Breaking News

ಬಾರಿ ರಚಿತಾ, ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ….

ಬುಲ್ ಬುಲ್ ಬೆಡಗಿ ರಚಿತಾ ರಾಮ್ ತಮ್ಮ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌ ಕೊಟ್ಟಿದ್ದಾರೆ. ರಚ್ಚು ಹುಟ್ಟಿದ ಹಬ್ಬಕ್ಕೆ ನೆಚ್ಚಿನ ನಟಿಯನ್ನ ಕಣ್ತುಂಬಿಕೊಳ್ಳಬೇಕು ಎಂದುಕೊಂಡಿದ್ದ ಫ್ಯಾನ್ಸ್‌ಗೆ ಈ ವಿಚಾರ ಕೇಳಿದ್ರೆ ನಿರಾಸೆ ಆಗೋದು ಗ್ಯಾರಂಟಿ. ಈ ಬಾರಿ ರಚಿತಾ, ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ.

ಅಕ್ಟೋಬರ್ 3ರಂದು ರಚಿತಾ ರಾಮ್ ಹುಟ್ಟುಹಬ್ಬವಾಗಿದ್ದು, ಈ ವರ್ಷ ಬರ್ತ್‌ಡೇ ಆಚರಣೆಗೆ ನಟಿ ಬ್ರೇಕ್ ಹಾಕಿದ್ದಾರೆ. ಎಲ್ಲರಿಗೂ ನಮಸ್ಕಾರ, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕಾವೇರಿ ನೀರಿನ ಹೋರಾಟದ ಮಧ್ಯೆ ತಾವು ಹುಟ್ಟುಹಬ್ಬ ಆಚರಿಸೋದು ಸರಿಯಲ್ಲ ಎಂದೆನಿಸಿ ತಮ್ಮ ಬರ್ತ್‌ಡೇ ಆಚರಣೆಯನ್ನು ಕ್ಯಾನ್ಸಲ್‌ ಮಾಡಿದ್ದಾರೆ

Share News

About BigTv News

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *