ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳ ಬಡ ಕುಟುಂಬದ ತಾಯಂದಿರಿಗೆ, ಹೆಣ್ಣುಮಕ್ಕಳಿಗೆ ಹಾಗೂ ಪುಟ್ಟ ಮಕ್ಕಳಿಗೆ ಪವಿತ್ರ ರಂಜಾನ್ ಹಬ್ಬ ಆಚರಣೆ ಸಹಾಯ ಹಸ್ತ ನೀಡಲು ಶಾಸಕ ಜಮೀರ್ ಖಾನ್ ಮುಂದಾಗಿದ್ದಾರೆ. ಇಂದು ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಸ್ಟೇಷನ್ ಹತ್ತಿರದ ಮಸ್ತಾನ್ ಶಾ ಶಾದಿಮಹಲ್ನಲ್ಲಿ ಸಹಾಯ ಹಸ್ತ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರ್ಷಕ್ಕೊಮ್ಮೆ ಬರುವ ಪವಿತ್ರ ರಂಜಾನ್ ಹಬ್ಬದ ಸಮಯದಲ್ಲಿ ಹಬ್ಬ ಆಚರಣೆ ಮಾಡಿ ಪವಿತ್ರ …
Read More »ಅಜಯ್ ದೇವಗನ್, ಸುದೀಪ ಟ್ವೀಟ್ ಸಮರ ರಾಜಕಾರಣದಲ್ಲಿ ತಿರುವು
ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಹೌದೇ ಅಲ್ಲವೇ ಎಂಬ ಬಗ್ಗೆ ಕನ್ನಡದ ನಟ ಸುದೀಪ್ ಮತ್ತು ಹಿಂದಿ ನಟ ಅಜಯ್ ದೇವಗನ್ ಮಧ್ಯೆ ನಡೆದ ಟ್ವೀಟ್ ಸಮರ ಈಗ ರಾಜಕೀಕರಣಗೊಂಡಿದೆ. ಈ ವಿಚಾರವಾಗಿ ಬಿಜೆಪಿಯಲ್ಲೂ ಭಿನ್ನ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕನ್ನಡವೇ ಸಾರ್ವಭೌಮ ಭಾಷೆ. ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು’ ಎನ್ನುವ ಮುಖೇನ ಸುದೀಪ್ ಅವರನ್ನು ಬೆಂಬಲಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ …
Read More »ಜೆಡಿಎಸ್ ಜಲಧಾರೆ ಅಭಿಯಾನ; ಮಹಿಳೆಯರಿಂದ ಕುಂಭಮೇಳ
ಹುಬ್ಬಳ್ಳಿ: ಇಡೀ ರಾಜ್ಯಾದ್ಯಂತ ಜೆಡಿಎಸ್ ಪಕ್ಷದಿಂದ ಜಲಧಾರೆ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಈ ಅಂಗವಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಧಾರವಾಡ ಜಿಲ್ಲಾ ಮಹಿಳಾ ಅಧ್ಯಕ್ಷೆ ಶೋಭಾ ಪಾಲವೈ ಅವರ ನೇತ್ರತ್ವದಲ್ಲಿ ನೂರಾರು ಮಹಿಳೆಯರು ಕುಂಭಮೇಳ ಮೂಲಕ ಜಲಧಾರೆಗೆ ಚಾಲನೆ ನೀಡಿದರು. ನಗರದ ಹಳೇ ಹುಬ್ಬಳ್ಳಿಯಿಂದ ನೂರಾರು ಮಹಿಳೆಯರು ಸೇರಿಕೊಂಡು ರಸ್ತೆಯ ಮೂಲಕ ದುರ್ಗದಬೈಲ್ ದಿಂದ ಮೂರುಸಾವಿರ ಮಠದ ವರೆಗೆ ಪಾದಯಾತ್ರೆ …
