Breaking News

admin

ಜನರ ಸಮಸ್ಯೆಗೆ ಸ್ಪಂದಿಸಿದ ಸಚಿವ

ನವಲಗುಂದ :  ಇಂದು ಸಚಿವ ಎಸ್ಪಿ ಮುನೇನಕೊಪ್ಪ ಅವರ ಗೃಹ ಕಛೇರಿಯಲ್ಲಿ ನವಲಗುಂದ ಕ್ಷೇತ್ರದ ವಿವಿಧ ಪ್ರದೇಶದಲ್ಲಿ ಆಗಮಿಸಿದ ರೈತರ ಹಾಗೂ ಸಾರ್ವಜನಿಕರ ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಿದರು . ಅಹವಾಲು ಸ್ವೀಕರಿಸಿದ ಸಚಿವರು ರೈತರ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗ್ಗೆಹರಿಸುವುದಾಗಿ ಭರವಸೆ ನೀಡಿದರು .

Read More »

ವರುಣುನ ಆರ್ಭಟ : ಮನೆಗೆ ನುಗ್ಗಿದ ನೀರು

ಅಣ್ಣಿಗೇರಿ : ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವೆಂಕಟೇಶ್ವರ ನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನದಿಯಂತೆ ಹರಿಯುತ್ತಿದೆ .ಇದರಿಂದಾಗಿ ನಿವಾಸಿಗಳಿಗೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಸಾಯಂಕಾಲ ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಹೆಚ್ಚುಮಳೆ ಸುರಿದಿರುತ್ತದೆ . ಇನ್ನೂ ಮಳೆಯಿಂದಾಗಿ ಗಟಾರು ತುಂಬಿಕೊಂಡು ಗಟರ್ ನ ನೀರು ಸಹ ಕೆಲವೊಂದಿಷ್ಟು ಮನೆಗಳ ಒಳಗೆ ನುಗ್ಗಿರುತ್ತದೆ . ಅತಿಯಾದ ಮಳೆ ಗಾಳಿಗೆ ಪಟ್ಟಣದ ಕೆಲವೊಂದಿಷ್ಟು ಮನೆಗಳಿಗೆ ಹಾನಿ ಆಗಿವೆ .

Read More »

ಹುಬ್ಬಳ್ಳಿ ಗಲಭೆ : ಆರೋಪಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ :  ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿಯೋಬ್ಬ ಪೊಲೀಸ್ ಠಾಣೆಯಲ್ಲೇ ಟರ್ಪೆಂಟೇಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ .  ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿ ಹೀಗೆ ಮಾಡಿಕೊಂಡಿದ್ದನೆಂದು ಹೇಳಲಾಗುತ್ತಿದೆ .  ಚಿಕಿತ್ಸೆಗಾಗಿ ಆತನನ್ನ ಕಿಮ್ಸ್‌ಗೆ ದಾಖಲು ಮಾಡಲಾಗಿದೆ . ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ರಾತ್ರಿ ಸಮಯದಲ್ಲಿ ಆರೋಪಿ ಟರ್ಪೆಂಟೇಲ್ ಕೇಳಿದ್ದಾನೆ.ಯಾವುದೋ ಗಾಯಕ್ಕೆ …

Read More »

ಭಾರತ ರತ್ನ ಸರ್. ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಸ್ವೀಕರಿಸಿದ ರಮೇಶ ಮಹಾದೇವಪ್ಪನವರ

ಹುಬ್ಬಳ್ಳಿ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಸರ್.ಎಂ‌. ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹುಬ್ಬಳ್ಳಿಯ ಸಮಾಜ ಸೇವಕ ರಮೇಶ ಮಹಾದೇವಪ್ಪನವರ ಅವರು, ನಿನ್ನೆ ದಿನದಂದು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದರು ಈ ಪ್ರಶಸ್ತಿ ಪ್ರಧಾನದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳು ಬೆಂಗಳೂರು, ರಮೇಶ ಸುರ್ವೆ, ಪ್ರಭುಸ್ವಾಮಿ ಸರಗಣಾಚಾರಿ, ಚಿತ್ರನಟ ಹಾಗೂ ರಂಗಭೂಮಿ ಕಲಾವಿದರಾದ ಶಂಕರ ಭಟ್, ಗಣೇಶರಾವ ಕೇಸರಕರ, ಡಾ. ಕಮನಿದರನ್, ಮೀನಾ, …

Read More »

ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಕುಮಾರಸ್ವಾಮಿಗೆ ಸನ್ಮಾನ

ಹುಬ್ಬಳ್ಳಿ: ಜೆಡಿಎಸ್ ಪಕ್ಷ ಕೈಗೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ನಿನ್ನೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಗಿದೆ . ಅಂಜುಮನ್ ಇಸ್ಲಾಂ ಸಂಸ್ಥೆಯ ಮುಖ್ಯಸ್ಥರಾದ ಯೂಸುಫ್ ಸವಣೂರು , ಅಲ್ತಾಫ್ ನವಾಜ್ ಕಿತ್ತೂರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು . ಅಲ್ಲದೇ ಹುಬ್ಬಳ್ಳಿಯ ಗಲಭೆಯ ಕುರಿತಾಗಿ ಸಮಾಲೋಚನೆ ನಡೆಸಿದರು .

Read More »

ಲಾರಿಗಳ ಮಧ್ಯೆ ಡಿಕ್ಕಿ : ಇಬ್ಬರು ಸಾವು

ಧಾರವಾಡ : ವಿಆರ್ , ಎಲ್ ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಲಾರಿಯ ನಡುವೆ ಇಂದು ಬೆಳಗಿನ ಜಾವ ನಡೆದಿರುವ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದು , ಮತ್ತೋರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿ ಸಂಭವಿಸಿದೆ . ಧಾರವಾಡದಿಂದ ಸವದತ್ತಿಗೆ ಹೋಗುತ್ತಿದ್ದಲಾರಿಗೆ ಎದುರಿಗೆ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ , ಇಬ್ಬರು ಚಾಲಕರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎರಡು ಲಾರಿಗಳ ಮುಂದಿನ ಭಾಗ ಸಂಪೂರ್ಣ …

Read More »

ವರುಣನ ಆರ್ಭಟ : ಮೂವರು ಬಲಿ

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರವೂ ಭಾರೀ ವರ್ಷಧಾರೆಯಾಗಿದ್ದು, ಮಳೆಯ ಆರ್ಭಟಕ್ಕೆ ಮೂವರು ಮೃತಪಟ್ಟಿದ್ದಾರೆ. ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ, ಕೊಡಗು, ಬೆಳಗಾವಿ, ವಿಜಯಪುರ ಸೇರಿದಂತೆ ಹಲವೆಡೆ ಗುಡುಗು-ಸಿಡಿಲು-ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

Read More »

‌ಕೈ ಕೊಟ್ಟ ಬೆಳೆ : ರೈತ ಆತ್ಮಹತ್ಯೆ

‌‌‌ರಬಕವಿ ಬನಹಟ್ಟಿ: ತಾಲ್ಲೂಕಿನ ಯರಗಟ್ಟಿ ಗ್ರಾಮದ ರೈತ ಮಹಾದೇವ ಮಾದರ (35) ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌‌ಮಹಾದೇವ ₹ 2 ಲಕ್ಷ ಸಾಲ ಮಾಡಿದ್ದು, ಸರಿಯಾದ ರೀತಿಯಲ್ಲಿ ಬೆಳೆ ಬಾರದೆ ಇರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.‌ಘಟನಾ ಸ್ಥಳಕ್ಕೆ ಸ್ಥಳೀಯ ಸಿಪಿಐ ಜೆ.ಕರುಣೇಶಗೌಡ, ಪಿಎಸ್ಐ ಸುರೇಶ ಮಂಟೂರ, ಹೆಚ್ಚುವರಿ ಪಿಎಸ್‍ಐ ಪುರದಂರ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗೊಂಡಿದೆ.

Read More »

PSI ಹಗರಣ : ಬಿಜೆಪಿ ನಾಯಕಿ ಬಂಧನ

ಕಲಬುರಗಿ: 545 ಪಿಎಸ್ ಐ ಹುದ್ದೆಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನವಾಗಿದೆ. ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಆಕೆಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್ ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದ ದಿವ್ಯಾ ಮಹಾರಾಷ್ಟ್ರ ಬಿಟ್ಟು ಬೇರೆಲ್ಲು ತೆರಳಿರಲಿಲ್ಲ. ಸದ್ಯ ಸಿಐಡಿ ತಂಡ ಎಲ್ಲಾ ಕಡೆ ಹುಡುಕಾಟ …

Read More »

ರಾಯಚೂರಿನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದ ಕಿಚ್ಚ ಸುದ್ದೀಪ್

ರಾಯಚೂರ : ಜಿಲ್ಲೆಗೆ ನಟ ಕಿಚ್ಚ ಸುದೀಪ್ ಆಗಮಿಸಿ ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದ್ದಾರೆ.. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಟ, ನನ್ನ ಮೂರ್ತಿ ಪ್ರತಿಷ್ಠಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಎಂದಿಗೂ ಶರಣು..ತುಂಬಾ ಜನರು ಸಾಧನೆ ಮಾಡಿದವರು ಇದ್ದಾರೆ. ಅವರಿಗೆ ಗೌರವ ಸಲ್ಲಬೇಕು.. ನಾನು ಇನ್ನೂ ಅಷ್ಟು ದೊಡ್ಡವನಲ್ಲ, ಸಾಧನೆ ಮಾಡಬೇಕಾದದ್ದು ನನಗೆ ತುಂಬಾ ಇದೆ..ಮುಂದಿನ ದಿನಗಳಲ್ಲಿ ಅಂತಹ ದಿನ ಬಂದಾಗ ನನ್ನ ಮೂರ್ತಿ …

Read More »