಮಾಡಿದ್ದು ಸತ್ಯ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಎಲ್ಲರಿಗೂ ಸಚಿವರಾಗಲು ಸಾಧ್ಯವಿಲ್ಲ. ಇದನ್ನು ಅರಿಯದವರು ರಾಜೀನಾಮೆ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇನ್ನೂ ಬಿಜೆಪಿ ಸಹಿತ ಮೈತ್ರಿ ಸರ್ಕಾರ ಕೆಡವಿ …

Read More »

ಅತೃಪ್ತ ಶಾಸಕರಿಗೆ ಬಿಗ್‌ ಶಾಕ್ ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕರಿಸಲಾಗಲ್ಲ ಸ್ಪೀಕರ್‌ ಸ್ಪಷ್ಟನೆ

ಬೆಂಗಳೂರು: ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ನೇರವಾಗಿ ಸಿಗ್ನಲ್‌ ಫ್ರೀ ಸಾರಿಗೆ ವ್ಯವಸ್ಥೆಯಡಿ ವಿಧಾನಸೌಧಕ್ಕೆ ಆರು ಗಂಟೆ ಮೂರು ನಿಮಿಷಕ್ಕೆ ಆಗಮಿಸಿ ಸ್ಪೀಕರ್‌ ಕಚೇರಿಯನ್ನು ತಲುಪಿ ತಮ್ಮ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.ಭೈರತಿ ಬಸವರಾಜ್‌, ರಮೇಶ್‌ ಜಾರಕಿಹೊಳಿ, ಶಿವರಾಮ್‌ ಹೆಬ್ಬಾರ್‌, ಬಿಸಿ ಪಾಟೀಲ್‌, ಗೋಪಾಲಯ್ಯ, ನಾರಾಯಣ ಗೌಡ, ವಿಶ್ವನಾಥ್‌, ಮಹೇಶ್‌ …

Read More »

ನಾಗರಾಜ ಜುಮ್ಮಣ್ಣವರ್ ಗೆ ಒಲಿದ ವಿಜಯಲಕ್ಷ್ಮಿ

ಕೊಪ್ಪಳ ಸರ್ಕಾರಿ ನೌಕರರ ಸಂಘದ ಫಲಿತಾಂಶ ಪ್ರಕಟ ಕೊಪ್ಪಳ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಾಗರಾಜ್ ಜುಮ್ಮಣ್ಣವರ್ ಬಣ ಜಯ ಸಾಧಿಸಿದೆ‌. ಆರೋಗ್ಯ ಇಲಾಖೆಯ ನಾಗರಾಜ್ ಜುಮ್ಮಣ್ಣವರ ಕಂದಾಯ ಇಲಾಖೆಯ ಮಂಜುನಾಥ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಜಿಲ್ಲಾ ಅದ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಒಟ್ಟು ೬೮ ಮತಗಳಿದ್ದು ಇದರಲ್ಲಿ ೫೧ ಮತಗಳನ್ನು ಪಡೆದು …

Read More »

ಕೋಲಾರ ಜಿಲ್ಲೆಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ

ಕೋಲಾರ : ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿದ್ದರೂ, ಸಿಎಂ ಕುಮಾರಸ್ವಾಮಿ ಅವರು ಕೋಲಾರ ಜಿಲ್ಲೆಗೆ ಭರ್ಜರಿ ಗಿಪ್ಟ್ ಕೊಟ್ಟಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಎಂವಿಕೆ ಗೋಲ್ಡನ್ ಡೇರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. 50 ಕೋಟಿ ರುಪಾಯಿ ಅನುದಾನದಲ್ಲಿ ಮೊದಲನೇ ಕಂತಾಗಿ 25 ಕೋಟಿ ರುಪಾಯಿ ಹಣ ಬಿಡುಗಡೆ ಮಾಡುವಂತೆ ಸಿಎಂ ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಆದೇಶಿಸಿದ್ದಾರೆ. ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಿಎಂ …

Read More »

ಸಿಲಿಂಡರ್ ಸ್ಪೋಟದಿಂದ ಕುಸಿದ ಮನೆ ಛಾವಣಿ

ಕೋಲಾರ : ಸಿಲಿಂಡರ್ ಸ್ಪೋಟಗೊಂಡು ಮನೆಯ ಛಾವಣಿ ಕುಸಿದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗ್ರಾಮದ ರಾಜಪ್ಪನವ್ರ ಮನೆಯ ಸಿಲಿಂಡರ್ ಸ್ಪೋಟಗೊಂಡಿದ್ದು, ಸ್ಪೋಟಗೊಂಡ ಸಮಯದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಸಿಲಿಂಡರ್ ಸ್ಪೋಟಕ್ಕೆ ಮನೆಯ ಛಾವಣಿ ಕುಸಿದಿದ್ದು, ಗೋಡೆಗಳು ಬೀಳುವ ಹಂತಕ್ಕೆ ತಲುಪಿದೆ. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, 2 ಲಕ್ಷ ರುಪಾಯಿಗೂ ಅಧಿಕ ಹಾನಿ ಉಂಟಾಗಿದೆ. …

Read More »

ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಮಂಡ್ಯ: ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಕೃಷ್ಣಂರಾಜು ಮತ್ತು ಯೋಜನಾ ನಿರ್ದೇಶಕರಾದ ಗಣಪತಿನಾಯಕ ಅವರ ನೇತೃತ್ವದಲ್ಲಿ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯು ನಡೆಯಿತು ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ ಸರ್ಕಾರದ ಕಾರ್ಯಕ್ರಮಗಳನ್ನು ಫಲಪ್ರದವಾಗಿ ಜಾರಿಗೊಳಿಸಿ ಬಡಜನರ ಸೇವೆಯಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು ಎಂದು ಯೋಜನಾ …

Read More »

ಆಸ್ತಿ ವಿಷಯಕ್ಕೆ ಮಾರಾಮಾರಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ

ಮಂಡ್ಯ: ಜಿಲ್ಲೆಯ ಬೂಕನಕೆರೆ ಹೋಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ಸವತಿಯರ ನಡುವೆ ಘರ್ಷಣೆ ನಡೆದಿದೆ.ಘರ್ಷಣೆಯಲ್ಲಿ ಹಿರಿಯ ಹೆಂಡತಿ ಲಕ್ಷ್ಮೀ(35) ಅವರಿಗೆ ಕಿರಿಯ ಹೆಂಡತಿ ಮಂಜಮ್ಮ, ಪತಿ ಕೃಷ್ಣಯ್ಯ ಮತ್ತು ಮಗ ಅವಿಕಿರಣ ಅವರು ಸೇರಿಕೊಂಡು ಮಚ್ಚು ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಲೆ ಮತ್ತು ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಿರಕ್ಷಣೆ ಕೋರಿ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.‌ದೂರು ದಾಖಲಿಸಿಕೊಂಡಿರುವ …

Read More »

ಶಾಸಕ ಮಹೇಶ ಮನೆಗೆ ಪೋಲಿಸ್ ಬಿಗಿ ಭದ್ರತೆ

ಚಿಕ್ಕೋಡಿ: ಮೈತ್ರಿ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯದಲ್ಲಿ ಸರ್ಕಾರ ಅತಂತ್ರಗೊಳ್ಳಲು ಕಾರಣರಾದ ಶಾಸಕರಲ್ಲಿ ಒಬ್ಬರಾದ ಕಾಂಗ್ರೆಸ್ ಪಕ್ಷದಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಭದ್ರತೆಯನ್ನು ಒದಗಿಸಲಾಗಿದೆ.ರಾಜೀನಾಮೆಯಿಂದ ಆಕ್ರೋಶಗೊಂಡಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಶಾಸಕರು ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಿದ್ದಾರೆ. ಈಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆ ಎಸ್ ಆರ್ ಪಿ, ಒಂದು ಡಿ ಆರ್ ವ್ಯಾನ್ಸೇರಿದಂತೆ ನೂರಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು …

Read More »

ಕೇಂದ್ರ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಕೋಲಾರ: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಕಾಲೇಜು ವೃತ್ತದಲ್ಲಿ ಮೋದಿ, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ಮಾಡಲಾಯಿತು.ಆಪರೇಷನ್ ಕಮಲ ಮೂಲಕ ಶಾಸಕರ ಖರೀದಿಗೆ ಇಳಿದಿರುವ ಯಡಿಯೂರಪ್ಪ ವಿರುದ್ಧವೂ ಪ್ರತಿಭಟನಾನಿರತರು ಕಿಡಿ ಕಾರಿದರು.ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿಯೂ ಆಕ್ರೋಶ ಹೊರಹಾಕಿದರು.

Read More »

ಅಪರಿಚಿತ ವೃದ್ಧನ ಶವ ಪತ್ತೆ

ಆನೇಕಲ್: ಅಪರಿಚಿತ ವೃದ್ದನ ಶವ ಪತ್ತೆವುಬಆನೇಕಲ್ ನ ರೈಲ್ವೆ ಹಳಿ ಬಳಿ‌ ಪತ್ತೆಯಾಗಿದೆ.ಮೃತ ವೃದ್ಧ ಸಮಾರು ೫೦- ೬೦ ವರ್ಷದವರಾಗಿರಬಹುದು. ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯ ಆನೇಕಲ್ ರೈಲ್ವೆ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ .

Read More »