Read More »ಹಿಂದಿ ಹೇರಿಕೆಯ ತಂತ್ರ ಸರಿಯಲ್ಲ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಹುಬ್ಬಳ್ಳಿ: ಸಿನಿಮಾಗೆ ಯಾವುದೇ ಭಾಷೆ ಇಲ್ಲ. ಭಾಷೆ ಇಲ್ಲದ ಭಾವನಾತ್ಮಕ ಚಿತ್ರಣವೇ ಈ ಸಿನಿಮಾ. ಇಲ್ಲಿ ಯಾವುದೇ ರೀತಿಯಲ್ಲಿ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕುವುದು ಸರಿಯಲ್ಲ. ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಭಾಷೆಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಜಲಧಾರೆ ಅಭಿಯಾನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ವೇಳೆಯಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಭಾಷೆಯನ್ನು ಮತ್ತೊಂದು ಬಾಷೆಯ ಮೇಲೆ ಹೇರಿಕೆ ಮಾಡುವುದು ಸರಿಯಲ್ಲ ಎಂದರು. …
Read More »ಹುಬ್ಬಳ್ಳಿಯ ಘಟನೆ ಪೂರ್ವನಿಯೋಜಿತ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು : ಕುಮಾರಸ್ವಾಮಿ
ಹುಬ್ಬಳ್ಳಿ :ಹುಬ್ಬಳ್ಳಿಯ ಘಟನೆ ಪೂರ್ವನಿಯೋಜಿತ ಎನ್ನೋದು ಗೊತ್ತಾಗಿದೆ. ಎಲ್ಲೋ ಒಂದು ಕಡೆ ಯಾರೋ ಕರೆ ಕೊಡ್ತಾರೆ. ಅವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಕರವಾಳಿಯ ಒಂದು ಜಿಲ್ಲೆಯಲ್ಲಿ ಸಮವಸ್ತ್ರದ ವಿಷಯ ಇಡೀ ರಾಜ್ಯಕ್ಕೆ ಹಬ್ಬಿತ್ತು. ಅದಾದ ನಂತರ ಭಾವೈಕತ್ಯೆ ಕೆಡಿಸೋ ಕೆಲಸಕ್ಕೆ ಕೆಲ ಸಂಘಟನೆಗಳು ಕೈ ಹಾಕಿದ್ದವು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಯೂ ಯುವಕನ ವಿವಾದ್ಮತಕ ಪೋಸ್ಟ್, ಮಸೀದಿ ಮೇಲೆ ಲೇಸರ್ …
Read More »ಕೋವಿಡ್ 4 ನೇ ಅಲೆಯ ಭೀತಿ ಹಿನ್ನೆಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ : ಬೊಮ್ಮಾಯಿ
ಹುಬ್ಬಳ್ಳಿ : ಹಿಂದಿ ಭಾಷೆ ಹೇರಿಕೆ ವಿಚಾರ. ನಟ ಸುದೀಪ್ ಹೇಳಿದ್ದು ಸರಿಯಿದೆ. ಭಾಷಾವಾರು ಪ್ರಾಂತವಾರು ಆದಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೇ ಸಾರ್ವಭೌಮವಾಗಿದೆ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 4 ನೇ ಅಲೆಯ ಭೀತಿ ಹಿನ್ನೆಲೆ ಟೆಸ್ಟ್ ಗಳನ್ನ ಮತ್ತೆ ಜಾಸ್ತಿ ಮಾಡುತ್ತೇವೆ. 8500 ಜಿನೋಮ್ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ. ಸಾರಿ ,ಐ …
Read More »ಸರ್ಕಾರದ ವಿರುದ್ಧ ಗರಂ ವಿದ್ಯಾರ್ಥಿಗಳು
ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಅವ್ಯವಾಹರ ನಡೆಯುತ್ತಿರುವ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ ನಗರದ ತಹಶಿಲ್ದಾರರ ಕಚೇರಿ ಎದುರಿಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟಪ್ರತಿಭಟನೆ ಮಾಡಿ, ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯದಲ್ಲಿ ಪಿಎಸ್ಐ ಹಗರಣ ಹೊರ ಬಂದಿದೆ. ಅದೇ ರೀತಿ ಹಲವಾರು ಸರ್ಕಾರಿ ನೌಕರಿಗಳಲ್ಲಿ ಪರ್ಸಂಟೇಜ್ ಆಧಾರದಲ್ಲಿ …
Read More »ತೆರಿಗೆ ನಿರ್ಧಾರಕ್ಕೆ ಬೇಸತ್ತು ಕೋರ್ಟ್ ಮೆಟ್ಟಿಲೇರಿದ ನಗರದ ವಾಣಿಜ್ಯೋದ್ಯಮ ಸಂಸ್ಥೆ
ಹುಬ್ಬಳ್ಳಿ: ಈಗಾಗಲೇ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇದರ ನಡುವೆ ಆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳದ ಶಾಕ್ ನೀಡಿದೆ. ಇದರ ವಿರುದ್ಧ ಅಲ್ಲಿನ ಚೆಂಬರ್ ಆಫ್ ಕಾಮರ್ಸ್ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬಿಸಲು ಸಿದ್ದವಾಗಿದೆ. ಹು-ಧಾ ಮಹಾನಗರ ಪಾಲಿಕೆ ರಾಜ್ಯದ ಅತಿದೊಡ್ಡ ಮಹಾನಗರ ಪಾಲಿಕೆಯ ಹೆಗ್ಗಳಿಕೆ ಪಾತ್ರವಾಗಿದೆ. ಈ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.37 ರಿಂದ ಶೇ.900 ರಷ್ಟು ಹೆಚ್ಚಳ ಮಾಡಿದ್ದು, ಇದು ಸಂಪೂರ್ಣ …
Read More »ಏ. 30ವರಗೆ ತೌಫಿಲ್ ಮುಲ್ಲಾ ನ್ಯಾಯಾಂಗ ಬಂಧನ: ನಾಲ್ಕನೇ ಹೆಚ್ಚು ನ್ಯಾಯಾಲಯ ಆದೇಶ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಫಿಲ್ ಮುಲ್ಲಾ ಎಂಬಾತನನ್ನು ಇಂದು ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ಇಂದು ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬೆನ್ನಲ್ಲೇ ನ್ಯಾಯಾಲಯ ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನ ಆದೇಶ ನೀಡಿದೆ. ಇನ್ನೂ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಶಿರ್ …
Read More »ರಾಜ್ಯ ಹೆದ್ದಾರಿ ಬಳಿ ಕಸದ ರಾಶಿ : ಕಣ್ಣಿದ್ದು ಕುರುಡಾದ ಅಧಿಕಾರಿಗಳು
ಹುಬ್ಬಳ್ಳಿ: ಹುಬ್ಬಳ್ಳಿ – ಲಕ್ಷೇಶ್ವರ ರಾಜ್ಯ ಹೆದ್ದಾರಿ ಬಳಿಯ ನೂಲ್ವಿ ಕ್ರಾಸ್ ಸಂಪೂರ್ಣ ತ್ಯಾಜ್ಯ ವಿಲೇವಾರಿ ತಾಣವಾಗಿದೆ . ಹೀಗಾಗಿ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ರೋಗದ ಭೀತಿ ಎದುರಾಗಿದೆ. ನೂಲ್ವಿ ಕ್ರಾಸ್ ಬಯಲಿನಲ್ಲಿ ಎಲ್ಲೆಂದರಲ್ಲಿ ಕ ರಾಶಿ ಬಿದ್ದಿದ್ದು ಸಾರಾಯಿ ಬಾಟಲ್ , ತರಕಾರಿ ತ್ಯಾಜ್ಯ , ಹಣ್ಣು – ಹಂಪಲುಗಳ ತ್ಯಾಜ್ಯ ಸೇರಿ ಮಾಂಸ – ಮೊಟ್ಟೆಯ ತ್ಯಾಜ್ಯ ಎಸೆಯಲಾಗಿದೆ . ಹಾಗೂ ರಸ್ತೆಯ ಇನ್ನೊಂದು ಬದಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





